ಪಾನಿಹಟಿ:ಮದ್ಯ ಖರೀದಿಸಲು ಹಣವಿಲ್ಲದ ಕಾರಣ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಪಾನಿಹಟಿ ಎಂಬಲ್ಲಿ ನಡೆದಿದೆ.ಇದನ್ನೂ ಓದಿ:ತನ್ನ ಅನುಪಸ್ಥಿತಿಯಲ್ಲಿ ಮಗನ ಅಂತ್ಯ ಸಂಸ್ಕಾರ: ಹೆಂಡತಿ ಸೇರಿದಂತೆ 13 ಜನರ ಪ್ರಾಣ ತೆಗೆದ ಸೈನಿಕಘಟನೆಗೆ ಸಂಬಂಧಿಸಿದಂತೆ ಜೈದೇಬ್ ಚೌಧರಿ (ತಂದೆ), ಸತಿ ಚೌಧರಿ (ತಾಯಿ) ಮತ್ತು ಕನೈ ಚೌಧರಿ (ಅಜ್ಜ) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ತಮ್ಮ ಆರು ತಿಂಗಳ ಮಗುವನ್ನು ಮದ್ಯ ಖರೀದಿಸಲು ಹಣಕ್ಕಾಗಿ ಮಾರಾಟ ಮಾಡಿದ ಆರೋಪದ ಹೊರಿಸಲಾಗಿದೆ. ಅಲ್ಲದೇ, ಮಕ್ಕಳ ಕಳ್ಳಸಾಗಣೆ ದಂಧೆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಮಗುವನ್ನು ಮಾರಾಟ ಮಾಡಿದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕೆಲ ಸಮಯದಿಂದ ಮನೆಯಿಂದ ಮಗು ಕಾಣೆಯಾಗಿತ್ತು. ಈ ಬಗ್ಗೆ ನೆರೆಹೊರೆಯವರು ವಿಚಾರಿಸಿದಾಗ, ಮಗು ಸಂಬಂಧಿಕರ ಬಳಿ ಇದೆ ಎಂದು ದಂಪತಿಗಳು ಸುಳ್ಳು ಹೇಳಿದ್ದಾರೆ. ಅವರ ನಡುವಳಿಕೆಯಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ.ಇದನ್ನು ಓದಿ:ಇಂಟರ್ನೆಟ್‌ ಬಳಕೆದಾರರಿಗೆ ವಾರ್ನಿಂಗ್: ಅಕಿರಾ ಬಗ್ಗೆ ಹುಷಾರಾಗಿರುವಂತೆ ಸರ್ಕಾರದಿಂದ ಎಚ್ಚರಿಕೆಈ ಕುರಿತು ಮಾತನಾಡಿದ ಸ್ಥಳೀಯರು, ದಂಪತಿಗಳು ಆಗಾಗ ಮದ್ಯಪಾನ ಮಾಡುತ್ತಿದ್ದರು, ಇದು ಕುಟುಂಬದಲ್ಲಿ ಕಲಹವನ್ನುಂಟು ಮಾಡುವುದರ ಜತೆಗೆ ನೆರೆಹೊರೆಯವರೊಂದಿಗೆ ತೀವ್ರ ಜಗಳಕ್ಕೆ ಕಾರಣವಾಗಿತ್ತು. ಆದರೆ ಕುಡಿತದ ಚಟವು ತಮ್ಮ ಸ್ವಂತ ಮಗುವನ್ನೇ ಮಾರಾಟ ಮಾಡುವಷ್ಟು ಪ್ರೇರೇಪಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 18 =
Remember me
