ಜೈಪುರ: ವರನಿಗೆ 56. ವಧುವಿಗೆ 50 ವರ್ಷ. ಇಬ್ಬರದ್ದೂ 20 ವರ್ಷದ ಬಾಂಧವ್ಯ. ಇಂಡಿಯನ್ ವೆಡ್ಡಿಂಗ್ ಕನಸು ನನಸು ಮಾಡುವುದಕ್ಕಾಗಿ ಪೂರ್ವನಿಗದಿತ ಯೋಜನೆ ಪ್ರಕಾರ ಮಾರ್ಚ್ 3ರಂದು ಜೈಪುರಕ್ಕೆ ಕಾಲಿಟ್ಟರು. ಅಲ್ಲಿಂದ ಶಾಪಿಂಗ್ ಎಲ್ಲ ಮುಗಿಸಿ ಮಾರ್ಚ್​ 5ರಂದು ಬಿಕಾನೇರ್​ಗೆ ಹೊರಡುವವರಿದ್ದರು.
ವರನ ಹೆಸರು ಆಂಡ್ರಿಯಾ ಬೆಲ್ಲಿ, ವಧು ಆಂಟೊನೆಲ್ಲಾ ಸ್ಕಾನೊ. 20 ವರ್ಷಗಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಅವರು ಭಾರತೀಯ ಶೈಲಿಯಲ್ಲಿ ಸಾಂಪ್ರದಾಯಿಕವಾಗಿ ಮದುವೆ ಆಗಲು ಬಯಸಿದ್ದರು. ಹೀಗಾಗಿ ಕಳೆದ ವರ್ಷ ಫೆಬ್ರವರಿಯಲ್ಲೇ ಬಿಕಾನೇರ್​ಗೆ ಆಗಮಿಸಿ ಮದುವೆಗೆ ಹಾಲ್​, ಮ್ಯೂಸಿಕ್ ಬ್ಯಾಂಡ್​, ಪುರೋಹಿತರು, 150 ಅತಿಥಿಗಳಿಗೆ ಬೇಕಾದ ಎಲ್ಲವನ್ನೂ ಮುಂಗಡ ಕಾಯ್ದಿರಿಸಿ ಹೊರಟಿದ್ದರು. ಇದರ ಪ್ರಕಾರ, ಮಾರ್ಚ್​ 7ರಂದು ಮದುವೆ ನಿಗದಿಯಾಗಿತ್ತು. ಪೂರ್ವನಿಗದಿತ ಕಾರ್ಯಕ್ರಮದಂತೆ ಅವರು ಮಾರ್ಚ್ 3ಕ್ಕೆ ಜೈಪುರಕ್ಕೆ ಆಗಮಿಸಿ ಶಾಪಿಂಗ್ ಎಲ್ಲ ಮುಗಿಸಿದ್ದರು. ಅಲ್ಲಿ ಅವರಿಗೆ ಮದುವೆ ವ್ಯವಸ್ಥೆ ಉಸ್ತುವಾರಿ ಹೋಟೆಲ್​ ಕಿಶನ್ ಪ್ಯಾಲೇಸ್​ನ ಮಹೇಂದ್ರ ಸಿಂಗ್ ಶೇಖಾವತ್​ ಜತೆಯಾಗಿದ್ದರು. ಇನ್ನೇನು ಬಿಕಾನೇರ್​ಗೆ ಹೊರಟ ವೇಳೆ, ಜಿಲ್ಲಾಧಿಕಾರಿಯವರ ಸಂದೇಶ ಬಂತು. ಇಟಲಿಯ ಜೋಡಿ ಕೂಡಲೇ ದೆಹಲಿಗೆ ತೆರಳಿ ಅವರ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು ಎಂಬುದು ಸಂದೇಶದ ಸಾರ. ಇದು ಕೇಂದ್ರ ಸರ್ಕಾರದ ಆದೇಶ ಪ್ರಕಾರ ಬಂದಿತ್ತು ಎಂದು ಶೇಖಾವತ್ ಹೇಳಿದರು.
ಇಟಲಿಯವರ ಜತೆಗೆ ಪ್ರಯಾಣಿಸಿದ ಕಾರಣ ಮಾರ್ಚ್​ 4ರಂದು ಆರೋಗ್ಯ ಇಲಾಖೆ ಅಧಿಕಾರಿಗಳ ಎದುರು ಹಾಜರಾಗುವಂತೆ ಅವರಿಗೂ ಸೂಚನೆ ಇತ್ತು. ಇಟಲಿಯಲ್ಲಿ ಸೋಂಕು ವಿಪರೀತ ಹರಡಿದ ಕಾರಣ ಈ ರೀತಿ ನಿರ್ಣಯ ತೆಗೆದುಕೊಳ್ಳದೆ ಬೇರೆ ದಾರಿ ಇಲ್ಲ. ಅವರ ವಿವಾಹ ಈಗ ರದ್ದಾಗಿದೆ ಎಂಬುದನ್ನು ವಿವರಿಸುತ್ತಾರೆ ಆರೋಗ್ಯ ಇಲಾಖೆಯ ಮುಖ್ಯಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್.
ಈ ನಡುವೆ, ಸರ್ಕಾರದ ಆದೇಶದಲ್ಲಿ ಬದಲಾವಣೆ ಆಗಿತ್ತು. ಇಟಲಿ ಜನ ದೆಹಲಿಗೆ ಬರಬೇಕಾಗಿಲ್ಲ. ಇರುವಲ್ಲಿಯೇ ಜಿಲ್ಲಾಧಿಕಾರಿಗಳನ್ನು ಭೇಟಿಯಾದರೆ ಸಾಕು ಎಂಬುದು ಆ ಆದೇಶದ ಸಾರವಾಗಿತ್ತು. ಫೆಬ್ರವರಿ 21-28ರ ಅವಧಿಯಲ್ಲಿ ರಾಜಸ್ಥಾನದಲ್ಲಿ ಪ್ರವಾಸ ಮಾಡಿದ್ದ 17 ಪ್ರವಾಸಿಗರಿಗೆ ಸೀಮಿತವಾದ ಸಂದೇಶ ಮೊದಲನೆಯದಾಗಿತ್ತು.
ಬೆಲ್ಲಿಯ ಸಹೋದರಿ ಪೌಲಾ ಬೆಲ್ಲಿ ಪೋರ್ಚುಗೀಸ್ ಪ್ರಜೆ ಕೂಡ ಬಿಕಾನೇರ್​ಗೆ ಬಂದು ಬಾಕಿ ಹಣ ಪಾವತಿಸಿ ಕರೋನಾ ಸೋಂಕಿಗೆ ಸಂಬಂಧಿಸಿ ಅಧಿಕಾರಿಗಳ ನಡುವೆ ಆದ ಸಂವಹನ ಲೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮದುವೆಯ ಕನಸೊಂದು ಕಮರಿ ಹೋದ ಬಗ್ಗೆ ವಿಷಾದ, ನೋವು ಅಲ್ಲಿ ವ್ಯಕ್ತವಾಗಿತ್ತು. (ಏಜೆನ್ಸೀಸ್)
ಬೆದರಿಕೆಗೆ ನಟಿ ನಮಿತಾ ಡೋಂಟ್ ಕೇರ್: ಬೆದರಿಸಿದಾತನೇ ಪರಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 11 =
Remember me
