ಹೈದರಾಬಾದ್:‘ಎವೆರಿ ಡಾಗ್ ಹ್ಯಾಸ್ ಇಟ್ಸ್​ ಓನ್ ಡೇ..’ ಎಂದು ಇಂಗ್ಲಿಷ್​ನಲ್ಲಿ ಒಂದು ಮಾತಿದೆ. ಅದು ಅಕ್ಷರಶಃ ಸತ್ಯ ಎನಿಸುವಂಥ ಸಮಾರಂಭವೊಂದು ಇತ್ತೀಚೆಗೆ ನಡೆದಿದೆ. ಅದೇನೆಂದರೆ, ಇಲ್ಲೊಂದು ದಂಪತಿ ನಾಯಿಗೂ ಸೀಮಂತ ಮಾಡಿಸಿ, ತಮ್ಮ ನೆಂಟರಿಷ್ಟರಿಗೆಲ್ಲ ಆಹ್ವಾನ ನೀಡಿ ಊಟ ಹಾಕಿಸಿ ಕಳುಹಿಸಿದ್ದಾರೆ.
ಅಂದಹಾಗೆ ಆ ಅದೃಷ್ಟವಂತ ನಾಯಿಯ ಹೆಸರು ಸ್ಟೆಫಿ. ಒಂದೂವರೆ ವರ್ಷದ ಈ ಹೆಣ್ಣುನಾಯಿಗೆ ತೆಲುಗರ ಸಂಪ್ರದಾಯದಂತೆ ಸೀಮಂತ ಮಾಡಲಾಗಿದೆ. ತೆಲಂಗಾಣದ ನವಕುಮಾರ್-ಆಶಾ ದಂಪತಿ ಈ ನಾಯಿಯನ್ನು ಸಾಕಿದ್ದು, ಕಳೆದ ವಾರ ಅವರು ಹಾಗೂ ಅವರ ಪತ್ನಿ ಜೊತೆಯಾಗಿ ನಾಯಿಗೆ ಸೀಮಂತ ಏರ್ಪಡಿಸಿ, ಸಂಭ್ರಮ ಪಟ್ಟಿದ್ದಾರೆ.
ಇದನ್ನೂ ಓದಿ:ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…
ಸ್ಟೆಫಿ ನಮಗೆ ಮಗಳ ಥರ ಎನ್ನುವ ಈ ದಂಪತಿ, ಈ ನಾಯಿಯ ಮೊದಲ ಜನ್ಮದಿನವನ್ನೂ ಹೀಗೇ ಮನುಷ್ಯರ ಜನ್ಮದಿನವನ್ನು ಆಚರಿಸುವಂತೆಯೇ ಆಚರಣೆ ಮಾಡಿದ್ದಾಗಿಯೂ ಹೇಳಿದ್ದಾರೆ. ಕಳೆದ ಅಕ್ಟೋಬರ್​ನಲ್ಲಿ ನಾವು ಸ್ಟೆಫಿಯ ಮೊದಲ ಬರ್ತ್​ಡೇ ಆಚರಿಸಿ ನೆಂಟರಿಷ್ಟರಿಗೆಲ್ಲ ಊಟ ಹಾಕಿಸಿದ್ದೆವು. ಈ ಸಲ ಸ್ಟೆಫಿ ಗರ್ಭವತಿ ಆದಾಗ ಯಾಕೆ ಅದೇರೀತಿ ಅವಳ ಸೀಮಂತ ಮಾಡಬಾರದು? ಸ್ಟೆಫಿಯೂ ಒಂದು ರೀತಿಯಲ್ಲಿ ನಮ್ಮ ಮನೆಯ ಸದಸ್ಯಳಂತೆಯೇ ಆಗಿರುವುದರಿಂದ ಈ ಸೀಮಂತ ಮಾಡಿದ್ದಾಗಿ ಆ ದಂಪತಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಇದು ಸೆಕ್ಸ್​ ಚೇಂಜ್​ನ ಸೈಡ್ ಇಫೆಕ್ಟ್​: ಈಗ ಒಂದಕ್ಕೊಂದು ತಾಳೆ ಆಗುತ್ತಿಲ್ಲವಂತೆ..!!!

ಕಂಬಳಕ್ಕೆ ಮತ್ತೊಂದು ಗರಿ: ಓಟದಲ್ಲಿ ಹಿಂದಿನ ದಾಖಲೆ ಮುರಿದು ಇನ್ನೊಂದು ಇತಿಹಾಸ ಸೃಷ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
