ನವದೆಹಲಿ:ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಮಂಗಳವಾರ, ತೀವ್ರವಾದ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ 18 ಮಕ್ಕಳು, ಭಾರತೀಯ ಸಂಸ್ಥೆ ಮೇರಿಯನ್ ಬಯೋಟೆಕ್ ತಯಾರಿಸಿದ ಡಾಕ್ -1 ಮ್ಯಾಕ್ಸ್ ಎಂಬ ಕೆಮ್ಮಿನ ಸಿರಪ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಅದಕ್ಕೂ ಹಿಂದೆ ಗಾಂಬಿಯಾ ದೇಶದಲ್ಲಿ ಹರಿಯಾಣ ಮೂಲದ ಮೇಡನ್​ ಫಾರ್ಮಾ ತಯಾರಿಸಿದ್ದ ಸಿರಪ್​ನಿಂದಾಗಿ 63ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು.
ಆ ಸಂದರ್ಭ ಪ್ರಾಥಮಿಕ ಪ್ರಯೋಗಾಲಯ ಅಧ್ಯಯನಗಳು ಡಾಕ್-1 ಮ್ಯಾಕ್ಸ್ ಸಿರಪ್‌ನ ಈ ಸರಣಿಯು ಎಥಿಲೀನ್ ಗ್ಲೈಕೋಲ್ ಅನ್ನು ಹೊಂದಿದೆ ಎಂದು ತೋರಿಸಿತ್ತು. ಈ ವಸ್ತುವು ವಿಷಕಾರಿಯಾಗಿದ್ದು ರೋಗಿಯ ಆರೋಗ್ಯದಲ್ಲಿ ಗಂಭೀರ ಬದಲಾವಣೆಗಳನ್ನು ಉಂಟುಮಾಡಬಹುದು. ಇದರಿಂದಾಗಿ ವಾಂತಿ, ಮೂರ್ಛೆ, ಸೆಳೆತ, ಉಂಟಾಗಿ ಕಡೆಗೆ ಪ್ರಾಣವೂ ಹೋಗಬಹುದು.
ಈ ಹಿನ್ನೆಲೆಯಲ್ಲಿ ಇದೀಗ ಭಾರತ ಸರ್ಕಾರ ಮರಿಯನ್ ಬಯೋಟೆಕ್ ಸಂಸ್ಥೆಯ ಲೈಸೆನ್ಸ್ ರದ್ದು ಮಾಡುವಂತೆ ಸೂಚನೆ ನೀಡಿದೆ.
ಉಜ್ಬೇಕಿಸ್ತಾನದ ಸುದ್ದಿ ಹೊರ ಬರುತ್ತಿದ್ದಂತೆಯೇ ಪರೀಕ್ಷೆಗಾಗಿ ತೆಗೆದುಕೊಂಡ 36 ಮಾದರಿಗಳಲ್ಲಿ 22ರಲ್ಲಿ ಎಥಿಲೀನ್ ಗ್ಲೈಕಾಲ್ ಕಲಬೆರಕೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮರಿಯನ್ ಬಯಪಟೆಕ್ನಿಕ್ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲು ಕೇಂದ್ರವು ರಾಜ್ಯ ಔಷಧ ನಿಯಂತ್ರಕ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಉತ್ತರಪ್ರದೇಶದ ಗೌತಮ್ ಬುದ್ಧ ನಗರ ಡ್ರಗ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 11 =
Remember me
