ಜಗತ್ತಿನಾದ್ಯಂತ ಸುಮಾರು 3000 ಜನರ ಪ್ರಾಣವನ್ನೇ ಕಸಿದಿರುವ ಕೊರನಾ ವೈರಸ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಇದೆ. ಸದ್ಯ 90,000 ಜನರು ಸೋಂಕು ಪೀಡಿತರಾಗಿದ್ದಾರೆ. ಸದ್ಯ ಈ ವೈರಸ್ ಬಗ್ಗೆಯೇ ಜನರು ಆತಂಕದಿಂದ ಗಮನಹರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ (coronavirus) ಎಂಬುದು ಟ್ರೆಂಡ್​ ಆಗಿದೆ.
ಆದರೆ ಕೆಲವು ಅಶ್ಲೀಲ ವೆಬ್​ಸೈಟ್​ಗಳು (ಪೋರ್ನ್​ ವೆಬ್​ಸೈಟ್​)ಗಳು ಕೊರೊನಾ ವೈರಸ್​ ಹೆಸರಿನಲ್ಲಿ ಅಶ್ಲೀಲ​ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿವೆ. ಮಾಸ್ಕ್​, ಹಜ್ಮತ್​ ಸೂಟ್​ಗಳನ್ನು ಧರಿಸಿಕೊಂಡು ಸೆಕ್ಸ್​ನಲ್ಲಿ ತೊಡಗಿರುವ ವಿಡಿಯೋಗಳನ್ನು ಹರಿಬಿಡುತ್ತಿವೆ.
ಇದು ತೀರ ಅತಿಯೆನಿಸಿದರೂ ಸತ್ಯ. ಪ್ರಮುಖ ಅಶ್ಲೀಲ್​ ವೆಬ್​ಸೈಟ್​ಗಳಲ್ಲಿ ಕೊರೊನಾ ವೈರಸ್​ ಹೆಸರಿನ ಅಶ್ಲೀಲ ವಿಡಿಯೋಗಳು ಸಿಕ್ಕಾಪಟೆ ಟ್ರೆಂಡ್​ ಆಗುತ್ತಿವೆ. ಅದನ್ನು ನೋಡಿ ಹಲವರು ಇದೇ ಹೆಸರು ಕೊಟ್ಟು ಸೆಕ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಲ್ಲದೆ, ಡೆಸರ್ಟೆಡ್​ ವುಹಾನ್​, ಟಿಎಸ್​ಎ ಏಜೆಂಟ್​ ಡಿಟೇನ್​ ವುಮನ್​ ಸಸ್ಪೆಕ್ಟೆಡ್​ ಆಫ್​ ಕೊರೊನಾ ವೈರಸ್​ ಎಂಬಿತ್ಯಾದಿ ಹೆಡ್​ಲೈನ್​ಗಳನ್ನು ಹೊಂದಿರುವ ಅಶ್ಲೀಲ್​ ವಿಡಿಯೋಗಳು ತುಂಬುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನೀಲಿಚಿತ್ರ ತಾರೆಯೋರ್ವರು, COVID-19 ಥೀಮ್​ನ ಅಶ್ಲೀಲ ವಿಡಿಯೋಗಳತ್ತ ಜನರು ಆಕರ್ಷಿತರಾಗುತ್ತಾರೆ ಎಂದು ಭಾವಿಸುತ್ತೇನೆ. ತಮ್ಮ ನೆರಳನ್ನು ನೋಡಿ ಭಯ ಬೀಳುವ ಜನರು ಹಾರರ್​ ಚಲನಚಿತ್ರಗಳನ್ನು ನೋಡುವುದು ಹೇಗೆ ಹೆಚ್ಚೋ, ಹಾಗೇ ಸದ್ಯ ಕೊರೊನಾ ವೈರಸ್ ಭೀತಿಯಲ್ಲಿರುವ ಜನರೂ ಕೂಡ ಅದೇ ಹೆಸರಿನ ಅಶ್ಲೀಲ ವಿಡಿಯೋಗಳತ್ತ ಆಕರ್ಷಿತರಾಗುತ್ತಾರೆ ಎನ್ನಿಸುತ್ತದೆ ಎಂದಿದ್ದಾರೆ.
ಹಾಗೇ ಇಂತಹ ವಿಡಿಯೋಗಳನ್ನು ಮಾಡಿದ್ದು ಜನರಲ್ಲಿ ಕೊರೊನಾ ವೈರಸ್​ ಬಗ್ಗೆ ಜಾಗೃತಿ ಮೂಡಿಸಲು ಹೊರತಾಗಿ ಕೊರೊನಾ ಪೀಡಿತರಿಗೆ ಅವಮಾನ ಮಾಡಲಾಗಲಿ, ಈ ಸನ್ನಿವೇಶವನ್ನು ಅಣುಕಿಸುವ ಸಲುವಾಗಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಥೀಮ್​ನ ಸುಮಾರು 112 ಅಶ್ಲೀಲ ವಿಡಿಯೋಗಳು ಪೋರ್ನ್​ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಆಗಿವೆ ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fifteen =
Remember me
