ಭಂಗ್ಡಿ:ವಿದೇಶದಿಂದ ಬಂದವರನ್ನು, ಅವರ ಸಂಪರ್ಕಕ್ಕೆ ಹೋದವರನ್ನೆಲ್ಲ ಹೋಂ ಕ್ವಾರೆಂಟೈನ್​ನಲ್ಲಿ ಇಡಲಾಗುತ್ತಿದೆ. ಹಾಗೇ ಯಾರಲ್ಲಾದರೂ ಸೋಂಕು ದೃಢಪಟ್ಟಿದ್ದರೆ, ಅವರ ಸಂಪರ್ಕಕ್ಕೆ ಹೋದವರನ್ನೆಲ್ಲ ಟ್ರ್ಯಾಕ್​ ಮಾಡಿ, ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಎಲ್ಲ ರಾಜ್ಯಗಳ ಸರ್ಕಾರಗಳೂ ಸೂಚನೆ ನೀಡುತ್ತಿವೆ.
ಈ ಕ್ವಾರೆಂಟೈನ್​ನಲ್ಲಿ ಲಕ್ಷಾಂತರ ಮಂದಿ ಇದ್ದಾರೆ. ಅನೇಕರು ತಮ್ಮ ಮನೆಯಲ್ಲೇ ಇದ್ದಾರೆ. ಹಾಗೇ ಅಲ್ಲಲ್ಲಿ ಒಂದು ಹೋಟೆಲ್​ಗಳೂ ಕೂಡ ತಮ್ಮ ರೂಂಗಳನ್ನು ಕ್ವಾರೆಂಟೈನ್​ ವ್ಯವಸ್ಥೆಗೆ ಬಿಟ್ಟುಕೊಟ್ಟಿವೆ.
ಆದರೆ ದೀದಿ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಏಳು ಜನ ಯುವಕರು ಕಳೆದ ಐದು ದಿನಗಳಿಂದ ಮಾವಿನ ಮರದ ಮೇಲೆ ಕ್ವಾರಂಟೈನ್​ನಲ್ಲಿ ಇದ್ದಾರೆ. ಇದೊಂದು ಸ್ವಲ್ಪ ವಿಚಿತ್ರ ಎನಿಸಿದರೂ ಸತ್ಯ.
ಪುರುಲಿಯಾ ಜಿಲ್ಲೆಯ ಭಂಗ್ಡಿ ಗ್ರಾಮದ ಹೊರವಲಯದಲ್ಲಿರುವ ಒಂದು ದೊಡ್ಡ ಮಾವಿನ ಮರದಲ್ಲಿ ಏಳು ಮಂದಿ ಯುವಕರು ಪ್ರತ್ಯೇಕವಾಗಿದ್ದಾರೆ. 14 ದಿನಗಳ ಕಾಲ ಅವರು ಕ್ವಾರೆಂಟೈನ್​ನಲ್ಲಿ ಇರಬೇಕು. ಈಗಾಗಲೇ ಐದು ದಿನವನ್ನು ಪೂರೈಸಿದ್ದಾರೆ.ಭೂಮಿಯಿಂದ 8-10 ಅಡಿ ಎತ್ತರದಲ್ಲಿ ಮರದ ಕೊಂಬೆಗಳ ಮೇಲೆ ಇವರಿಗೆ ಉಳಿಯಲು ಹಳ್ಳಿಗರೇ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಬಿದಿರಿನಿಂದ ತಯಾರಿಸಿದ ಸಣ್ಣ ಮಂಚಗಳನ್ನು ಮರದ ಕೊಂಬೆಗಳಿಗೆ ಕಟ್ಟಲಾಗಿದೆ. ಅದಕ್ಕೆ ಪ್ಲಾಸ್ಟಿಕ್ ಶೀಟ್​ಗಳನ್ನು ಹಾಕಿ ಭದ್ರ ಮಾಡಲಾಗಿದೆ ಮತ್ತು ಸೊಳ್ಳೆ ಪರಮರದ ದೆಗಳನ್ನೂ ಅಳವಡಿಸಲಾಗಿದೆ.
ಅಷ್ಟೇ ಅಲ್ಲ ಮರಕ್ಕೆ ವಿದ್ಯುತ್​ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿ ಮೊಬೈಲ್​ಗಳನ್ನು ಚಾರ್ಜ್​ಗೆ ಹಾಕಲು ಪ್ಲಗ್​ಗಳನ್ನು ಕಲ್ಪಿಸಲಾಗಿದೆ. ಇಷ್ಟೆಲ್ಲ ಮಾಡಿ, ಯುವಕರಿಗೆ ಮಾಸ್ಕ್​ನ್ನೂ ಕೊಟ್ಟು ​ಮರದ ಮೇಲೆ ಕೂರಿಸಲಾಗಿದೆ. ಹಾಗೇ ಯುವಕರು ಟಾಯ್ಲೆಟ್​ಗೆ ಹೋಗಬೇಕಾದರೆ, ಬಟ್ಟೆ ತೊಳೆಯುವಾಗ ಮತ್ತು ಊಟದ ಸಂದರ್ಭದಲ್ಲಿ ಮಾತ್ರ ಕೆಳಗೆ ಬರುತ್ತಿದ್ದಾರೆ.
