ಗುರುಗ್ರಾಮ:ವೈದ್ಯರೇ ನಡೆದಾಡುವ ದೇವರು ಎನ್ನುತ್ತಾರೆ. ಆದರೆ ಅದೆಷ್ಟೋ ಬಾರಿ ಅದೇ ದೇವರು ಮಾಡುವ ತಪ್ಪಿನಿಂದ ರೋಗಿಗಳು ಸಾವನ್ನಪ್ಪಿರುವುದೂ ಇದೆ. ಅದೇ ರೀತಿ ಗರ್ಭಿಣಿಯೊಬ್ಬಳ ಆಪರೇಷನ್​ ಮಾಡಿದ ವೈದ್ಯರು ಮಗವನ್ನು ಹೊರತೆಗೆದು ಹತ್ತಿಯನ್ನು ಹೊಟ್ಟೆಯಲ್ಲೇ ಬಿಟ್ಟಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ತಪ್ಪಿನ ಅರಿವಾಗಿ ಮರು ಆಪರೇಷನ್​ ಮಾಡಿದ ನಂತರ ತಾಯಿ ಮೇಲೆದ್ದಿಲ್ಲ ಎನ್ನಲಾಗಿದೆ.
ಆ ಮಹಿಳೆ ಇತ್ತೀಚೆಗೆ ಹೆರಿಗೆ ನೋವಿನೊಂದಿಗೆ ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದಳು. ನಾರ್ಮಲ್​ ಹೆರಿಗೆ ಆಗುವುದಿಲ್ಲ, ಮಗುವನ್ನು ಸಿಜರಿಯನ್​ ಮಾಡಿಯೇ ತೆಗೆಯಬೇಕು ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಸಿಜರಿಯನ್​ ಮಾಡಿ ಮಗುವನ್ನು ಹೊರತೆಗೆಯಲಾಗಿದೆ. ಅದಾದ ಮೇಲೆ ತಾಯಿ ಮಗುವನ್ನು ಡಿಸ್ಚಾರ್ಜ್​ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮನೆಗೆ ತೆರಳಿದ ಒಂದೆರೆಡು ದಿನಗಳಲ್ಲಿ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಪರೇಷನ್​ ಮಾಡಿದ್ದ ವೈದ್ಯರಿಗೆ ಕೇಳಿದರೆ ಮಾತ್ರೆ ಕೊಟ್ಟು ಕಳುಹಿಸಿದ್ದಾರೆ.
ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಬೇರೊಬ್ಬ ವೈದ್ಯರ ಸಲಹೆಯಂತೆ ಅಲ್ಟ್ರಾಸೌಂಡ್​ ಮಾಡಿಸಲಾಗಿದೆ. ಅದರಲ್ಲಿ ಹೊಟ್ಟಡಯೊಳಗೆ ಹತ್ತಿಯಿರುವುದು ಕಂಡುಬಂದಿದೆ. ತಕ್ಷಣ ಬಾಣಂತಿಯ ಕುಟುಂಬಸ್ಥರು ಆಪರೇಷನ್​ ಮಾಡಿದ್ದ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ. ಮೊದಲಿಗೆ ವೈದ್ಯರು ತಪ್ಪೊಪ್ಪಿಕೊಂಡಿಲ್ಲವಾದರೂ ರಿಪೋರ್ಟ್​ ತೋರಿಸಿದ ನಂತರ ಒಪ್ಪಿಕೊಂಡಿದ್ದಾರೆ. ಬಾಣಂತಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ.
ಬಾಣಂತಿ ಆಸ್ಪತ್ರೆಗೆ ದಾಖಲಾದ ನಂತರ ಕುಟುಂಬಸ್ಥರ ಅನುಮತಿ ಇಲ್ಲದೆಯೇ ಮತ್ತೊಮ್ಮೆ ಆಪರೇಷನ್​ ಮಾಡಲಾಗಿದೆಯೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆ ಆಪರೇಷನ್​ ಆದಾಗಿನಿಂದ ಆಕೆ ಮೇಲೆ ಎದ್ದಿಲ್ಲವೆಂದೂ ಹೇಳಲಾಗಿದೆ. ಸದ್ಯ ಈ ವಿಚಾರವಾಗಿ ಬಾಣಂತಿಯ ಪತಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. (ಏಜೆನ್ಸೀಸ್)
ಒಂದೇ ವರ್ಷದಲ್ಲಿ 20 ಮಕ್ಕಳ ತಾಯಿಯಾದ 23ರ ಬೆಡಗಿ! ಇನ್ನೂ ಮುಗಿದಿಲ್ಲವಂತೆ ತಾಯಿಯಾಗುವ ಬಯಕೆ!

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
