ನವದೆಹಲಿ:ಕೋವಿಡ್​- 19 ಎರಡನೇ ಅಲೆ ಅಬ್ಬರ ತಗ್ಗಿತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ 3ನೇ ಅಲೆಯ ಆತಂಕ ಶುರುವಾಗಿದೆ. ಮುಂದಿನ 2&4 ವಾರದೊಳಗೆ ಮಹಾರಾಷ್ಟ್ರ ಅಥವಾ ಮುಂಬೈ ನಗರಕ್ಕೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆಯೆಂದು ಮಹಾರಾಷ್ಟ್ರ ಕೋವಿಡ್​ ಕಾರ್ಯಪಡೆ ಗಂಭೀರ ಎಚ್ಚರಿಕೆ ನೀಡಿದೆ. ಮೂರನೇ ಅಲೆಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಸಿಎಂ ಉದ್ಧವ್​ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಪಡೆಯ ಸದಸ್ಯರು ಈ ಬಗ್ಗೆ ವರದಿ ನೀಡಿದ್ದಾರೆ.
ಮೊದಲ ಎರಡು ಅಲೆಗಳಿಂದ ತಪ್ಪಿಸಿಕೊಂಡಿದ್ದ ಅಥವಾ ಅತ್ಯಧಿಕ ಪ್ರಮಾಣದಲ್ಲಿ ಪ್ರತಿಕಾಯಗಳನ್ನು ಕಳೆದುಕೊಂಡಿರುವ ವರ್ಗದಲ್ಲಿ 3ನೇ ಅಲೆ ಪರಿಣಾಮ ಹೆಚ್ಚಿರಲಿದೆ ಎಂದು ತಜ್ಞರು ಹೇಳಿದ್ದಾರೆ.ಮಕ್ಕಳು ನಿರಾತಂಕ:ಇದುವರೆಗೆ ಸೋಂಕಿಗೆ ತುತ್ತಾಗದ ಕೆಳ&ಮಧ್ಯಮ ವರ್ಗದ ಕ್ಲಸ್ಟರ್​ಗಳಲ್ಲಿ ಮಕ್ಕಳಿಗೆ ಅಪಾಯವಾಗದು ಎಂದು ಕಾರ್ಯಪಡೆ ಹೇಳಿದೆ.
ವರದಿಯಲ್ಲೇನಿದೆ?
ಕಾರಣ ಏನು?* ಕೆಲವು ದಿನಗಳಿಂದ ಹೆಚ್ಚಿದ ಜನರ ಓಡಾಟ* ಜನರ ಗುಂಪುಗೂಡು ವಿಕೆಗೆ ಬೀಳದ ಕಡಿವಾಣ* ಮಾಸ್ಕ್​ ಇಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು* ಲಾಕ್​ಡೌನ್​ ರ್ನಿಬಂಧಗಳನ್ನು ತೆರವುಗೊಳಿಸಿರುವುದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + five =
Remember me
