ಚೆನ್ನೈ:ಫ್ಯಾನ್ಸ್ ಗಳು ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್​ ಆದಾಗ ಥಿಯೇಟರ್ ಒಳಗೆ ಚಪ್ಪಾಳೆ ತಟ್ಟುವುದು, ಶಿಳ್ಳೆ ಹೊಡೆಯುವುದು, ಕುಣಿಯುವುದನ್ನು ನೋಡುತ್ತೇವೆ. ಆದರೆ ಇಲ್ಲೊಂದು ಜೋಡಿ ಥಿಯೇಟರ್ ಒಳಗೆ ಉಂಗುರ ಬದಲಿಸಿಕೊಂಡಿದ್ದಾರೆ.
ವಿಜಯ್ ‘ಲಿಯೋ’ ಸಿನಿಮಾ ಶುರುವಾಗಿದೆ. ಎಲ್ಲೆಡೆ ಪಟಾಕಿ ಹಚ್ಚಿ ಥಿಯೇಟರ್ ಮುಂದೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ‘ಲಿಯೋ’ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವೆಂಕಟೇಶ್ ಮತ್ತು ಮಂಜುಳಾ ಜೋಡಿ ದಳಪತಿ ವಿಜಯ್ ಅಭಿಮಾನಿಗಳು. ವಿಜಯ್ ಮೇಲಿನ ತಮ್ಮ ಕ್ರೇಜ್ ಅನ್ನು ಸಾಬೀತುಪಡಿಸಿದ ದಂಪತಿ ಥಿಯೇಟರ್ ಒಳಗೆ ಹಾರ ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡರು.
ಸಿನಿಮಾ ರಿಲೀಸ್ ಆದಾಗ ಮದುವೆ ಆಗಲಿ ಎಂದು ಎಂಟು ತಿಂಗಳಿಂದ ಈ ಯೋಜನೆ ಹಾಕಿಕೊಂಡಿದ್ದೆ ಎಂದು ವೆಂಕಟೇಶನ್ ಹೇಳಿದ್ದಾರೆ.‘ಲಿಯೋ’ ಚಿತ್ರದ ಪ್ರದರ್ಶನದ ನಂತರ ಥಿಯೇಟರ್ ಒಳಗೆ ವೆಂಕಟೇಶ್ ಮತ್ತು ಮಂಜುಳಾ ಪ್ರೇಕ್ಷಕರ ಮುಂದೆ ಬಂದು ಹಾರ ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವಿಡಿಯೋ ವೈರಲ್​​​ ಆಗಿದೆ. ನಾಳೆ ಅಧಿಕೃತವಾಗಿ ಈ ಜೋಡಿ ಮದುವೆಯಾಗುತ್ತಿದ್ದಾರೆ.
‘ಲಿಯೋ’ ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ ಆಕ್ಷನ್ ಥ್ರಿಲ್ಲರ್ . ಚಿತ್ರದ ಚಿತ್ರಕಥೆಯನ್ನು ರತ್ನ ಕುಮಾರ್ ಮತ್ತು ದೀರಜ್ ವೈದಿ ಸಹ-ಬರೆದಿದ್ದಾರೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಸುದ್ದಿಯಾಗುತ್ತಲೇ ಇದೆ.
ಪ್ರಮುಖ ಪಾತ್ರಗಳಲ್ಲಿ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಸ್ಯಾಂಡಿ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ನಿರ್ಮಿಸಿರುವ ‘ಲಿಯೋ’ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡ ಸಿಎಂ ಇಬ್ರಾಹಿಂ ಮುಂದಿನ ನಡೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
