ನವದೆಹಲಿ:200ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಪಸರಿಸಿರುವ ಮಾರಕ ಕರೊನಾ ವೈರಸ್​ಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 2.50 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ ಕರೊನಾ ಸಾವಿನ ಸಂಖ್ಯೆ 1,500 ಗಡಿ ಸಮೀಪಿಸುತ್ತಿದೆ.
ಇದನ್ನೂ ಓದಿ:ಜಗತ್ತು ಕರೊನಾ ವಿರುದ್ಧ ಹೋರಾಡ್ತಿದ್ರೆ ‘ಕೆಲವರು’ ಭಯೋತ್ಪಾದನೆ ಹರಡುತ್ತಿದ್ದಾರೆ: ಪಾಕ್‌ಗೆ ಮೋದಿ ಚಾಟಿ
ಕರೊನಾ ಅಟ್ಟಹಾಸಕ್ಕೆ ನಲುಗಿರುವ ಅಮೆರಿಕದಲ್ಲಿ ಈವರೆಗೆ 69 ಸಾವಿರ ಜನರು ಸಾವನ್ನಪ್ಪಿದ್ದು, 11.94 ಲಕ್ಷ ಸೊಂಕು ಪ್ರಕರಣ ವರದಿಯಾಗಿದೆ. ಇಟಲಿ ಮತ್ತು ಬ್ರಿಟನ್​ನಲ್ಲಿ ತಲಾ 28 ಸಾವಿರ ಜನರು ಮೃತಪಟ್ಟಿದ್ದು, ಸ್ಪೇನ್​ನಲ್ಲಿ 25 ಹಾಗೂ ಫ್ರಾನ್ಸ್​ನಲ್ಲಿ 24 ಸಾವಿರ ಮಂದಿ ಅಸುನೀಗಿದ್ದಾರೆ. ಕಳೆದ 24 ತಾಸಿನಲ್ಲಿ ವಿಶ್ವಾದ್ಯಂತ 865 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2.49 ಲಕ್ಷಕ್ಕೆ ಏರಿಕೆಯಾಗಿದೆ. ಜತೆಗೆ 26 ಸಾವಿರ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 35.90 ಲಕ್ಷಕ್ಕೆ ಮುಟ್ಟಿದೆ. ಈವರೆಗೆ 11.65 ಲಕ್ಷ ಜನರು ಸೋಂಕು ಮುಕ್ತರಾಗಿದ್ದಾರೆ. ಆದಾಗ್ಯೂ 21.75 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 49 ಸಾವಿರಕ್ಕಿಂತ ಹೆಚ್ಚು ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.
ದೇಶದಲ್ಲೂ ಕರೊನಾ ಹಾವಳಿ ಹೆಚ್ಚಾಗಿದ್ದು, ಕಳೆದ 24 ತಾಸಿನಲ್ಲಿ 50 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,441ಕ್ಕೆ ಏರಿದೆ. ಜತೆಗೆ ಹೊಸದಾಗಿ 1,577 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 44,358ಕ್ಕೆ ಏರಿದೆ. ದೇಶದಲ್ಲಿ ಈವರೆಗೆ 12,283 ರೋಗಿಗಳು ಗುಣಮುಖರಾಗಿದ್ದು, ಇನ್ನೂ 30,558 ಸಕ್ರಿಯ ಪ್ರಕರಣಗಳಿವೆ. ದೆಹಲಿ, ಮುಂಬೈ ಸೇರಿದಂತೆ ಕೆಲ ಮೆಟ್ರೊ ನಗರಗಳಲ್ಲಿ ಜನರು ಸರಿಯಾಗಿ ಲಾಕ್​ಡೌನ್ ಮಾರ್ಗಸೂಚಿಗಳನ್ನು ಪಾಲಿಸದ ಹಿನ್ನೆಲೆ ಅಲ್ಲಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆರೋಪಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್​ಒ) ಭಾರತಕ್ಕೆ 100 ಡೋಸ್ ರೆಮ್ಡಿಸಿವಿರ್ ಔಷಧ ಬಂದಿದ್ದು, ಇದನ್ನು ಕೆಲವು ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:18 ತುಂಬದ ಹುಡುಗರ ಆನ್​ಲೈನ್​ ಚಾಟ್​​​ ಬೆಚ್ಚಿಬೀಳಿಸುವಂತಿದೆ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 16 =
Remember me
