ಲಂಡನ್​:ಅನೇಕ ಜನರು ವಿಮಾನದಲ್ಲಿ ಪ್ರಯಾಣಿಸುವಾಗ ಇಯರ್‌ಫೋನ್‌ ಹಾಕಿಕೊಂಡು ಸಿನಿಮಾ ನೋಡುತ್ತಾ ಅಥವಾ ಹಾಡುಗಳನ್ನು ಕೇಳುತ್ತಾ ತಮ್ಮ ಸಮಯವನ್ನು ಕಳೆಯುತ್ತಾರೆ. ಇನ್ನು ಕೆಲವರು ನಿದ್ರೆಗೆ ಜಾರುತ್ತಾರೆ. ಇದಿಷ್ಟು ವಿಮಾನ ಪ್ರಯಾಣದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳು. ಆದರೆ, ಲಂಡನ್​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಜೋಡಿಯೊಂದು ವಿಮಾನದ ಟಾಯ್ಲೆಟ್​ ಒಳಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಒಂದೇ ಟಾಯ್ಲೆಟ್​ ಒಳಗೆ ಹೋಗಿ ಸಾಕಷ್ಟು ಸಮಯದವರೆಗೂ ಹೊರಗೆ ಬರಲಿಲ್ಲ. ಟಾಯ್ಲೆಟ್​ ಬಾಗಿಲು ಹೊರಗಡೆಯಿಂದ ತೆರೆದಿತ್ತು. ಇದನ್ನು ಗಮನಿಸಿ ವಿಮಾನದ ಸಿಬ್ಬಂದಿ ಹೊರಗೆ ಬರುವಂತೆ ಕರೆದರು. ಆದರೆ, ಇಬ್ಬರು ಕೂಡ ಕರೆಗೆ ಸ್ಪಂದಿಸಲಿಲ್ಲ. ಬಳಿಕ ಟಾಯ್ಲೆಟ್​ ಬಾಗಿಲನ್ನು ಸಿಬ್ಬಂದಿ ಓಪನ್​ ಮಾಡಿದಾಗ ಒಳಗಿನ ದೃಶ್ಯವನ್ನು ನೋಡಿ ವಿಮಾನದ ಸಿಬ್ಬಂದಿ ಸೇರಿದಂತೆ ವಿಮಾನ ಪ್ರಯಾಣಿಕರು ಶಾಕ್​ ಆದರು.
ಇದನ್ನೂ ಓದಿ:ಅನ್ನಭಾಗ್ಯ ಗ್ಯಾರಂಟಿ ಫಲಾನುಭವಿಗಳಿಗೆ ಸರ್ವರ್ ಅಡ್ಡಿ!; ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಮಾರುದ್ದ ಸಾಲು
ಟಾಯ್ಲೆಟ್​ ಒಳಗೆ ಜೋಡಿ ಸೆಕ್ಸ್​ನಲ್ಲಿ ಬಿಜಿಯಾಗಿದ್ದರು. ಬಾಗಿಲು ತೆರೆದಿರುವುದನ್ನು ನೋಡಿ ತಕ್ಷಣವೇ ಒಳಗಿದ್ದ ವ್ಯಕ್ತಿ ಬಾಗಿಲು ಹಾಕಿಕೊಂಡರು. ಆದರೂ ಇದೆಲ್ಲ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್​ ಫೋನ್​ನಲ್ಲಿ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಜೋಡಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.
ಅಂದಹಾಗೆ ಈ ಘಟನೆ ಇದೇ ಸೆ. 8 ರಂದು ನಡೆದಿದೆ. ಲಂಡನ್‌ನ ಲುಟನ್ ಸಿಟಿಯಿಂದ ಲಿಬಿಜಾ ದ್ವೀಪಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿರುವುದಾಗಿ ಈಸಿಜೆಟ್ ಕಂಪನಿ ಬಹಿರಂಗಪಡಿಸಿದೆ. ಎರಡೂವರೆ ಗಂಟೆಗಳ ಈ ಪ್ರಯಾಣದಲ್ಲಿ ದಂಪತಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಲಿಬಿಜಾ ದ್ವೀಪದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ದಂಪತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆಯೇ? ಅಥವಾ ಎಚ್ಚರಿಸಿ ಬಿಟ್ಟಿದ್ದಾರಾ? ಎಂಬುದನ್ನು ವಿಮಾನಯಾನ ಸಂಸ್ಥೆ ವಿವರಗಳನ್ನು ಬಹಿರಂಗಪಡಿಸಿಲ್ಲ.(ಏಜೆನ್ಸೀಸ್​)
ದೇವಾಲಯಗಳ ಸುತ್ತ ತಂಬಾಕು ನಿಷೇಧ: ಗುಟ್ಖಾ, ಸಿಗರೇಟ್, ಪಾನ್ ಮಸಾಲಾ ಮಾರಾಟ ಮಾಡುವಂತಿಲ್ಲ; ರಾಜ್ಯ ಸರ್ಕಾರ ಚಿಂತನೆ

ಕೇಂದ್ರದ ಮಧ್ಯಪ್ರವೇಶ ಅಗತ್ಯ: ಕರ್ನಾಟಕದ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eighteen =
Remember me
