ಪಜಯನ್ನು (ತಿಸ್ಸೂರ್​):ದಿನವಿಡಿ ಬರೀ ಚಿತ್ರಹಿಂಸೆಯನ್ನೇ ಅನುಭವಿಸುತ್ತಿದ್ದ ಸೂರ್ಯಪ್ರಭಾ ಎಂಬ ಯುವತಿಯ ಬಾಳಲ್ಲಿ ಕಷ್ಟದ ಕತ್ತಲೆ ಕವಿದು ಇದೀಗ ಬೆಳಕಿನ ಚಿತ್ತಾರ ಮೂಡಿದೆ. ತುಂಬಾ ಪ್ರೀತಿಸುವ ತಂದೆ-ತಾಯಿಯನ್ನು ಪಡೆದುಕೊಂಡ ಸೂರ್ಯಪ್ರಭಾಗೆ ಜೀವನದುದ್ದಕ್ಕೂ ಜತೆಯಾಗಿ ನಡೆಯುವ ಒಳ್ಳೆಯ ಹುಡುಗನನ್ನು ಕೈಹಿಡಿದಿದ್ದು, ಆಕೆಯ ಜೀವನವೇ ಸಂಪೂರ್ಣ ಬದಲಾವಣೆಯಾಗಿದೆ.
ಹದಿನೆಂಟು ವರ್ಷದ ಸೂರ್ಯಪ್ರಭಾ ಮೂಲತಃ ಕೊಂಡಾಜಿ ನಿವಾಸಿ. ವರ್ಷಗಳ ಹಿಂದೆಯೇ ತನ್ನ ತಂದೆಯನ್ನು ಕಳೆದುಕೊಂಡಿರುವ ಆಕೆ ತಾಯಿ ಮತ್ತು ಮಲತಂದೆಯ ಆಶ್ರಯದಲ್ಲಿದ್ದಳು. ಆದರೆ, ಆಕೆಯ ಜೀವನ ಹೂವಿನ ಮೇಲಿನ ನಡಿಗೆಯಂತಿರದೆ, ಮುಳ್ಳಿನ ಮೇಲಿನ ನಡಿಗೆಯಂತಿತ್ತು. ಏಕೆಂದರೆ ತಾಯಿ ಮತ್ತು ಮಲತಂದೆ ನಿತ್ಯವು ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದಲೇ ಆರಂಭವಾಗುವ ದಿನ ಕಿರುಕುಳದಿಂದ ಅಂತ್ಯವಾಗುತ್ತಿತ್ತು.
ಇದನ್ನೂ ಓದಿ:ಅಕ್ಕನಿಂದಲೇ 15 ವರ್ಷದ ತಂಗಿಯ ಮೇಲೆ ನಿರಂತರ ರೇಪ್​: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆ ಇದು!
ಸೂರ್ಯಪ್ರಭಾಳ ಕಷ್ಟ ನೋಡಿದ ಸ್ಥಳೀಯರು ತಿಂಗಳ ಹಿಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಮಲತಂದೆಯನ್ನು ವಶಕ್ಕೆ ಪಡೆದಿದ್ದರು. ಸೂರ್ಯಪ್ರಭಾಳನ್ನೂ ಜತೆಯಲ್ಲಿಯೇ ಕರೆತಂದಿದ್ದರು. ದಿನ ನಿತ್ಯವು ನರಕ ದರ್ಶನ ಮಾಡುತ್ತಿದ್ದ ಸೂರ್ಯಪ್ರಭಾ ಮತ್ತೆ ಮನೆಗೆ ಹೋಗಲು ನಿರಾಕರಿಸಿದಳು.
