ಪಣಜಿ:ಮನೆಯವರಿಗೆ ತಿಳಿಸದೆ ಪ್ರೇಮಿಗಳ ದಿನ ಆಚರಿಸಲು ಗೋವಾಗೆ ತೆರಳಿದ್ದ ಪ್ರೇಮಿಗಳಿಬ್ಬರು ಸಮುದ್ರದಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಸೋಮವಾರ ಸಂಜೆ ಪಾಲೊಲೇಮ್​ ಬೀಚ್​ನಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ಸುಪ್ರಿಯಾ ದುಬೇ (26) ಮತ್ತು ವಿಭು ಶರ್ಮಾ (27) ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಉತ್ತರ ಪ್ರದೇಶ ಮೂಲದವರು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಗೋವಾ ಪೊಲೀಸರು ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಸಿದರು. ಬಳಿಕ ಅವರನ್ನು ಸಮೀಪದ ಕೊಂಕಣ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಸ್ಥಳಾಂತರಿಸಲಾಗಿದೆ.
ಮೃತ ಸುಪ್ರಿಯಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ವಿಭು ದೆಹಲಿಯಲ್ಲಿ ವಾಸವಿದ್ದನು. ಇಬ್ಬರು ಕೂಡ ಸಂಬಂಧಿಕರು ಎಂದು ತಿಳಿದುಬಂದಿದೆ. ಇವರಿಬ್ಬರು ಗೋವಾಗೆ ಬಂದಿರುವುದು ಎರಡು ಕುಟುಂಬಗಳಿಗೆ ತಿಳಿಯದಿರುವ ಕಾರಣ ಸಾವಿನ ಬಗ್ಗೆ ಮಾಹಿತಿ ಆ ಕ್ಷಣಕ್ಕೆ ತಿಳಿಯಲಿಲ್ಲ. ಬಳಿಕ ಪೊಲೀಸರು ಇಬ್ಬರ ಮಾಹಿತಿ ಕಲೆಹಾಕಿ ಸಾವಿನ ಸುದ್ದಿಯನ್ನು ಮುಟ್ಟಿಸಿದ್ದಾರೆ.
ಸುಪ್ರಿಯಾ ಮತ್ತು ವಿಭು ಕಳೆದ ಎರಡು ದಿನಗಳಿಂದ ಗೋವಾದಲ್ಲಿದ್ದರು ಮತ್ತು ಸೋಮವಾರ ಪಲೋಲೆಮ್ ಬೀಚ್ ಬಳಿ ಸ್ಥಳೀಯರು ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಕೊಯಮತ್ತೂರು ಬಾಂಬ್​ ಸ್ಫೋಟ ಪ್ರಕರಣ: ಕರ್ನಾಟಕ, ಕೇರಳ, ತಮಿಳನಾಡಿನಲ್ಲಿ ಎನ್​ಐಎ ದಾಳಿ

ಸೊಸೆಯ ಕಷ್ಟಕ್ಕೆ ಮಿಡಿದ ಮಾವನ ಹೃದಯ: ಮಗನಿಂದಲೇ ನಡೆಯಿತಾ ಘೋರ ದುರಂತ?

ಹನಿಮೂನ್​ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡ ವರ! ಕಾರಣ ಕೇಳಿ ದಂಗಾದ ಪಾಲಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
