ಕೊಚ್ಚಿ:ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಕೇರಳದ ಎರ್ನಾಕುಲಂನ ಕದಮಕ್ಕುಡಿಯಲ್ಲಿ ನಡೆದಿದೆ.
ಮೃತರನ್ನು ಕದಮಕ್ಕುಡಿ ನಿವಾಸಿ ನಿಜೋ (39), ಆತನ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್​ (7) ಮತ್ತು ಆ್ಯರೂನ್​ (5) ಎಂದು ಗುರುತಿಸಲಾಗಿದೆ. ಆರ್ಥಿಕ ಸಮಸ್ಯೆಯಿಂದ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಿಜೋ ಮತ್ತು ಶಿಲ್ಪಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಮಕ್ಕಳಿಬ್ಬರು ಬೆಡ್​ ಮೇಲೆ ಹೆಣವಾಗಿ ಬಿದ್ದಿದ್ದರು. ಇಬ್ಬರು ಗಂಡು ಮಕ್ಕಳಿಗೆ ವಿಷವುಣಿಸಿ ದಂಪತಿ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ:ಹಣಕ್ಕೆ ಬೇಡಿಕೆ ಇಟ್ಟರೆ ಅಮಾನತು ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಬಾಲಕೃಷ್ಣ ಎಚ್ಚರಿಕೆ
ನಿಜೋ ಕುಟುಂಬ ಮಹಡಿಯ ಮೇಲೆ ವಾಸವಿದ್ದರು. ಅವರ ತಾಯಿ, ಸಹೋದರ ಮತ್ತು ಕುಟುಂಬ ನೆಲಮಹಡಿಯಲ್ಲಿ ವಾಸವಿದ್ದರು. ಮಕ್ಕಳು ಕಾಣದಿದ್ದಾಗ ನಿಜೋ ಅವರ ತಾಯಿ ಬೆಳಗ್ಗೆ ಮೇಲಿನ ಮಹಡಿಗೆ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ಪರವೂರ್​ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.
ನಿಜೋ ಒಬ್ಬ ಕಟ್ಟಡ ಕಾರ್ಮಿಕ ಮತ್ತು ಕಲಾವಿದ. ಮಕ್ಕಳು ವರಪುಳ ಇಸಾಬೆಲ್ಲಾ ಶಾಲೆಯಲ್ಲಿ ಓದುತ್ತಿದ್ದರು. ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಿಲ್ಪಾ ಕೆಲಸದ ನಿಮಿತ್ತ ಇಟಲಿಗೆ ಹೋಗಿದ್ದರು. ಆದರೆ, ಬಯಸಿದ ಕೆಲಸ ಸಿಗದೆ ಹಿಂತಿರುಗಬೇಕಾಯಿತು. ಹೆಚ್ಚುವರಿ ಆರ್ಥಿಕ ಹೊರೆ ಕುಟುಂಬವನ್ನು ದುಡುಕಿನ ಹೆಜ್ಜೆ ಇಡುವಂತೆ ಪ್ರೇರೇಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಆದಷ್ಟು ಬೇಗ ಡೀಸೆಲ್​ ವಾಹನಗಳಿಗೆ ಗುಡ್​ಬೈ ಹೇಳಿ ಇಲ್ಲದಿದ್ದರೆ…ಕಾರು ತಯಾರಕರಿಗೆ ನಿತಿನ್​ ಗಡ್ಕರಿ ವಾರ್ನಿಂಗ್​

20 ಕೋಟಿಯಲ್ಲಿ 6 ಸೊನ್ನೆ!; ವೈರಲ್ ಆಯ್ತು ಬಿಜೆಪಿ ಸಂಸದರ ತಪ್ಪು ಹೇಳಿಕೆ

ಬನಾರಸಿ ಸೀರೆ, ಕನ್ನೌಜ್ ಸುಗಂಧ ದ್ರವ್ಯ, ಡಾರ್ಜಿಲಿಂಗ್ ಚಹಾ….ಜಿ20 ಅತಿಥಿಗಳಿಗೆ ಮೋದಿ ಏನೆಲ್ಲಾ ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
