ತಿರುವನಂತಪುರ:ಕರೊನಾ ವೈರಸ್ಸೇ ಹಾಗೆ. ಹೇಗೆ ಯಾವಾಗ, ಯಾವ ಸಂದರ್ಭದಲ್ಲಿ ಯಾರ ದೇಹವನ್ನು ಪ್ರವೇಶಿಸಿಬಿಡುತ್ತದೆಯೋ ಹೇಳುವುದು ಅಸಾಧ್ಯವಾಗಿಬಿಟ್ಟಿದೆ. ಎಷ್ಟೇ ಸುರಕ್ಷಿತವಾಗಿ ನಾವಿದ್ದೇವೆ ಎಂದುಕೊಂಡರೂ ಈ ವೈರಸ್​ ಅದ್ಯಾವುದೋ ಮಾಯೆಯಿಂದ ದೇಹ ಹೊಕ್ಕಿಯೇ ಬಿಡುತ್ತದೆ.
ಅಂಥದ್ದೇ ಘಟನೆ ಕೇರಳದ ತಿರುವನಂತಪುರ ಹಾಗೂ ಕನ್ನೂರಿನಲ್ಲಿ ನಡೆದಿದೆ. ಇಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತ ಸಿಕ್ಕಿಬಿದ್ದಿರುವ ಆರೋಪಿ ಹಾಗೂ ಕಳ್ಳತನಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವವರಿಗೆ ಕರೊನಾ ಪಾಸಿಟಿವ್​ ಬಂದಿರುವ ಹಿನ್ನೆಲೆಯಲ್ಲಿ, ಅವರ ವಿಚಾರಣೆ ನಡೆಸಿದ ಮೂವರು ಮ್ಯಾಜಿಸ್ಟ್ರೇಟ್​ (ನ್ಯಾಯಾಧೀಶರು) ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
ಇವರ ಸಂಪರ್ಕಕ್ಕೆ ಬಂದಿರುವ ಸರ್ಕಲ್‌ ಇನ್ಸ್‌ಪೆಕ್ಟರ್‌, ಶಾಸಕ, ನಟ ಸೇರಿದಂತೆ 150 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಸುತ್ತಲೂ ಪ್ರವಾಹ… ಕಣ್ಣೆದುರೇ ಸಾವು… ಮರವೇರಿದ ವೃದ್ಧೆ ಬಿಚ್ಚಿಟ್ಟ ಭಯಾನಕ ಅನುಭವ…
ಒಂದು ಪ್ರಕರಣದಲ್ಲಿ, ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ತಿರುವನಂತಪುರದಲ್ಲಿರುವ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ ಪೂಜಾಪುರ ಕೇಂದ್ರೀಯ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಈತನಿಗೆ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೆ ಒಳಪಡಿಸಲಾಯಿತು,. ಆಗ ಪಾಸಿಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ಬಂಧನದ ವೇಳೆ ಹಾಜರಿದ್ದ ಸರ್ಕಲ್‌ ಇನ್ಸ್‌ಪೆಕ್ಟರ್‌ ಸೇರಿದಂತೆ 34 ಪೊಲೀಸರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಈತನನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿದ್ದರಿಂದ ಅವರೂ ಸೇರಿದಂತೆ ಆತನ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಕ್ವಾರಂಟೈನ್​ನಲ್ಲಿ ಇರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೇ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಮಲೆಯಾಳದ ನಟ ಸೂರಜ್‌ ಹಾಗೂ ಶಾಸಕ ಡಿ.ಕೆ.ಮುರಳಿ ಇ ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೆಲ್ಫ್ ಕ್ವಾರಂಟೈನ್‌ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ:ದಿಲ್ಲಿಯಿಂದ ಬೆಂಗಳೂರಿಗೆ ಒಬ್ಬನೇ ಬಂದ ಐದರ ಪೋರ!
ಅದೇ ರೀತಿ ಕನ್ನೂರಿನಲ್ಲಿ ಕೂಡ ನಡೆದಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರನ್ನು ಬಂಧಿಸಿ ಜೈಲಿನಲ್ಲಿ ಇಟ್ಟ ಸಂದರ್ಭದಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಬ್ಬರು ನ್ಯಾಯಾಧೀಶರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.
ಕಳೆದ ತಿಂಗಳು, ಲುಧಿಯಾನಾದಲ್ಲಿ ಬಂಧಿತನೊಬ್ಬನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮತ್ತು ಇತರರು ಕ್ವಾರಂಟೈನ್‌ನಲ್ಲಿ ಇದ್ದರು.
ಕಾನೂನು ಸಲಹೆ: ವಿಚ್ಛೇದನಕ್ಕೆ ಪರಸ್ಪರ ಒಮ್ಮೆ ಒಪ್ಪಿದರೆ ಸಾಕೆ, ಮತ್ತೆ ನಿರ್ಧಾರ ಬದಲಿಸಿದರೆ ಗತಿ ಏನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − 13 =
Remember me
