ನವದೆಹಲಿ:ದೇಶಕ್ಕೆ ವಕ್ಕರಿಸಿರುವ ಮಹಾಮಾರಿ ಕರೊನಾ ವೈರಸ್​ ಸೋಂಕಿನಿಂದ ಇಡೀ ರಾಷ್ಟ್ರಕ್ಕೆ ಬೀಗಮುದ್ರೆ ಬಿದ್ದಿದೆ. ಆರ್ಥಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದ್ದು, ಲಾಕ್​ಡೌನ್​ನಿಂದಾಗಿ ದೇಶಕ್ಕೆ ಸುಮಾರು 9 ಲಕ್ಷ ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಅಲ್ಲದೆ, ಜಿಡಿಪಿ ಬೆಳವಣಿಗೆ ದರ 4ಕ್ಕೆ ಕುಸಿಯಲಿದೆ ಎಂದು ಪರಿಣಿತರು ಅಂದಾಜಿಸಿದ್ದು, ಸದ್ಯ ಆರ್ಥಿಕ ಪ್ಯಾಕೇಜ್​ ಅವಶ್ಯಕತೆ ಇದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತೀಯ ರಿಸರ್ವ್​ ಬ್ಯಾಂಕ್​ ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಪ್ರಕಟಿಸಲಿದ್ದು, ಭಾರಿ ದರ ಕಡಿತ ಮಾಡಲು ಸಜ್ಜಾಗಿದೆ ಮತ್ತು ಹಣಕಾಸಿನ ಕೊರತೆಯ ಗುರಿಗಳನ್ನು ಉಲ್ಲಂಘಿಸಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಮೂರು ವಾರಗಳ ಸಂಪೂರ್ಣ ಲಾಕ್​ಡೌನ್​ ಅನ್ನು ಘೋಷಿಸಿದ್ದಾರೆ. ಕರೊನಾ ವೈರಸ್​ ವೇಗವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಈಕ್ವಿಟಿ ಮಾರುಕಟ್ಟೆಗಳು ಬುಧವಾರದ ವಹಿವಾಟಿನ ಆರಂಭದಲ್ಲಿಯೇ ಶೇ 0.47 ರಷ್ಟು ಕುಸಿದವು.
ಏಪ್ರಿಲ್ ಪರಿಶೀಲನೆಯಲ್ಲಿ ಆರ್‌ಬಿಐ ಶೇಕಡಾ 0.65 ರಷ್ಟು ದರ ಕಡಿತಗೊಳಿಸುವ ಸಾಧ್ಯತೆಯಿದೆ ಮತ್ತು ವರ್ಷದ ಅವಧಿಯಲ್ಲಿ ಬಡ್ಡಿದರಗಳನ್ನು ಶೇಕಡಾ 1 ರಷ್ಟು ಕಡಿತಗೊಳಿಸುತ್ತದೆ ಎಂದು ಅಂದಾಜಿಸಲಾಗಿದೆ.
ಲಾಕ್​​ಡೌನ್​ನಿಂದ ಉಂಟಾಗುವ ಆರ್ಥಿಕ ಪರಿಣಾಮದ ಬಗ್ಗೆ ಭಾರತ ಸರ್ಕಾರವು ಇಲ್ಲಿಯವರೆಗೆ ಮೌನವಾಗಿದೆ. ದಾಳಿಯನ್ನು ಅನ್ನು ತಗ್ಗಿಸಲು ಯಾವುದಾದರೂ ಕ್ರಮಗಳನ್ನು ತೆಗದುಕೊಳ್ಳಿ ಎಂದು ಪರಿಣಿತರ ಸಲಹೆ ನೀಡಿದ್ದಾರೆ.
ಈಗಾಗಲೇ ನೋಟ್​ ಬ್ಯಾನ್​ ಹಾಗೂ ಜಿಎಸ್​ಟಿಯಂತಹ ಕ್ರಮಗಳಿಂದ ಅಸಂಘಟಿತ ವಲಯಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಕೊರನಾ ಪರಿಣಾಮದಿಂದ ಮತ್ತಷ್ಟು ಹೊಡೆತ ಬೀಳಲಿದೆ. ಹೀಗಾಗಿ ಸಣ್ಣ ಉದ್ಯಮಗಳಿಗೆ ಸುಲಭ ಸಾಲ, ಸಾಲ ಪುನರ್ರಚನೆ ಮತ್ತು ನಗದು ವರ್ಗಾವಣೆ ಸೇರಿ ಸಾಧ್ಯವಾಗುವಂತಹ ಕ್ರಮಗಳನ್ನು ಕರೊನಾ ಆರ್ಥಿಕ ಪ್ಯಾಕೇಜ್​ ಅಡಿಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ.(ಏಜೆನ್ಸೀಸ್​)
ಪ್ರಧಾನಿ ಮೋದಿ ಕರೊನಾ ಗಂಭೀರತೆ ಅರ್ಥ ಮಾಡಿಕೊಂಡಿದ್ದಾರೆ, ಸೋಷಿಯಲ್​ ಡಿಸ್ಟನ್ಸ್​ ಪಾಲನೆ ಮಾಡ್ತಿದ್ದಾರೆ…ಹೀಗಿದ್ದಾಗ ನಾವು-ನೀವು?

ರಾಜಮೌಳಿಯ ಬಹುನೀರಿಕ್ಷಿತ ‘ಆರ್​ಆರ್​ಆರ್​’ ಚಿತ್ರದ ಹೆಸರಿನ ಅರ್ಥವೇನು: ಮೋಷನ್ ಪೋಸ್ಟರ್​ನಲ್ಲಿದೆ ಉತ್ತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 1 =
Remember me
