ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕರೊನಾ ವೈರಸ್ ಭಾರತದಲ್ಲಿ ಮತ್ತೆ 23 ಜನರಲ್ಲಿ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 109ಕ್ಕೆ ಏರಿದೆ. ಇದರ ಜತೆಗೆ ವಿಶ್ವದಾದ್ಯಂತ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 6 ಸಾವಿರ ದಾಟಿದ್ದು, 1.60 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ 14 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಅತಿ ಹೆಚ್ಚು ಅಂದರೆ 32 ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಈ ಹಿನ್ನೆಲೆ ಮುಂಬೈನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೇರಳದಲ್ಲಿ 14 ಕರೊನಾ ಪೀಡಿತರು ಪತ್ತೆಯಾಗಿದ್ದು, ಉತ್ತರಪ್ರದೇಶದಲ್ಲಿ 11, ಹರಿಯಾಣ 14 ವಿದೇಶಿ ಪ್ರಜೆಗಳಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿದೆ. ದೇಶಾದ್ಯಂತ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ 11 ಜನರು ಗುಣಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಬಹುತೇಕ ಪ್ರಮುಖ ನಗರಗಳು ಸ್ತಬ್ಧವಾಗಿದ್ದು, ಶಾಲೆ-ಕಾಲೇಜು, ಚಿತ್ರಮಂದಿರ, ಮಾಲ್​ಗಳನ್ನು ಮುಚ್ಚಲಾಗಿದೆ. ಅನೇಕ ಕಂಪನಿಗಳು ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆದೇಶಿಸಿವೆ. ಇಟಲಿಯಲ್ಲಿ ಸಿಲುಕಿದ್ದ 211 ವಿದ್ಯಾರ್ಥಿಗಳು ಸೇರಿ ಒಟ್ಟು 220 ಜನರನ್ನು ರಕ್ಷಿಸಿ ಭಾರತಕ್ಕೆ ಭಾನುವಾರ ಕರೆತರಲಾಗಿದೆ. ಜತೆಗೆ ಇರಾನ್​ನಲ್ಲಿ ಸಿಲುಕಿದ್ದ 234 ಜನರನ್ನೂ ಭಾರತಕ್ಕೆ ಕರೆತರಲಾಗಿದೆ. ಎಲ್ಲರನ್ನೂ ಐಟಿಬಿಪಿ ಶಿಬಿರಗಳಲ್ಲಿ ಇರಿಸಿ 14 ದಿನಗಳ ಕಾಲ ನಿಗಾವಹಿಸಲಾಗುತ್ತದೆ.
ಕರೊನಾ ಪತ್ತೆಗೆ ನಡೆಯುವ ಮೊದಲ ಮತ್ತು ಎರಡನೇ ಪರೀಕ್ಷೆಗಳು ಉಚಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರೊನಾ ಪರೀಕ್ಷೆ ನಡೆಸಲು ನಮ್ಮ ಬಳಿ ಹೆಚ್ಚು ಸಾಮರ್ಥ್ಯವಿದೆ, ಆದರೆ ಪ್ರಸ್ತುತ ಪ್ರತಿದಿನ ಶೇ.10ರಷ್ಟು ಸಾಮರ್ಥ್ಯವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಕರೊನಾ ಭೀತಿ ಹಿನ್ನೆಲೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರು ಗುಂಪುಗಟ್ಟುವುದನ್ನು ತಡೆಯಲು ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಜತೆಗೆ ದರ್ಶನಕ್ಕೆ ಸರತಿಯಲ್ಲಿ ಭಕ್ತರ ನೂಕುನುಗ್ಗಲು ತಡೆಗಟ್ಟಲು ನಿರ್ದಿಷ್ಟ ಸಮಯದ ಸ್ಲಾಟ್​ಗಳ ವ್ಯವಸ್ಥೆ ಮಾಡಲಾಗಿದ್ದು, ಸರದಿಯಲ್ಲಿ ಹೋಗುವವರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಒಬ್ಬರು ಮತ್ತೊಬ್ಬರ ಸಂಪರ್ಕಕ್ಕೆ ಬರುವುದು ಕಡಿಮೆಯಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ.
ಕರೊನಾ ವೈರಸ್ ಪೀಡಿತ ರಾಷ್ಟ್ರಗಳಿಗೆ ಪ್ರಯಾಣಿಸಬೇಡಿ ಎಂದು ಐಸಿಸ್ ಉಗ್ರರಿಗೆ ತಿಳಿಸಿದೆ. ಮಧ್ಯರಾತ್ರಿ ಎಚ್ಚರವಾದರೂ ಒಮ್ಮೆ ಕೈತೊಳೆದುಕೊಂಡು ಮಲಗಿ ಎಂದು ಐಸಿಸ್ ತನ್ನ ಪತ್ರಿಕೆ ‘ಅಲ್ ನಬಾ’ದಲ್ಲಿ ಪ್ರಕಟಿಸಿದೆ.
ಮುಂದಿನ ಕೆಲ ದಿನಗಳಲ್ಲಿ ನಾಸಾ ಹಲವು ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಈ ವೇಳೆ ಸೋಂಕು ಗಗನಯಾತ್ರಿಗಳ ಮೂಲಕ ಬಾಹ್ಯಾಕಾಶ ನಿಲ್ದಾಣ ತಲುಪುವ ಬಗ್ಗೆ ಆತಂಕಗೊಂಡಿದೆ. ಈ ಹಿನ್ನೆಲೆಯಲ್ಲಿ ಗಗನಯಾತ್ರಿಗಳಿಗೆ ಬಾಹ್ಯ ಸಂಪರ್ಕ ತಪ್ಪಿಸಿ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿದೆ.
ಇಲಿ ಮಾಂಸ ಮಾರಾಟ ನಿಲ್ಲಿಸಿದ್ದಕ್ಕೆ ಗೋಳಿಡುತ್ತಿದೆ ಚೀನಾ; ಭಾರತಕ್ಕೆ ಕರೊನಾ ಚಿಂತೆಯಾದರೆ ಚೀನಾಕ್ಕೆ ಇಲಿ ಚಿಂತೆ

FACT CHECK| ಆಲ್ಕೋಹಾಲ್​ ಕುಡಿದ್ರೆ ಕರೊನಾ ಬರಲ್ವಾ? ವೋಡ್ಕಾವನ್ನ ಸ್ಯಾನಿಟೈಸರ್​ ಆಗಿ ಬಳಸಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
