ಬೆಂಗಳೂರು:ಮಹಾಮಾರಿ ಕರೊನಾ ವೈರಸ್​ನಿಂದ ಇನ್ನೇನು ಬಿಡುಗಡೆ ಹೊಂದಲಿದ್ದೇವೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರಿಗೆ ರಾಜ್ಯ ಕರೊನಾ ಟಾಸ್ಕ್​ ಫೋರ್ಸ್​ ನೀಡಿರುವ ವರದಿ ಆಘಾತ ಉಂಟುಮಾಡಿದೆ.
ಇದನ್ನೂ ಓದಿ:ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?
ದೇಶ ಹಾಗೂ ರಾಜ್ಯದಲ್ಲಿ ಸದ್ಯಕ್ಕೆ ಕರೊನಾಸುರ ತನ್ನ ಅಟ್ಟಹಾಸವನ್ನು ಕಡಿಮೆ ಮಾಡುವುದಿಲ್ಲ ಎಂಬುದು ತಿಳಿದುಬಂದಿದೆ. ಡಿಸೆಂಬರ್​ ವೇಳೆಗೆ ಕರೊನಾ ವೈರಸ್​ ಸೋಂಕು ಹೆಚ್ಚಾಗಲಿದ್ದು, ದೇಶದ ಅರ್ಧಕ್ಕರ್ಧ ಜನರಿಗೆ ಸೋಂಕು ತಗುಲುವುದು ಗ್ಯಾರೆಂಟಿ ಎಂದು ರಾಜ್ಯ ಹೆಲ್ತ್​ ಟಾಸ್ಕ್​ ಫೋರ್ಸ್​ ನ್ಯೂಡಲ್​ ಅಧಿಕಾರಿ ಡಾ. ರವಿ ಅವರು ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದು ಶಾಕಿಂಗ್​ ವಿಚಾರವೇನೆಂದರೆ ಬಹುತೇಕ ಜನರಲ್ಲಿ ಸೋಂಕು ತಿಳಿಯುವುದೇ ಇಲ್ಲವಂತೆ. 4ನೇ ಹಂತದ ಲಾಕ್​ಡೌನ್​ ಮೇ 31ಕ್ಕೆ ಮುಗಿಯಲಿದ್ದು, ಆ ಬಳಿಕ ಕರೊನಾ ವೈರಸ್​ ಸಮುದಾಯ ಪ್ರಸರಣವಾಗುವುದರೊಂದಿಗೆ ಜೂನ್​ ನಂತರ ಸೋಂಕಿನ ಪ್ರಕರಣಗಳು ದ್ವಿಗುಣವಾಗುವ ಸಾಧ್ಯತೆ ಇದೆ ಎಂದು ರವಿ ಅವರು ತಿಳಿಸಿದ್ದಾರೆ.
ಖುಷಿ ವಿಚಾರವೂ ಇದೆಶ್ವಾಸಕೋಸಗಳಿಗೆ ಹಾನಿ ಉಂಟುಮಾಡುವ ವೈರಸ್​ಗಳು ಈಗಾಗಲೇ ಸಾಕಷ್ಟು ಬಂದಿವೆ. ಇದು ಕೂಡ ಹಾಗೇ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹೋಗುತ್ತದೆ. ಗುಡ್​ ನ್ಯೂಸ್​ ಏನೆಂದರೆ, ಈ ಸೋಂಕು ಶೇ. 90 ರಷ್ಟು ಜನರಿಗೆ ಬಂದಿದ್ದು ಗೊತ್ತಾಗುವುದಿಲ್ಲ ಹಾಗೂ ಹೋಗುವುದು ಗೊತ್ತಾಗುವುದಿಲ್ಲ ಎಂದರು.
ಇದನ್ನೂ ಓದಿ:ನರೇಗಾ ಅಕ್ರಮ, 43 ನೌಕರರಿಗೆ ಶಿಕ್ಷೆ ಖಾತ್ರಿ: 18 ಸಿಬ್ಬಂದಿ ವಜಾ, 9 ಪಿಡಿಒಗಳ ಸಸ್ಪೆಂಡ್
ಸೋಂಕು ತಡೆಗಟ್ಟುವುದು ಸರ್ಕಾರದ ಜವಾಬ್ದಾರಿಯಲ್ಲ. ಜನರ ಜವಾಬ್ದಾರಿಯಾಗಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ. ಲಾಕ್​ಡೌನ್​ ಸಡಿಲಿಕೆಯಾಗಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಹಾಗೂ ಸ್ಯಾನಿಟೈಸರ್​ ಬಳಕೆ ಸೇರಿದಂತೆ ಅನೇಕ ಉಪಕ್ರಮಗಳನ್ನು ತೆಗೆದುಕೊಂಡು ಸೋಂಕು ತಗುಲುವ ಪ್ರಮಾಣವನ್ನು ತಗ್ಗಿಸಬೇಕೆಂದು ಡಾ. ರವಿ ಸಲಹೆ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)

ಫ್ರೆಂಡ್ಸ್​ ಪಾರ್ಟಿಯಲ್ಲಿ ಬಿಜೆಪಿ ಮುಖ್ಯಸ್ಥನ ಸೊಸೆ ನಿಗೂಢ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 5 =
Remember me
