ಕೊಚ್ಚಿ:ವೈದ್ಯಕೀಯ ಕ್ಷೇತ್ರವು ಪ್ರತಿದಿನ ಒಂದಲ್ಲ ಒಂದು ಕ್ರಾಂತಿಕಾರಿ ಹಾಗೂ ಅಚ್ಚರಿಯ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಇದೀಗ ವೈದ್ಯಲೋಕವು ಮತ್ತೊಂದು ಐತಿಹಾಸಿಕ ಕ್ಷಣದ ಹೊಸ್ತಿಲಲ್ಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಒಬ್ಬರು ಗರ್ಭಧರಿಸಿದ್ದಾರೆ.
ಜಹಾದ್ ಫಾಜಿಲ್ ಮತ್ತು ಜಿಯಾ ಪೊವೆಲ್ ಇಬ್ಬರು ಕೇರಳದ ತೃತೀಯಲಿಂಗಿ ದಂಪತಿ. ಹುಟ್ಟಿನಲ್ಲಿ ಹೆಣ್ಣಾಗಿ ಗಂಡಾಗಿ ಬದಲಾದ ಜಹಾದ್​ ಫಾಜಿಲ್ ಇದೀಗ​ 8 ತಿಂಗಳ ಗರ್ಭ ಧರಿಸಿದ್ದಾರೆ. ಈ ಬಗ್ಗೆ ಜಿಯಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದು, ತಾಯಿಯಾಗುವ ನನ್ನ ಕನಸಿನಂತೆ, ತಂದೆಯಾಗುವ ಅವನ ಕನಸಿನಂತೆ, ನಮ್ಮ ಸ್ವಂತದ ಹಂಬಲವೂ ಈಡೇರುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಹುಟ್ಟಿನಿಂದಾಗಲೀ, ದೇಹದಿಂದಾಗಲೀ ನಾನು ಹೆಣ್ಣಾಗದಿದ್ದರೂ ನನ್ನಲ್ಲಿರುವ ನನ್ನ ಹೆಣ್ತನವನ್ನು ಅರಿತಿದ್ದೆ. ಆದರೆ, ನನ್ನೊಳಗೆ ಸದಾ ಇದ್ದ ಕನಸೆಂದರೆ ಅದು “ಅಮ್ಮ”…? ಸಮಯವು ನನ್ನ ಆಸೆಗಳನ್ನು ತಿಳಿದಿತ್ತು. ಹೊಟ್ಟೆಯಲ್ಲಿರುವುದು ಯಾರೆಂದು ತಿಳಿಯದಿದ್ದರೂ ಒಂಬತ್ತು ತಿಂಗಳು ಕಾಯುವುದು ತಾಯಿಯ ಪ್ರತಿಕ್ರಿಯೆಯಲ್ಲವೇ? ಎಂದು ಜಿಯಾ ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ್ದಾರೆ.
ಜಹಾದ್​ ಫಾಸಿಲ್​, ನನ್ನ ಕನಸಿನಲ್ಲಿ ನನ್ನೊಂದಿಗೆ ಸೇರಿಕೊಂಡನು. ಸಾಕಷ್ಟು ಮಾನಸಿಕ ಹಿಂಸೆಗಳನ್ನು ಅನುಭವಿಸಿದನು. ತನ್ನ ಇಚ್ಛೆಗೆ ತಕ್ಕಂತೆ ತನ್ನ ದೇಹವನ್ನು ಬದಲಾಯಿಸಲು ಪ್ರಾರಂಭಿಸಿದನು. ಹಾರ್ಮೋನ್ ಚಿಕಿತ್ಸೆ ಮತ್ತು ಸ್ತನ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾದನು. ಸಮಯವು ನಮ್ಮನ್ನು ಒಟ್ಟಿಗೆ ಸೇರಿಸಿದೆ. ಇಂದು 8 ತಿಂಗಳ ಜೀವನ್ ಪೂರ್ಣ ಸಮ್ಮತಿಯೊಂದಿಗೆ ಫಾಸಿಲ್​ ಹೊಟ್ಟೆಯಲ್ಲಿ ಚಲಿಸುತ್ತಿದ್ದಾನೆ ಎಂದು ಇನ್​ಸ್ಟಾಗ್ರಾಂನಲ್ಲಿ ಜಿಯಾ ಬರೆದುಕೊಂಡಿದ್ದಾರೆ.
ಅಂದಹಾಗೆ ಜಿಯಾ ಪೊವೆಲ್ ಓರ್ವ ಖ್ಯಾತ ಡಾನ್ಸರ್​. ಕೇರಳದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ತಮ್ಮ ಜೀವನ ಸಂಗಾತಿ ಜಹಾದ್ ಫಾಜಿಲ್ ಜೊತೆ ಮಗು ಹೊಂದುವುದರೊಂದಿಗೆ ಕೇರಳದಲ್ಲಿ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ. (ಏಜೆನ್ಸೀಸ್​)

A post shared by Ziya Paval (@paval19)

ಸಿಕಲ್ ಸೆಲ್ ಅನೀಮಿಯಾ ವಿರುದ್ಧ ಮಹತ್ವದ ಹೆಜ್ಜೆ; ತಜ್ಞರ ಅಭಿಪ್ರಾಯ

ಮತದಾರರಿಗೆ ಆಮಿಷ, ಆಯೋಗ ನಿಗಾ; ಚುನಾವಣಾ ಪೂರ್ವಸಿದ್ಧತೆ ಕುರಿತು ರಾಜ್ಯಮಟ್ಟದ ಸಭೆ

ಯುವಕನಿಗೆ ಸಾನ್ಯ ಅಯ್ಯರ್ ಕಪಾಳಮೋಕ್ಷ: ತಿರುಗಿ ಪುಟ್ಟಗೌರಿಯ ಕೆನ್ನೆಗೆ ಬಾರಿಸಿದ ಯುವಕ, ಪುತ್ತೂರಿನಲ್ಲಿ ಸಾನ್ಯ ಟೀಂ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + seven =
Remember me