ಇನ್ನೊಂದೆಡೆ ಮಕ್ಕಳಿಲ್ಲದ ದಂಪತಿ ಶಿವದಾಸನ್​ ಮತ್ತು ನಿಶಾ ಸೂರ್ಯಪ್ರಭಾಳ ಮಾಹಿತಿ ತಿಳಿದು ಆಕೆಗೆ ನೆರವು ನೀಡಲು ಪೊಲೀಸ್​ ಠಾಣೆಗೆ ಆಗಮಿಸಿದರು. ಇದಕ್ಕೂ ಮುನ್ನ ಸೂರ್ಯಪ್ರಭಾ, ಪಜಯನ್ನೂನಲ್ಲಿರುವ ಶಿವದಾಸನ್​ ದಂಪತಿಯ ವ್ಹೀಲರ್​ ಶಾಪ್​ನಲ್ಲಿ ಕೆಲ ದಿನಗಳವರೆಗೆ ಕೆಲಸ ಮಾಡಿದ್ದಳು. ಆಗಲೇ ನಿಶಾ ಅವರು ಸೂರ್ಯಪ್ರಭಾಳನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು. ಎಲ್ಲ ವಿಷಯ ತಿಳಿದ ಬಳಿಕ ಪೊಲೀಸ್​ ಅಧಿಕಾರಿಗಳ ಮನವಿ ಮಾಡಿಕೊಂಡ ದಂಪತಿ, ಸೂರ್ಯಪ್ರಭಾಳನ್ನು ದತ್ತು ಪಡೆದು ತಮ್ಮೊಂದಿಗೆ ಕರೆದೊಯ್ದರು.
ಇದನ್ನೂ ಓದಿ:ಶೌಚಕ್ಕೆಂದು ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿ ದುರಂತ ಸಾವು: ಸರ್ಕಾರಕ್ಕೆ ಆಯೋಗದ ಶಾಕ್​!
ಇದೇ ವೇಳೆ ಸೂರ್ಯಪ್ರಭಾಳ ಬಗ್ಗೆ ತಿಳಿದ ತಿರುವಿಲ್ವಮಲಾ ನಿವಾಸಿ ಮನೋಜ್​ ಆಕೆಯನ್ನು ಮದುವೆಯಾಗಲು ಮುಂದೆ ಬಂದ. ಇದನ್ನು ತಿಳಿದ ಶಿವದಾಸನ್​ ದಂಪತಿ ಮದುವೆ ಸಿದ್ಧತೆ ಮಾಡಿ, ವಿವಾಹವನ್ನೂ ಮಾಡಿಕೊಟ್ಟಿದ್ದಾರೆ. ಕಾರ್ಪೆಂಟರ್​ ಆಗಿರುವ ಶಿವದಾಸನ್​ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೂರ್ಯಪ್ರಭಾಳಿಗೆ ಆಭರಣಗಳನ್ನು ಮಾಡಿಸಿಕೊಟ್ಟಿದ್ದಾರೆ. ಕೊಡತೂರ್​ ಭಗವತಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆಯಿತು. ಮಾನವೀಯತೆ ಮರೆಯಾಗುತ್ತಿರುವ ಕಾಲದಲ್ಲಿ ಶಿವದಾಸನ್​ ದಂಪತಿ ಮತ್ತು ಮನೋಜ್​, ಸೂರ್ಯಪ್ರಭಾಳ ಬಾಳಿನಲ್ಲಿ ಹೊಸ ಬೆಳಕು ತರುವ ಮೂಲಕ ಮನುಷ್ಯತ್ವ ಮೆರೆದರು.(ಏಜೆನ್ಸೀಸ್​)
ಹಣಕ್ಕಾಗಿ ಮನುಷ್ಯತ್ವವನ್ನೇ ಮರೆತ ರಾಕ್ಷಸ ಯುವಕ: ಈತನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಗ್ರಾ.ಪಂ ಚುನಾವಣೆಗೆ ನಿರ್ಗತಿಕ ವ್ಯಕ್ತಿಯನ್ನು ಅಖಾಡಕ್ಕಿಳಿಸಿದ ಯುವಕರು!

2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
