ಮುಂಬೈ:ಕೋವಿಡ್​-19 ಲಾಕ್​ಡೌನ್​ ಸಡಿಲಿಕೆಯಿಂದ ಮೊದಲ್ಗೊಂಡು ಅನ್​ಲಾಕ್​ 1.0 ಅವಧಿಯಲ್ಲಿ ದೇಶ ಪುನರುತ್ಥಾನದ ಹಾದಿಯಲ್ಲಿದೆ. ಅನ್​ಲಾಕ್​ 1.0 ಜಾರಿಗೆ ಬಂದ ನಂತರದಲ್ಲಿ ವಿವಿಧ ವಲಯಗಳಲ್ಲಿನ ನೇಮಕಾತಿ ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ ಇದರ ಸುಳಿವು ಸಿಕ್ಕಿದೆ.
ಒಂದು ಮೂಲದ ಪ್ರಕಾರ ಎಜುಟೆಕ್​, ಇ-ಕಾಮರ್ಸ್​, ಡೇಟಾ ಪ್ರೊಸೆಸ್ಸಿಂಗ್​, ವಿತರಣಾ ಜಾಲ ನಿರ್ವಹಣೆ, ಬ್ಯಾಂಕಿಂಗ್​, ಎಫ್​ಎಂಸಿಜಿ, ಆರೋಗ್ಯ ರಕ್ಷಣೆ, ವಿಮೆ, ಡಿಜಿಟಲ್​ ತಜ್ಞರು, ಆರ್ಥಿಕ ವಲಯ ಮತ್ತು ಔಷಧ ವ್ಯವಹಾರಗಳ ಕ್ಷೇತ್ರದಲ್ಲಿ ನೇಮಕಾತಿಗಳು ಹೆಚ್ಚಾಗಿವೆ.
ಇದನ್ನೂ ಓದಿ:ಸತತ 8ನೇ ದಿನವೂ ಜಿಗಿಯಿತು ಪೆಟ್ರೋಲ್​, ಡೀಸೆಲ್​
ಕೋವಿಡ್​ ಪೂರ್ವದ ಸಂದರ್ಭಕ್ಕೆ ಹೋಲಿಸಿದರೆ, ಕೋವಿಡ್​-19 ಲಾಕ್​ಡೌನ್​ ಅವಧಿಯಲ್ಲಿ ದೇಶಾದ್ಯಂತ ವಿವಿಧ ಉದ್ಯೋಗಗಳ ನೇಮಕಾತಿ ಪ್ರಮಾಣ ಶೇ.80 ಕುಸಿದಿತ್ತು. ಆದರೆ ಅನ್​ಲಾಕ್​ 1.0 ಆರಂಭವಾದ ನಂತರದಲ್ಲಿ ಉದ್ಯೋಗ ನೇಮಕಾತಿ ಕುಸಿತ ಪ್ರಮಾಣ ಶೇ.50 ಸುಧಾರಿಸಿದೆ ಎಂದು ಉದ್ಯೋಗ ನೇಮಕಾತಿ ವಲಯದ ತಜ್ಞರು ತಿಳಿಸಿದ್ದಾರೆ.
ವಿವಿಧ ವಲಯಗಳಲ್ಲಿ ನೇಮಕಾತಿ ಪ್ರಮಾಣ ಸಾಕಷ್ಟು ಸುಧಾರಿಸಿದೆ. ಈ ಆವೇಗ ಇನ್ನಷ್ಟು ಕಾಲ ಹೀಗೆ ಮುಂದುವರಿಯಲಿದೆ. ಆದರೆ ಪ್ರವಾಸೋದ್ಯಮದಂಥ ಕೆಲ ವಲಯಗಳಲ್ಲಿ ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್​ಗೆ ಜುಲೈ 1ರಿಂದ ಬೀಳುತ್ತೆ ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