ಮರದ ಮೇಲೆ ಇರುವ ಏಳೂ ಮಂದಿ ವಲಸೆ ಕಾರ್ಮಿಕರು. ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಅವರು ಕರೊನಾ ಆತಂಕದ ಮಧ್ಯೆ ಊರಿಗೆ ಆಗಮಿಸಿದ್ದರು. ಚೆನ್ನೈನಿಂದ ರೈಲಿನಲ್ಲಿ ಬಂದ ಅವರು ನೇರವಾಗಿ ಬಲರಾಂಪುರ ಪೊಲೀಸ್ ಸ್ಟೇಶನ್​ಗೆ ತೆರಳಿ, ಅಲ್ಲಿಂದ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಹೋಗಿ ಪ್ರಾಥಮಿಕ ತಪಾಸಣೆ ಮಾಡಿಸಿಕೊಂಡಿದ್ದಾರೆ. ರೈಲಿನಲ್ಲಿ ಆಗಮಿಸಿದ ಕಾರಣ ಹೋಂ ಕ್ವಾರೆಂಟೈನ್​ನಲ್ಲಿ ಇರುವಂತೆ ವೈದ್ಯರು ಸೂಚಿಸಿದರು.
ಆದರೆ ಹಳ್ಳಿಯತ್ತ ಬರುತ್ತಿದ್ದಂತೆ ಅವರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಯಾವ ಕಾರಣಕ್ಕೂ ನಾವು ರಿಸ್ಕ್​ ತೆಗೆದುಕೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ. ಮತ್ತೆಲ್ಲೂ ಕಾಣದೆ ಮಾವಿನ ಮರದ ಮೇಲೆ ಹಳ್ಳಿಯ ಜನರೇ ಸೇರಿ ಉಳಿಯುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಎಲ್ಲರೂ 20-24ವಯಸ್ಸಿನವರೇ. ಮರದ ಮೇಲೆ ಇರುವ ತಮ್ಮ ಮಕ್ಕಳಿಗಾಗಿ ಕುಟುಂಬದವರೇ ಆಹಾರ ತಂದು ಕೊಡುತ್ತಿದ್ದಾರೆ. ಅದೂ ದೂರದಿಂದಲೇ ನೀಡಲಾಗುತ್ತಿದೆ. ಸ್ನಾನ, ಬಟ್ಟೆತೊಳೆಯಲೆಂದು ಮರದ ಬಳಿಯೇ ವ್ಯವಸ್ಥೆ ಮಾಡಿಕೊಡಲಾಗಿದೆ.ಚೆನ್ನೈನಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಯುವಕರು ಈಗ ಸ್ವಂತ ಹಳ್ಳಿಗೆ ಬಂದು ಮರದ ಮೇಲೆ ವಾಸಿಸುವಂತಾಗಿದೆ. ಅವರಿಗೆ ಮರದ ಮೇಲೆಯೇ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದು ಹೇಳುವ ಹಳ್ಳಿಗರು ತಮ್ಮದೇ ಆದ ರೀತಿಯಲ್ಲಿ ವಾದ ಮಾಡುತ್ತಿದ್ದಾರೆ. ಸೊಳ್ಳೆ ಪರದೆ ಕೊಟ್ಟಿದ್ದೇವೆ, ಮಳೆ ಬಂದರೆ ತೊಂದರೆಯಾಗದಂತೆ ಪ್ಲಾಸ್ಟಿಕ್ ಕಟ್ಟಿದ್ದೇವೆ, ಆಹಾರವನ್ನೂ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಯುವಕರೆಲ್ಲ ಚೆನ್ನೈನಲ್ಲಿ ಇದ್ದರು. ರೈಲಿನಲ್ಲಿ ಬರುವಾಗ ಏನಾಗಿದೆಯೋ ಏನೋ. ಅವರೆಲ್ಲ ಈಗ ಐಸೋಲೇಶನ್​ ಪೀರಿಯಡ್​ನಲ್ಲಿ ಇದ್ದಾರೆ. ಹಳ್ಳಿಯೊಳಗೆ ಬಿಟ್ಟುಕೊಂಡು ಅಪಾಯ ತಂದುಕೊಳ್ಳುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಪಾಪ..ಆ ಯುವಕರೋ ಮರದ ಮೇಲೆ ಕುಳಿತು ಮೊಬೈಲ್​ ನೋಡುತ್ತ, ಮಾತನಾಡುತ್ತ ಕಾಲ ಕಳೆಯುತ್ತಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 2 =
Remember me
