ಕೊಲ್ಲಾಪುರ:ಮಾರಕ ಕರೊನಾ ವೈರಸ್​ ಎಲ್ಲರನ್ನೂ ಹೇಗೆ ಭಯಭೀತಿಗೊಳಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ಬೈಕ್​ ಸವಾರನೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಸೀನಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿನ ಗುರುವಾರ ನಡೆದಿದೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.​
ವಿಡಿಯೋದಲ್ಲಿ ಏನಿದೆ?:ಬೈಕ್​ ಸವಾರರು ಮತ್ತೊಬ್ಬ ಬೈಕ್​ ಸವಾರ ಜತೆ ರಸ್ತೆ ಪಕ್ಕದಲ್ಲಿ ಚರ್ಚೆ ನಡೆಸುವುದನ್ನು ಕಾಣಬಹುದಾಗಿದೆ. ಯಾವುದೇ ಕರವಸ್ತ್ರವನ್ನು ಬಳಸದೇ ಸೀನುವುದರಿಂದ ಕರೊನಾ ವೈರಸ್​ ಹರಡುವ ಸಾಧ್ಯತೆ ಇದೆ ಎಂಬ ವಾಗ್ವಾದ ನಡೆಯುವಾಗ, ಅದು ತಾರಕಕ್ಕೇರಿ ಸೀನಿದ ವ್ಯಕ್ತಿಯ ಮೇಲೆ ಇತರರು ಹಲ್ಲೆ ನಡೆಸಿದ್ದಾರೆ.
ಈ ಘಟನೆಯಿಂದ ಟ್ರಾಫಿಕ್​ ಜಾಮ್​ ಕಿರಿಕಿರಿಯು ಸಂಚಾರರಿಗೆ ಅನುಭವವಾಗಿದೆ. ಆದರೆ, ಘಟನೆ ಕುರಿತು ಯಾವೊಬ್ಬರು ಬಂದು ದೂರು ದಾಖಲಿಸಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಈವರೆಗೂ 49 ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಓರ್ವ ಮೃತಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕರೊನಾ ವೈರಸ್​ ಸೋಂಕಿತ ವ್ಯಕ್ತಿಯ ಉಗುಳುವಿಕೆ, ಸೀನುವಿಕೆ, ಕೆಮ್ಮುವಿಕೆ ಅಥವಾ ದೈಹಿಕ ಸಂಪರ್ಕದಿಂದ ಹರಡುತ್ತದೆ ಎಂದು ಎಚ್ಚರಿಸಿದೆ.(ಏಜೆನ್ಸೀಸ್​)
ಇಟಲಿಯಲ್ಲಿ ಕರೊನಾದಿಂದ ಮೃತರಾದ ಶೇ. 99 ರೋಗಿಗಳಲ್ಲಿ ಮೊದಲೇ ಕಾಯಿಲೆ ಇತ್ತು: ನೂತನ ಸಂಶೋಧನೆ

ಮಾ.22ರ ‘ಜನತಾ ಕರ್ಫ್ಯೂ’ ದಿನದಂದು ಸಂಜೆ 5ಗಂಟೆಗೆ 5 ನಿಮಿಷ ಮೀಸಲಿಡಿ…; ಪ್ರಧಾನಿ ಮೋದಿಯವರು ಹೀಗೆ ಹೇಳಿದ್ದೇಕೆ ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
