ನವದೆಹಲಿ: ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ವಿದೇಶಿ ಪ್ರಜೆಗಳಿಗೆ ನೀಡುವ ವೀಸಾದ ಮೇಲೆ ನಿರ್ಬಂಧ ವಿಧಿಸಿದೆ.
ಚೀನಾ, ಫ್ರಾನ್ಸ್, ಇಟಲಿ, ದಕ್ಷಿಣ ಕೊರಿಯಾ, ಜರ್ಮನಿ, ಸ್ಪೇನ್, ಜಪಾನ್ ಮತ್ತು ಇರಾನ್ ರಾಷ್ಟ್ರಗಳ ವೀಸಾವನ್ನು ತಾತ್ಕಾಲಿಕವಾಗಿ ಅಮಾನತುಪಡಿಸಿದೆ.
ಫ್ರಾನ್ಸ್​, ಜರ್ಮನಿ, ಸ್ಪೇನ್​ ರಾಷ್ಟ್ರಗಳ ಪ್ರಜೆಗಳು ಭಾರತಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಈ ರಾಷ್ಟ್ರಗಳ ಪ್ರಜೆಗಳಿಗೆ ಈಗಾಗಲೇ ನೀಡಿರುವ ವೀಸಾಗಳನ್ನು ಅಮಾನತುಗೊಳಿಸಿದೆ.
ಮಾರ್ಚ್​ 3 ಹಾಗೂ ಅದಕ್ಕೂ ಮೊದಲು ಚೀನಾ, ಜಪಾನ್​, ದಕ್ಷಿಣ ಕೊರಿಯಾ, ಇಟಲಿ, ಇರಾನ್​ ಪ್ರಜೆಗಳಿಗೆ ನೀಡಿದ್ದ ವೀಸಾಗಳನ್ನು ಕೂಡ ರದ್ದುಪಡಿಸಿದೆ.
ಕೆಲವು ತುರ್ತು ಪ್ರಯಾಣ ಇದ್ದರೆ ರಾಯಭಾರ ಕಚೇರಿ ಸಂಪರ್ಕಿಸಿ ತುರ್ತು ಪ್ರಯಾಣದ ವೀಸಾ ಪಡೆಯುವಂತೆ ಸಚಿವಾಲಯ ತಿಳಿಸಿದೆ.
ತುರ್ತು ಪ್ರಯಾಣ ಮಾಡಬೇಕಾದರು ತಮ್ಮ ರಾಷ್ಟ್ರಗಳ ಅಧಿಕೃತ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್​ ಪರೀಕ್ಷೆಗೆ ಒಳಗಾಗಿ ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ತಿಳಿಸಿದೆ. (ಏಜೆನ್ಸಿಸ್​)
ವಿಶ್ವಕ್ಕೆ ಅಂಟಿದ ಆತಂಕ ಕೊರೊನಾ; ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವರಿಗೂ ತಗುಲಿದೆ ಸೋಂಕು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight − 5 =
Remember me
