ಹೈದರಾಬಾದ್:ಮಾರಕ ವೈರಸ್​ ಕೊರೊನಾ ಭಾರತದಲ್ಲಿ ಇಂದು ಇಬ್ಬರಿಗೆ ದೃಢಪಟ್ಟಿದೆ. ವೈರಸ್​ ಪೀಡಿತರಲ್ಲಿ ಓರ್ವ ದೆಹಲಿಯವರು, ಮತ್ತೋರ್ವ ತೆಲಂಗಾಣದವರು.
ತೆಲಂಗಾಣದಲ್ಲಿ ಪತ್ತೆಯಾದ ಮಾರಕ ವೈರಸ್​ ಪೀಡಿತ ಟೆಕ್ಕಿ ಬೆಂಗಳೂರಿನಿಂದ ಬಸ್​ ಮುಖಾಂತರ ಹೈದರಾಬಾದ್​ಗೆ ತೆರಳಿದ್ದ. ಹೀಗೆ ಬಸ್​ನಲ್ಲಿ ತೆರಳಿದ್ದಾಗ ಹಲವರ ಜತೆ ಸಂಭಾಷಣೆ ಮಾಡಿದ್ದ. ಈಗ ಬಸ್​ನಲ್ಲಿದ್ದ ಆ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ.
ಮಾರಕ ವೈರಸ್​ ದೃಢ ಪಟ್ಟವ 24 ವರ್ಷದ ಟೆಕ್ಕಿಯಾಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ತೆಲಂಗಾಣದ ಆರೋಗ್ಯ ಸಚಿವ, ಬೆಂಗಳೂರಿನಿಂದ ಬಂದ ಟೆಕ್ಕಿಯನ್ನು ಪರೀಕ್ಷಿಸಲಾಗಿದ್ದು. ಆತನಲ್ಲಿ ಕೊರೊನಾ ವೈರಸ್​ ದೃಢ ಪಟ್ಟಿದೆ ಎಂದು ಖಚಿತ ಪಡಿಸಿದ್ದಾರೆ. ಟಿಕ್ಕಿ ಬೆಂಗಳೂರಿನಿಂದ ಹೈದರಾಬಾದ್​ಗೆ ಬಂದಿಳಿದ ಬಸ್​ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದರು.
ಆ ಟೆಕ್ಕಿಯನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವರದಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ವರದಿಗಳು ಬಂದಿವೆ. ಅದರಲ್ಲಿ ಆತನಿಗೆ ಕೊರೊನಾ ಇರುವುದು ದೃಢ ಪಟ್ಟಿದೆ ಎಂದು ಸಚಿವ ಈಟೇಲ ರಾಜೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
