ನವದೆಹಲಿ:ನೋಯ್ಡಾದ ದಂಕೌರ್ ಕೊತ್ವಾಲಿ ಪ್ರದೇಶದ ಜಗನ್‌ಪುರ ಗ್ರಾಮದಲ್ಲಿ ವರದಕ್ಷಿಣೆಯಾಗಿ ಪಡೆದಿದ್ದ ಫಾರ್ಚುನರ್ ಮಾರಾಟ ಮಾಡುವ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳವಾಗಿದ್ದು, ಪತಿ ಪತ್ನಿಯನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಪತ್ನಿಯ ಅನಗತ್ಯ ಖರ್ಚಿನಿಂದ ಬೇಸತ್ತ ಪತಿ; ಸ್ನೇಹಿತನಿಗೆ ಹೇಳಿ ಆಕೆಯ ಕಥೆ ಮುಗಿಸಿದ
ಮೂಲತಃ ಧನಪುರ ಗ್ರಾಮದ ದೀಪಕ್ ಭದಾನ 12 ವರ್ಷಗಳಿಂದ ಕುಟುಂಬ ಸಮೇತ ಜಗನ್‌ಪುರದಲ್ಲಿ ವಾಸವಿದ್ದು, ನಾಲ್ಕು ವರ್ಷದ ಹಿಂದೆ ದೆಹಲಿಯ ಸರಾಯ್ ಕಾಲೇಖಾನ್‌ನ ನಿಧಿ ಅವರನ್ನು ವಿವಾಹವಾಗಿದ್ದ. ಇಬ್ಬರಿಗೂ ಎರಡು ವರ್ಷದ ಮಗ ಮತ್ತು ಒಂದು ತಿಂಗಳ ಹೆಣ್ಣು ಮಗುವಿದೆ. ನಿಧಿಯ ತಂದೆ ಹರ್ವೀರ್ ಸಿಂಗ್ ತಮ್ಮ ಮಗಳನ್ನು ಬಹಳ ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟಿದ್ದರು. ವರದಕ್ಷಿಣೆಯಾಗಿ ಹಣ, ಆಭರಣಗಳ ಜೊತೆಗೆ 45 ಲಕ್ಷ ಮೌಲ್ಯದ ಫಾರ್ಚುನರ್ ಕಾರನ್ನು ನೀಡಲಾಗಿತ್ತು.
ಶನಿವಾರ ಬೆಳಗ್ಗೆ ದಂಪತಿ ನಡುವೆ ಫಾರ್ಚುನರ್ ಮಾರಾಟ ಮಾಡುವ ವಿಚಾರವಾಗಿ ಜಗಳವಾಗಿತ್ತು. ಈ ಸಂದರ್ಭದಲ್ಲಿ ದೀಪಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಬಂದೂಕು ಕೈಗೆತ್ತಿಕೊಂಡು ಪತ್ನಿಯನ್ನು ಗುಂಡಿಕ್ಕಿ ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಮೃತ ನಿಧಿ ತವರು ಮನೆ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ಉದ್ರುಕ್ತರನ್ನು ನಿಯಂತ್ರಿಸಿದರು. ಪತಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಡೇಟಿಂಗ್ ಆಪ್‌ ವಂಚನೆ..ಹುಡುಗಿ ಕರೆದಳೆಂದು ಪಬ್​ಗೆ ಹೋದವನ ಕಥೆ ಏನಾಯ್ತು ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
