ಹೈದರಾಬಾದ್​:ಲಾಕ್​ಡೌನ್ ಹಿನ್ನೆಲೆಯಲ್ಲಿ ತವರಿಗೆ ಮರಳಲು ಮಹಾರಾಷ್ಟ್ರದ ನಾಗ್ಪುರದಿಂದ ಸುಮಾರು 500 ಕಿ.ಮೀ ಕ್ರಮಿಸಿದ್ದ ತಮಿಳುನಾಡು ಮೂಲದ ಯುವಕ ಮಾರ್ಗ ಮಧ್ಯೆ ಆಶ್ರಯ ತಾಣದಲ್ಲಿ ವಿಶ್ರಾಂತಿ ಪಡೆಯುವಾಗ ಕುಸಿದುಬಿದ್ದು ಸಾವಿಗೀಡಾಗಿರುವ ಘಟನೆ ಸಿಕಂದರಬಾದ್​ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಲೋಕೇಶ್ ಬಾಲಸುಬ್ರಮಣಿ ​(23) ಮೃತ ಯುವಕ. ಮಹಾರಾಷ್ಟ್ರದ ನಾಗ್ಪುರದಿಂದ ತಮಿಳುನಾಡಿನ ನಮಕ್ಕಲ್​ಗೆ ತೆರಳುತ್ತಿದ್ದ. ಕರೊನಾ ವೈರಸ್​ ಸೋಂಕು ತಡೆಗಟ್ಟಲು ಕರೆ ನೀಡಲಾಗಿರುವ 21 ದಿನಗಳ ಲಾಕ್​ಡೌನ್​ನಿಂದ ಆಹಾರ, ಆಶ್ರಯ ಮತ್ತು ಆದಾಯದ ಮೇಲೆ ಪರಿಣಾಮ ಬೀರಿರುವುದರಿಂದ ಮಹಾನಗರಗಳಲ್ಲಿರುವ ಲಕ್ಷಾಂತರ ಮಂದಿ ದಿನಗೂಲಿ ನೌಕರರು ತವರಿಗೆ ಮರಳುವ ಅನಿವಾರ್ಯತೆ ಎದುರಾಗಿದೆ.
ಅದರಂತೆಯೇ ತಮಿಳುನಾಡಿನ ವಿವಿಧ ಭಾಗದ 26 ಮಂದಿಯ ಗುಂಪು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಇವರಲ್ಲಿ ಲೋಕೇಶ್​ ಕೂಡ ಒಬ್ಬನಾಗಿದ್ದ. ಹೈದರಾಬಾದ್​ನ ಸಿಕಂದರಬಾದ್​ನ ಆಶ್ರಯ ತಾಣದಲ್ಲಿ ವಿಶ್ರಾಂತಿ ಪಡೆಯುವಾಗ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಕಳೆದ ಮೂರು ದಿನಗಳಿಂದ ನಡೆಯಲು ಆರಂಭಿಸಿದ್ದೇವೆ. ಯಾವುದೇ ಸಂಚಾರ ವ್ಯವಸ್ಥೆ ಇಲ್ಲ. ಅಪರಿಚಿತರು ಮಾರ್ಗ ಮಧ್ಯೆ ನಮಗೆ ಆಹಾರ ನೆರವು ನೀಡಿದರು. ಇದರ ಮಧ್ಯೆ ನಮಗೆ ಡ್ರಾಪ್​ ನೀಡಲು ಮುಂದಾಗುವ ಟ್ರಕ್​ ಚಾಲಕರನ್ನು ಪೊಲೀಸರು ಥಳಿಸಿದರು ಎಂದು 26 ಮಂದಿಯ ಗುಂಪಿನಲ್ಲಿ ಒಬ್ಬರಾದ ಸತ್ಯ ನೋವು ಹಂಚಿಕೊಂಡರು.
ನಾಗ್ಪುರ ಮತ್ತು ತೆಲಂಗಾಣ ವಲಯದಲ್ಲಿ ಕಳೆದ ಮೂರು ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶವಿದೆ. ಅಲ್ಲದೆ, ಕಾಲ್ನಡಿಗೆಯಲ್ಲಿ ಸಾಗುತ್ತಿರುವವರು ತಮ್ಮ ಬ್ಯಾಗ್​ ಮತ್ತಿತ್ತರ ವಸ್ತುಗಳನ್ನು ಸಹ ಹೊತ್ತೊಯ್ಯುತ್ತಿದ್ದಾರೆ. ಸಿಕಂದರಬಾದ್​ ತಂಗುದಾಣದಲ್ಲಿ ತಂಗಿದ್ದ ಗುಂಪು ಗುರುವಾರ ಬೆಳಗ್ಗೆ ಎಚ್ಚರಗೊಂಡಾಗ ಲೋಕೇಶ್​ ಕುಸಿದುಬಿದ್ದಿರುವುದನ್ನು ನೋಡಿತು. ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ಘಟನಾ ಸ್ಥಳಕ್ಕೆ ಬಂದು ವೈದ್ಯರು ಲೋಕೇಶ್​ ಮೃತಪಟ್ಟಿರುವುದಾಗಿ ಘೋಷಿಸಿದರು.
ಇತ್ತ ಕಣ್ಣೆದುರೇ ಲೋಕೇಶ್​ ಮೃತಪಟ್ಟಿದ್ದರೆ, ಆತನಿಗಾದ ಗತಿಯೇ ಇನ್ನೊಬ್ಬರಿಗೂ ಆಗಬಹುದಾದ ಆತಂಕವು ಎದುರಾಗಿದೆ. ಹೀಗಾಗಿ ವಾಹನ ವ್ಯವಸ್ಥೆ ಮಾಡಿಕೊಂಡಿ ಹೇಗಾದರೂ ನಮ್ಮು ಊರನ್ನು ಸೇರಿಕೊಳ್ಳುತ್ತೇವೆ ಎಂದು ಅಂಗಾಲಾಚಿದ್ದಾರೆ. ಲೋಕೇಶ್​ ಮೃತದೇಹವನ್ನು ಆತನ ಸ್ನೇಹಿತರೊಬ್ಬರು ಹೈದರಾಬಾದ್​ನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.(ಏಜೆನ್ಸೀಸ್​)
ಕ್ವಾರಂಟೈನ್‌ ಉಲ್ಲಂಘಿಸಿದರೆ ಕಂಡಲ್ಲಿ ಗುಂಡಿಕ್ಕಿ ಎಂದ ಫಿಲಿಪ್ಪೀನ್ಸ್‌ ಅಧ್ಯಕ್ಷ…!

ಕರೊನಾ ವೈರಸ್​ ವಿಚಾರದಲ್ಲಿ ಕಾಂಗ್ರೆಸ್​ ಚಿಲ್ಲರೆ ರಾಜಕಾರಣ ಮಾಡುತ್ತಿದೆ: ಅಮಿತ್​ ಷಾ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
