ನವದೆಹಲಿ:ದೇಶದ ಮೊದಲ ಜಲಾಂತರ್ಗತ ಸುರಂಗ ಮೆಟ್ರೋ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಕೋಲ್ಕತದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಕೋಲ್ಕತ ನಿವಾಸಿಗಳ 53 ವರ್ಷಗಳ ದೊಡ್ಡ ಕನಸೊಂದು ನನಸಾಗಲಿದೆ.
ಹೌರಾ ಹಾಗೂ ಕೋಲ್ಕತಗಳ ಮಧ್ಯೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಹೂಗ್ಲಿ ನದಿಯಲ್ಲಿ ಸಾಗಲಿದೆ. 16.6 ಕಿಲೋಮೀಟರ್ ಉದ್ದದ ಈ ಮೆಟ್ರೋ ಮಾರ್ಗದಲ್ಲಿ ಆರು ನಿಲ್ದಾಣಗಳು ಬರಲಿವೆ. ಇವುಗಳಲ್ಲಿ ಮೂರು ಭೂಮಿಯ ಕೆಳಗಡೆ ಇದ್ದು, ವಾಯುಮಾಲಿನ್ಯ ತಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹೌರಾ ಮೈದಾನ್ ಮತ್ತು ಎಸ್​ಪ್ಲಾಂಡೆ ಸ್ಟೇಷನ್​ಗಳ ನಡುವಿನ 4.8 ಕಿ.ಮೀ. ಉದ್ದದ ಸುರಂಗದ ಪೈಕಿ 1.2 ಕಿ.ಮೀ. ದೂರವು ಹೂಗ್ಲಿ ನದಿಯ 30 ಮೀಟರ್ ಆಳದಲ್ಲಿ ಇರಲಿದೆ. ಇದರೊಂದಿಗೆ ಇದು ಯಾವುದೇ ಬೃಹತ್ ನದಿಯ ಅಡಿಯಲ್ಲಿರುವ ಭಾರತದ ಪ್ರಪ್ರಥಮ ಸಾರಿಗೆ ಸುರಂಗ ಎಂಬ ಖ್ಯಾತಿಗೆ ಒಳಗಾಗಲಿದೆ. ಅಷ್ಟು ಮಾತ್ರವಲ್ಲದೆ, ಹೌರಾ ಮೆಟ್ರೋ ಸ್ಟೇಷನ್ ದೇಶದ ಅತ್ಯಂತ ಆಳದ ಸ್ಟೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.
ಮೆಟ್ರೋ ಕಾರಿಡಾರ್​ನ ಭಾಗ:ಈ ಸುರಂಗವು ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್​ನ ಭಾಗವಾಗಿರುತ್ತದೆ. ಇದನ್ನು ಹೌರಾ ಮೈದಾನದ ವರೆಗೆ ವಿಸ್ತರಿಸಿದಾಗ ಒಟ್ಟು 16.6 ಕಿಲೋಮೀಟರ್ ಉದ್ದ ಆಗಲಿದ್ದು ಆ ಪೈಕಿ 10.8 ಕಿಲೋಮೀಟರ್ ಭೂಮಿಯ ಒಳಗಿರಲಿದೆ ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೌಶಿಕ್ ಮಿತ್ರಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 17 =
Remember me
