ಹೈದರಾಬಾದ್​:ಮಹಾಮಾರಿ ಕರೊನಾ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮೊದಲಿಗಿಂತ ಜನರು ಕರೊನಾವನ್ನು ಮರೆತು ಯಾವುದೇ ಭಯವಿಲ್ಲದೇ ನಿತ್ಯ ಜೀವನದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ, ಆರಂಭದಲ್ಲಿ ಇದ್ದ ಕರೊನಾ ತೀವ್ರತೆ ಈಗ ಇಲ್ಲ. ಕರೊನಾ ಕಣ್ಮರೆಯಾಗುತ್ತಿರುವ ಸಮಯದಲ್ಲಿ ದಂಪತಿ ಕರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್​ ನಗರ ಜಿಲ್ಲೆಯ ಜಗಿತ್ತಲದಲ್ಲಿ ನಡೆದಿದೆ.
ಗಂಜಿ ರಾಂಬಾಬು (49) ಮತ್ತು ಲಾವಣ್ಯ (47) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಜಗಿತ್ತಲದ ಶಿವ ಸ್ಟ್ರೀಟ್​ ಮನೆಯಲ್ಲಿ ಗುರುವಾರ ಸಾವಿಗೆ ಶರಣಾಗಿದ್ದಾರೆ. ಆದರೂ ಸಾವಿನ ಕಾರಣ ಬಗ್ಗೆ ನಿಖರ ಮಾಹಿತಿ ಖಚಿತವಾಗಿಲ್ಲ. ಕೆಲವರು ಕರೊನಾ ಭಯಕ್ಕೆ ಸತ್ತಿದ್ದಾರೆ ಎಂದು ಮಾತನಾಡಿಕೊಂಡರೆ, ಇನ್ನು ಕೆಲವರು ಆರ್ಥಿಕ ಸಮಸ್ಯೆಗೆ ಹೆದರಿ ಪ್ರಾಣ ಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಏನೇ ಆದರೂ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ.
ರಾಂಬಾಬು ದಂಪತಿ ಮುಂಬೈನ ಜಾಹಿರಾತು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ರಾಜೇಶನ್​ ಅನಾರೋಗ್ಯದಿಂದಾಗಿ ಜಗಿತ್ತಲಕ್ಕೆ ಬಂದಿದ್ದರು. ಕಳೆದ 10 ತಿಂಗಳ ಹಿಂದೆ ತಂದೆ ನಿಧನದ ಬಳಿಕವೂ ದಂಪತಿ ಜಗಿತ್ತಲದಲ್ಲಿ ವಾಸವಿದ್ದರು.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಗ್ಯಾಂಗ್​ರೇಪ್​: ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ, ತಲಾ 5 ಲಕ್ಷ ರೂ. ದಂಡ
ಇದರ ನಡುವೆ ರಾಂಬಾಬು ಅವರಲ್ಲಿ ಮೂರು ದಿನಗಳ ಹಿಂದೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಪರೀಕ್ಷಿಸಿದಾಗ ಪಾಸಿಟಿವ್​ ಬಂದಿತ್ತು. ಅಂದಿನಿಂದ ದಂಪತಿ ಮನೆ ಬಿಟ್ಟು ಹೊರಗೇ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಗುರುವಾರ ಲಾವಣ್ಯಗೂ ಕರೊನಾ ಪಾಸಿಟಿವ್​ ಆಗಿತ್ತು. ಈ ಬಗ್ಗೆ ಆಕೆ ಚೋಪಂಡಿ ಮಂಡಲದ ಅರ್ನಕೊಂಡದಲ್ಲಿರುವ ತನ್ನ ಪಾಲಕರಿಗೆ ಫೋನ್​ ಮೂಲಕ ತಿಳಿಸಿದ್ದಳು.
ಚಿಕಿತ್ಸೆಗಾಗಿ ಕರೀಮ್​ ನಗರ ಆಸ್ಪತ್ರೆಯೊಂದಕ್ಕೆ ದಾಖಲಾಗುವುದಾಗಿ ದಂಪತಿ ಹೇಳಿದ್ದರು. ಅದರಂತೆ ಪಾಲಕರು ಕರೀಮ್​ ನಗರದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಳಿಕ ಮಗಳಿಗೆ ಫೋನ್​ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದಿದ್ದಾಗ ರಾಂಬಾಬುವಿಗೆ ಕರೆ ಮಾಡಿದ್ದಾರೆ. ಆತನೂ ಸಹ ಸ್ವೀಕರಿಸದಿದ್ದಾಗ ಪಾಲಕರು ನೇರವಾಗಿ ಜಗಿತ್ತಲದಲ್ಲಿರುವ ಮನೆಗೆ ತೆರಳಿದ್ದಾರೆ.
ಹೋಗಿ ನೋಡುವಷ್ಟರಲ್ಲಿ ದಂಪತಿಯ ಶವ ಮನೆಯ ಫ್ಯಾನ್​ನಲ್ಲಿ ನೇತಾಡುತ್ತಿತ್ತು. ಆಘಾತಗೊಂಡ ಕುಟುಂಬ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಗುರುವಾರ ರಾತ್ರಿ 11 ಗಂಟೆಗೆ ಜಗಿತ್ತಲ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.
ಇದನ್ನೂ ಓದಿ:ಬದುಕಿಡೀ ಬರೆದ ರವಿ ಬೆಳಗೆರೆ; ಬರೆಯುತ್ತಲೇ ಬದುಕು ಮುಗಿಸಿದರು…
ಕರೊನಾ ಪಾಸಿಟಿವ್​ ಆದ್ದರಿಂದ ಚಿಕಿತ್ಸೆ ತುಂಬಾ ಹಣ ಖರ್ಚಾಗಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಲಾವಣ್ಯ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಜಾಹಿರಾತು ಸಂಸ್ಥೆಯ ಕೆಲಸವನ್ನು ಬಿಟ್ಟು ತಂದೆಯನ್ನು ನೋಡಿಕೊಳ್ಳಲು ಬಂದಾಗಿನಿಂದ ಮನೆಯಲ್ಲಿಯೇ ಉಳಿದಿದ್ದ ದಂಪತಿ ಆರ್ಥಿಕವಾಗಿಯೂ ಸಾಕಷ್ಟು ಸಂಕಷ್ಟ ಎದುರಿಸಿದ್ದರು ಎಂದು ತಿಳಿದುಬಂದಿದೆ.
ಇದರ ನಡುವೆ ತಮ್ಮ ಸಮಸ್ಯೆಯಿಂದ ಹೊರಬರಲು ಮನೆಯನ್ನು ಮಾರಾಟ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರಂತೆ. ಸಹೋದರರು ಹಾಗೂ ರಾಂಬಾಬು ನಡುವೆ ಆಗಾಗ ಜಗಳವು ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ ಕರೊನಾ ಪಾಸಿಟಿವ್​ ಆದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಅಲ್ಲದೆ, ಮದುವೆ ಆದಾಗಿನಿಂದ ಮಕ್ಕಳಾಗಿರಲಿಲ್ಲ ಎಂಬ ಚಿಂತೆಯೂ ದಂಪತಿಗೆ ಕಾಡುತ್ತಿತ್ತಂತೆ. ಹೀಗಾಗಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಿಗೂಢವಾಗಿದೆ. ಆದರೆ, ಮೂಲ ಕಾರಣ ಕರೊನಾನೇ ಇರಬಹುದು ಎಂಬುದು ಅನೇಕರ ವಾದವಾಗಿದೆ.(ಏಜೆನ್ಸೀಸ್​)
ಮನೆಯೊಂದರ ಮುಂದೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + four =
Remember me
