ತಿರುವನಂತಪುರ: ಕರೋನಾ ವೈರಸ್ Covid19 ಸೋಂಕು ತಡೆಯುವ ವಿಚಾರದಲ್ಲಿ ನೋ ಪಾಲಿಟಿಕ್ಸ್​. ನಾವೂ ಪಾಲಿಸ್ತೇವೆ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಎಲ್ಲದರಲ್ಲೂ ಪಾಲಿಟಿಕ್ಸ್ ಕಾಣುತ್ತಿದ್ದ ಕೇರಳದ ರಾಜಕೀಯ ಕ್ಷೇತ್ರದಲ್ಲಿ ವಿಶೇಷವಾಗಿ ಎಡರಂಗ ಇದೇ ಮೊದಲ ಸಲ ವಿಷಯಾಧಾರಿತ ನಿಲುವು ತೆಗೆದುಕೊಳ್ಳುವ ಜನ ಹಿತ ತೋರುವ ಪ್ರವೃತ್ತಿಯನ್ನು ಎತ್ತಿಹಿಡಿದಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಧಾನಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸುವ ವಿಚಾರವನ್ನು ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಅಲ್ಲದೆ, ಕರೊನಾ ವೈರಸ್ ಸೋಂಕು ಹರಡುತ್ತಿರುವ ಕಾರಣ ನಾವೀಗ ಅತ್ಯಂತ ಸಂಕಷ್ಟಮಯ ಸನ್ನಿವೇಶದಲ್ಲಿದ್ದೇವೆ. ರಾಜ್ಯದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ ಹೀಗಾಗಿ ಜನತಾ ಕರ್ಫ್ಯೂ ಜಾರಿಯಲ್ಲಿರುವ ವೇಳೆ ಎಲ್ಲರೂ ತಮ್ಮ ಮನೆ ಮತ್ತು ಪರಿಸರವನ್ನು ಸ್ವಚ್ಛತೆಗೊಳಿಸುವಂತೆ ಮತ್ತು ವೈಯಕ್ತಿಕ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸುವಂತೆಯೂ ಅವರು ಕೇರಳೀಯರಿಗೆ ಮನವಿ ಮಾಡಿದ್ದಾರೆ.
ಜನತಾ ಕರ್ಫ್ಯೂಗೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಭಾನುವಾರ ಸಾರ್ವಜನಿಕ ರಸ್ತೆ ಸಾರಿಗೆ ಬಂದ್ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ಅಧಿಕೃತ ಸೂಚನೆಯನ್ನೂ ರವಾನಿಸಿದೆ. ಬಹುಶಃ ಕೇರಳ ರಾಜ್ಯದ ಇತಿಹಾಸದಲ್ಲಿ ಸರ್ಕಾರವೊಂದು ಬಂದ್ ಆಚರಿಸಲು ಸ್ವತಃ ಮುಂದಾಗಿರುವುದು ಇದೇ ಮೊದಲ ಸಲ. ಕೇರಳದಲ್ಲಿ ಸೋಂಕು ಪೀಡಿತರ ಸಂಖ್ಯೆ 37ಕ್ಕೆ ತಲುಪಿದೆ. ಇದರಲ್ಲಿ ಐವರು ವಿದೇಶೀಯರೂ ಸೇರಿದ್ದಾರೆ. (ಏಜೆನ್ಸೀಸ್)
ಜನತಾ ಕರ್ಫ್ಯೂ ಎಂದರೇನು? ಇದು ಹೇಗಿರುತ್ತದೆ..

ಜನತಾ ಕರ್ಫ್ಯೂ ಪರಿಣಾಮಕಾರಿ ಎಂದ ವಿಶ್ವ ಆರೋಗ್ಯ ಸಂಸ್ಥೆ : ನಮ್ಮ ದೇಶದ ಪ್ರಧಾನಿಯವರ ನಡೆಯ ಬಗ್ಗೆ ಪ್ರಶಂಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
