ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಯುವ ಮೋರ್ಚಾ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿದ್ದರು. ನಾಲ್ಕು ಕಡೆಗಳಿಂದ ರ‍್ಯಾಲಿ ಸೆಕ್ರಟೇರಿಯೆಟ್ ಕಡೆಗೆ ಹೋಗುತ್ತಿದ್ದ ವೇಳೆ ಒಂದು ಕಡೆ ನಾಡ ಬಾಂಬ್​ ದಾಳಿ ನಡೆದಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಫ್ಯಾಸಿಸಂ ಅನ್ನೋದು ಹೀಗೆ ವ್ಯಕ್ತವಾಗುತ್ತೆ!, ರೂಫ್​ಟಾಪ್ ಮೇಲಿಂದ ನಮ್ಮ ರ‍್ಯಾಲಿಯ ಮೇಲೆ ನಾಡ ಬಾಂಬ್ ದಾಳಿ ನಡೆಸಲಾಗಿದೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಅಶ್ರುವಾಯು, ಲಾಠಿ ಪ್ರಹಾರವನ್ನೂ, ಜಲ ಪ್ರಹಾರವನ್ನೂ ನಡೆಸಲಾಗಿದೆ. ನಿರಂಕುಶಾಧಿಕಾರಿಯ ಅಂತ್ಯ ಕಾಲ ಸಮೀಪಿಸುತ್ತಿದೆ ಎಂದು ರ‍್ಯಾಲಿಯ ಫೋಟೋಗಳನ್ನು ಅವರು ಟ್ವೀಟ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದನ್ನೂ ಓದಿ:ಮೋಸ್ಟ್​ ಡೇಂಜರಸ್​ ಟಾಪ್​ 10 ಸೆಲೆಬ್ರಿಟಿಗಳಿವರು- ಇವರಿಗಾಗಿ ಸದಾ ಹುಡುಕಾಟ…
ಇದಲ್ಲದೆ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಸುಮ್ನೇ ಬರಲ್ಲ, ಅದಕ್ಕೆ ಯಾರಾದರೂ ಬೆಲೆ ಕೊಡಲೇಬೇಕಾಗುತ್ತದೆ. ಬಂಗಾಳದ ನಾಳಿನ ಯುವಜನರು ಇಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ತೆತ್ತಿರುವ ಬೆಲೆಯನ್ನು ಸ್ಮರಿಸಲಿದ್ದಾರೆ ಎಂದು ಟ್ವೀಟ್ ಮಾಡಿ, ಲಾಠಿ ಏಟು ತಿಂದವರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ

This is what fascism looks like!
Country bombs hurled at our rally by TMC goons from rooftops.
Tear gas and water canons launched against a peaceful march.
The tyrant’s time is coming to an end.#NabannoCholopic.twitter.com/HngQL7q4K8
— Tejasvi Surya (@Tejasvi_Surya)October 8, 2020

Democracy and freedom don’t come free. Someone has to pay a price for it.
Tomorrow’s generation of Bengali youth will remember with gratitude today’s BJYM karyakartas.#NabbanoCholopic.twitter.com/RNgCYPgRBx
— Tejasvi Surya (@Tejasvi_Surya)October 8, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
