ನವದೆಹಲಿ:ಕರೊನಾ ಸೋಂಕಿತರ ಪ್ರಕರಣಗಳು ಏರುತ್ತಿರುವ ನಡುವೆಯೇ ಔಷಧ ತಯಾರಿಕ ಕಂಪನಿಗಳಿಗೆ ಕೋವಿಡ್​-19 ಪರೀಕ್ಷಾ ಕಿಟ್​ಗಳನ್ನು ತಯಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.
ಔಷಧ ಕಂಪನಿಯ ನಾಯಕರೊಂದಿಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದರು. ವೈದ್ಯಕೀಯ ಸಾಧಗಳು ಮತ್ತು ಔಷಧಗಳ ತಯಾರಿಕೆಗೆ ಈಗಾಗಲೇ ಸರ್ಕಾರ 14000 ಕೋಟಿ ರೂ. ಮೌಲ್ಯದ ಯೋಜನೆಗೆ ಚಾಲನೆ ನೀಡಿದೆ ಎಂದರು. ಹೀಗಾಗಿ ಕರೊನಾ ವೈರಸ್​ ವಿರುದ್ಧದ ಹೋರಾಟಕ್ಕಾಗಿ ಪರೀಕ್ಷಾ ಕಿಟ್​ಗಳನ್ನು ತಯಾರಿಸಲು ಹುರಿದುಂಬಿಸಿದರು.
ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಂವಾದದಲ್ಲಿ ಔಷಧ ಉದ್ಯಮದ ಅನೇಕ ಪಾಲುದಾರರು ಪಾಲ್ಗೊಂಡಿದ್ದರು. ಈ ವೇಳೆ ಕೋವಿಡ್​ -19 ತಡೆಗಟ್ಟು ನಿಟ್ಟಿನಲ್ಲಿ ಆಗಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಭಾರತ ಆರೋಗ್ಯವಾಗಿರಲು ಔಷಧ ಉದ್ಯಮ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ತಿಳಿಸಿದರು. ಅಲ್ಲದೆ, ಹೊಸ ಹೊಸ ಪರಿಹಾರಗಳನ್ನು ಹುಡುಕುವಂತೆ ಹುರಿದುಂಬಿಸಿದರು.
ನಿಮಗೆ ಸಹಾಯ ನೀಡಲು ಸರ್ಕಾರ ಬದ್ಧವಾಗಿದೆ. ಔಷಧ ಉದ್ಯಮಕ್ಕೆ ಬೇಕಾಗಿರುವ ಸಕ್ರಿಯ ಔಷಧ ಪದಾರ್ಥಗಳನ್ನು ಒದಗಿಸುವ ಮತ್ತು ನಿರ್ವಹಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.(ಏಜೆನ್ಸೀಸ್​)
ಕರೊನಾ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ: ಸಿಎಂ ಬಿಎಸ್​ವೈ ಸ್ಪಷ್ಟನೆ

VIDEO| ಜನತಾ ಕರ್ಪ್ಯೂ ಆರಂಭಕ್ಕೂ ಮುನ್ನವೇ ದೇಶದ ಜನತೆಗೆ ಪ್ರಧಾನಿ ಮೋದಿ ಹೇಳಿದ್ದೇನು?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:nine + 15 =
Remember me
