ನವದೆಹಲಿ:ಚೀನಾದ್ಯಂತ ಕೊರೊನಾ ವೈರಸ್​ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಏರ್​ ಇಂಡಿಯಾ ಬೋಯಿಂಗ್​ 747 ವಿಮಾನವು ಚೀನಾದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷತಾ ದೃಷ್ಠಿಯಿಂದ ಕರೆತಂದಿದೆ.
ಮಾರಾಣಾಂತಿಕ ಕೊರೊನಾ ವೈರಸ್​ ಈಗಾಗಲೇ 200ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚೀನಾದಿಂದ 324 ಭಾರತೀಯರನ್ನು ಶನಿವಾರ ಬೆಳಗ್ಗೆ ಸ್ವದೇಶಕ್ಕೆ ಕರೆತರಲಾಗಿದೆ. ಗುರುವಾರ ವಿಮಾನವು ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯ ಐವರು ವೈದ್ಯರೊಂದಿಗೆ ಚೀನಾಗೆ ತೆರಳಿತ್ತು.
ಸೋಂಕಿತ ಪ್ರಯಾಣಿಕರಿಂದ ವಿಮಾನ ಸಿಬ್ಬಂದಿ, ಪೈಲಟ್​ಗಳು ಮತ್ತು ಸಹ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ತೀವ್ರ ತಪಾಸಣೆ ನಡೆಸಿ ಕರೆತರಲಾಗಿದೆ. ಅಲ್ಲದೆ, ಇಂದು ಮತ್ತೊಂದು ವಿಮಾನ ಚೀನಾಗೆ ಹಾರಲಿದೆ.
ಚೀನಾದ ವುಹಾನ್​ನಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ವಿಶೇಷ ವಿಮಾನದಲ್ಲಿ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟ ಚೀನಾ ಸರ್ಕಾರಕ್ಕೆ ಭಾರತ ಸರ್ಕಾರ ಟ್ವೀಟ್​ ಮೂಲಕ ಧನ್ಯವಾದಗಳನ್ನು ತಿಳಿಸಿದೆ.
ಕೊರೊನಾ ವೈರಸ್​ ಹೆಚ್ಚಾಗಿ ದಾಳಿ ಮಾಡಿರುವ ಹುಬೇ ಪ್ರಾಂತ್ಯದಲ್ಲಿದ್ದ 324 ಭಾರತೀಯರನ್ನು ಹೊತ್ತ ಭಾರತದ ವಿಮಾನ ಇಂದು ಮುಂಜಾನೆಯೇ ವುಹಾನ್​ನಿಂದ ಹೊರಟು ಭಾರತವನ್ನು ತಲುಪಿದೆ. ಪ್ರಯಾಣಿಕರಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳೇ ಆಗಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
