ದೆಹಲಿ:ಆರೋಗ್ಯ ಸೇತು ಅಪ್ಲಿಕೇಷನ್​ ಅಳವಡಿಸಿಕೊಂಡ ನಂತರವಷ್ಟೇ ಜನರು ರಾಜಧಾನಿಗೆ ಪ್ರವೇಶಿಸಲು ಸರ್ಕಾರ ಅವಕಾಶ ನೀಡಬೇಕೆಂದು ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ ನಿರ್ದೇಶಕ ಸುರ್ಜೀತ್​ಕುಮಾರ್​ ಸಿಂಗ್​ ಬಲವಾಗಿ ಶಿಫಾರಸು ಮಾಡಿದರು.
ಶುಕ್ರವಾರ ಕೋವಿಡ್​-19 ಸಾಂಕ್ರಾಮಿಕ ರೋಗ ಹರಡುವ ಕುರಿತು ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಾಲ್​ ಅವರ ಪರಿಶೀಲನಾ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ.
ಡಾ. ಸಿಂಗ್​ ರಾಜಧಾನಿಯಲ್ಲಿ ಹೆಚ್ಚಿನ ಜನರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರಲ್ಲದೆ 3,5,14 ನೇ ದಿನದಂದು ಪುನರಾವತಿರ್ತ ಪರೀಕ್ಷೆಗೆ ಒತ್ತಾಯಿಸಿದರು. ಈ ರೀತಿಯ ಪುನರಾವತಿರ್ತ ಪರೀಕ್ಷೆಯಿಂದ ಕೋವಿಡ್​ – 19 ಪಾಸಿಟಿವ್​ ಇರುವ ವ್ಯಕ್ತಿ ಸುಳ್ಳು ವರದಿಯಿಂದ ಹೊರಗುಳಿಯುವುದಿಲ್ಲ. ಆರೋಗ್ಯ ಸೇತು ಆ್ಯಪ್​ನ ಶಿಫಾರಸು ಬಗ್ಗೆ ಇಲ್ಲಿಯ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಆ ವಿಚಾರವನ್ನೂ ಕಡೆಗಣಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮೊಬೈಲ್​ ಅಪ್ಲಿಕೇಷನ್​ ಅನ್ನು ಕಡ್ಡಾಯಗೊಳಿಸುವ ದೊಡ್ಡ ಸಮಸ್ಯೆ ಎಂದರೆ ಸ್ಮಾರ್ಟ್​ಫೋನ್​​ ಹೊಂದಿಲ್ಲದ ಲಕ್ಷಾಂತರ ಜನರಿರಬಹುದು. ಭಾರತದಲ್ಲಿ 1.2 ಬಿಲಿಯನ್​ ಮೊಬೈಲ್​ ಫೋನ್​​ಗಳಿವೆ, ಕೇವಲ 350 ಮಿಲಿಯನ್​ ಜನರು ಮಾತ್ರ ಸ್ಮಾರ್ಟ್​ಫೋನ್​ಗಳನ್ನು ಹೊಂದಿದ್ದಾರೆ.
ದೆಹಲಿಯಲ್ಲಿ ಶೇ 80 ಸ್ಮಾರ್ಟ್​ಫೋನ್​​ ಗಳಿವೆ ಎಂದು ತಿಳಿದುಬಂದಿದೆ. ಸಾಧಕ ಬಾಧಕಗಳನ್ನು ತಿಳಿಯಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏರ್​ಪೋರ್ಟ್​ಗಳು ಹಾಗೂ ದೆಹಲಿ ಮೆಟ್ರೋದಲ್ಲಿ ಪ್ರಮುಖ ಭದ್ರತೆಯ ಹೊಣೆು ಹೊತ್ತಿರುವ ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯೂರಿಟಿ ಫೋರ್ಸ್​ (ಸಿಐಎಸ್​ಎ​) ಇದೇ ರೀತಿಯ ಶಿಫಾರಸು ಮಾಡಿದೆ.
ಆರೋಗ್ಯ ಸೇತು ಆ್ಯಪ್​ ಇಲ್ಲದೆ ದೆಹಲಿಗೆ ಪ್ರವೇಶ ಕೊಡಬೇಡಿ; ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜಾಲ್​ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
