ಅಮರಾವತಿ:ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಜನಪ್ರತಿನಿಧಿಯೋರ್ವ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ವಾರ್ಡ್​ ನಂ 20 ನರಸೀಪಟ್ಟಣ ಪುರಸಭೆ ಸದಸ್ಯನಾದ ಮುಲಪರ್ತಿ ರಾಮರಾಜು ಸೋಮವಾರ ನಡೆದ ಕೌನ್ಸಿಲ್​ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಕೌನ್ಸಿಲ್​ ಸಭೆಯಲ್ಲಿ ಮಾತನಾಡಿದ ರಾಮರಾಜು ನಾನು ಗೆದ್ದು ಬಂದು ಇಲ್ಲಿಗೆ 31 ತಿಂಗಳುಗಳು ಕಳೆದಿವೆ. ಆದರೆ, ನಾನು ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಒಳಚರಂಡಿ, ವಿದ್ಯುತ್​, ನೈರ್ಮಲ್ಯ, ರಸ್ತೆ ಸೇರಿದಂತೆ ಸಾರ್ವಜನಿಕರ ಸಮಸ್ಯಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ.
తెలుగుదేశం పార్టీ తరపున గెలిచిన లింగాపురం గ్రామ గిరిజన ప్రజాప్రతినిధి ఆయన. పదవిలో ఉండి కూడా 30 నెలలుగా గ్రామంలో ఒక్క కుళాయి కూడా వేయించలేకపోయానని… దీనికంటే చచ్చిపోవడం నయమని కౌన్సిలర్ల సమావేశంలో కన్నీరు పెట్టుకుని, చెప్పుతో కొట్టుకున్నారాయన.#AndhraPradesh#NalugellaNarakam…pic.twitter.com/u6k4E5KXZy
ಇದನ್ನೂ ಓದಿ:ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ನೇಣಿಗೆ ಶರಣಾದ ಯುವಕ
ನಾನು ಎಷ್ಟೇ ಪ್ರಯತ್ನಿಸಿದ್ದರು ಸಹ ಮತದಾರರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಪುರಸಭೆ ಅಧಿಕಾರಿಗಳು ವಾರ್ಡ್​ ನಂ 20ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದುವರೆಗೂ ನನ್ನ ವಾರ್ಡಿಗೆ ಒಂದು ನೀರಿನ ಕನೆಕ್ಷನ್​ ಸಹ ಕೊಡಿಸಲು ನನ್ನಿಂದ ಸಾಧ್ಯವಾಗಿಲ್ಲ. ಕೊಟ್ಟ ಮಾತನ್ನು ಈಡೇರಿಸಲಾಗದೆ ಇದ್ದ ಮೇಲೆ ಸಾಯುವುದೇ ಲೇಸು ರಾಮರಾಜು ಹೇಳಿದ್ದಾರೆ.
ರಾಮರಾಜು ಹೇಳಿಕೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಆಡಳಿತರೂಢ YSRCP ಹಾಗೂ ಟಿಡಿಪಿ ಪಕ್ಷದ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ನಿರತಾರಗಿದ್ದಾರೆ. 2021ರಲ್ಲಿ ನಡೆದ ಆಂಧ್ರಪ್ರದೇಶ ಸ್ತಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಮರಾಜು ಟಿಡಿಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
