ಕಣ್ಣೂರು:ಆಸ್ಪತ್ರೆಗೆ ಹೋಗುವಾಗ ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿದು ಗಂಡ ಮತ್ತು ಗರ್ಭಿಣಿ ಪತ್ನಿ ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನಲ್ಲಿ ಮೊನ್ನೆ (ಫೆ.2) ನಡೆದಿದ್ದು, ಈ ಅವಘಡಕ್ಕೆ ಕಾರಣ ಏನೆಂಬುದೇ ಕೇರಳ ಸಾರಿಗೆ ಇಲಾಖೆಗೆ ಬಹುದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದೆ.
ಫೆ.2ರಂದು ಬೆಳಗ್ಗೆ ಕಣ್ಣೂರು ಮೂಲದ ರೀಶಾ (26) ಮತ್ತು ಪತಿ ಪ್ರಿಜಿತ್​ (35) ಇಬ್ಬರು ಆಸ್ಪತ್ರೆಗೆ ತೆರಳುತ್ತಿದ್ದರು. ಗರ್ಭಿಣಿ ರೀಶಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. 2020 ಮಾರುತಿ ಎಸ್​- ಪ್ರೆಸ್ಸೋ ಕಾರಿನಲ್ಲಿ ಒಟ್ಟು 6 ಮಂದಿ ತೆರಳುತ್ತಿದ್ದರು. ಒಂದು ಮಗು ಸೇರಿದಂತೆ ನಾಲ್ವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹಿಂದೆ ಕುಳಿತ್ತಿದ್ದವರು ಎಸ್ಕೇಪ್​ ಆದರು. ಆದರೆ, ಮುಂದೆ ಕುಳಿತಿದ್ದ ದಂಪತಿಯ ಕೈಯಿಂದ ಕಾರಿನ ಬಾಗಿಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದರು.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ರೀಶಾ ಮತ್ತು ಪ್ರಿಜಿತ್​ ಮೃತಪಟ್ಟಿದ್ದರು. ಸ್ಥಳದಲ್ಲಿದ್ದ ಜನರು ಇಬ್ಬರನ್ನು ಕಾಪಾಡಲು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.
ಇದೀಗ ಈ ಘಟನೆಗೆ ಕಾರಣ ಏನು ಎಂಬುದೇ ಕೇರಳ ಸಾರಿಗೆ ಇಲಾಖೆಗೆ ಭಾರೀ ಸವಾಲಾಗಿದೆ. ಮೋಟಾರು ವಾಹನ ಇಲಾಖೆ, ವಿಧಿವಿಜ್ಞಾನ ವಿಭಾಗ ಹಾಗೂ ಪೊಲೀಸರು ನಡೆಸಿದ ತಪಾಸಣೆಯಲ್ಲಿ ವಾಹನದ ಇಂಧನ ಲೈನ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಹಾಗಾದರೆ, ಈ ಅವಘಡ ಹೇಗೆ ಸಂಭವಿಸಿತು? ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಲೇ ಇದೆ.
ಬಹುಶಃ ಶಾರ್ಟ್​ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿರಬಹುದೆಂದು ಒಂದು ತಂಡ ಅಂದಾಜಿಸಿದೆ. ಆದಾಗ್ಯೂ, ಕಾರಿನಲ್ಲಿದ್ದ ಕೆಲವು ವಸ್ತುಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿ ಪಿವಿ ಬಿಜು ಊಹಿಸಿದ್ದಾರೆ.
ಕಾರನ್ನು ಪರಿಶೀಲಿಸಿದಾಗ ಎರಡು ಪ್ಲಾಸ್ಟಿಕ್​ ಬಾಟಲ್​ಗಳು ಪತ್ತೆಯಾಗಿದ್ದು, ಬಾಟಲ್​ಗಳಲ್ಲಿ ಏನಾದರೂ ದ್ರವ ಇತ್ತೇ ಎಂಬುದನ್ನು ತಿಳಿಯಲು ಅವುಗಳನ್ನು ಕೆಮಿಕಲ್​ ಟೆಸ್ಟ್​ಗೆ ಕಳುಹಿಸಲಾಗಿದೆ. ಈ ಮಧ್ಯೆ ಮೃತ ರೀಶಾಳ ತಂದೆ ವಿಶ್ವನಾಥನ್ ಅವರು ಕಾರಿನಲ್ಲಿ ಎರಡು ಬಾಟಲ್‌ಗಳಲ್ಲಿ ಇಟ್ಟಿದ್ದ ದ್ರವದಿಂದ ಅಪಘಾತ ಸಂಭವಿಸಿದೆ ಎಂಬ ವದಂತಿಯನ್ನು ಅಲ್ಲಗಳೆದಿದ್ದಾರೆ.(ಏಜೆನ್ಸೀಸ್​)
ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ ಪಾರ್ಟಿ!

ರಾಜ್ಯದ ರೈಲು ಯೋಜನೆಗೆ ದಾಖಲೆ ಅನುದಾನ ಹಂಚಿಕೆ

ಸರ್ಕಾರಕ್ಕೆ ಸಾರಿಗೆ ನೌಕರರ ಬಿಕ್ಕಟ್ಟು: ವೇತನ ಪರಿಷ್ಕರಿಸದಿದ್ದರೆ ಮುಷ್ಕರದ ಕಿಚ್ಚು; ಪರಿಷ್ಕರಿಸಿದರೆ ಪ್ರಯಾಣ ದರ ಏರಿಕೆ ಇಕ್ಕಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
