ತಿರುಪತಿ:ಧಾರ್ಮಿಕ ದೇಣಿಗೆ ವಿಷಯಕ್ಕೆ ಬಂದರೆ, ಭಾರತೀಯರ ಹೃದಯ ಅದೆಷ್ಟು ವಿಶಾಲವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಭಾರತೀಯ ದೇವಾಲಯಗಳಲ್ಲಿ ಪ್ರತಿದಿನ ಬೃಹತ್ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗುತ್ತಿದ್ದು, ಆಂಧ್ರಪ್ರದೇಶದ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನವೂ ಅವುಗಳಲ್ಲಿ ಒಂದು. ವೆಂಕಟೇಶ್ವರ ಸ್ವಾಮಿಯ ಭಕ್ತ ದಂಪತಿಯೊಬ್ಬರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ.
ಹೈದರಾಬಾದ್‌ನ ಭಕ್ತ ಎಂ.ಶ್ರೀನಿವಾಸ ಪ್ರಸಾದ್ ಮತ್ತು ಅವರ ಪತ್ನಿ 6.5 ಕೆ.ಜಿ ತೂಕದ ಸ್ವರ್ಣ ನಂದಕ (ಚಿನ್ನದ ಖಡ್ಗ)ವನ್ನು ದೇವಾಲಯದ ಮಂಡಳಿಗೆ ಅರ್ಪಿಸಿದ್ದಾರೆ. ಸೋಮವಾರ ಬೆಳಿಗ್ಗೆ ದಂಪತಿ ಚಿನ್ನದ ಖಡ್ಗವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಅದಕ್ಕೂ ಮೊದಲು ಖಡ್ಗವನ್ನು ತಿರುಮಲದ ಕಲೆಕ್ಟಿವ್ ಅತಿಥಿ ಗೃಹದಲ್ಲಿ ಭಾನುವಾರ ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಗಿದೆ.
ಈ ದಂಪತಿ ಕಳೆದ ವರ್ಷವೇ ದೇವಸ್ಥಾನಕ್ಕೆ ಖಡ್ಗ ಕಾಣಿಕೆಯಾಗಿ ಕೊಡಬೇಕೆಂದು ನಿರ್ಧರಿಸಿದ್ದರಂತೆ. ಆದರೆ ಕರೊನಾ ಕಾರಣದಿಂದಾಗಿ ಕೊಡಲಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಖಡ್ಗವನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ವಿಶೇಷ ಆಭರಣಕಾರರು ತಯಾರಿಸಿದ್ದಾರೆ. ಆರು ತಿಂಗಳ ಕಾಲಾವಕಾಶದಲ್ಲಿ ಖಡ್ಗ ತಯಾರಿಸಲಾಗಿದೆ. ಸುಮಾರು ಆರೂವರೆ ಕೆಜಿ ತೂಕವಿರುವ ಖಡ್ಗ ತಯಾರಿಸುವ ವೇಳೆ ಅದರ ಬೆಲೆ 1.8 ಕೋಟಿ ರೂಪಾಯಿಯಷ್ಟಿತ್ತಂತೆ ಆದರೆ ಇದೀಗ ಅದರ ಬೆಲೆ 4 ಕೋಟಿ ರೂಪಾಯಿಯಾಗಿದೆ.
ಇದಕ್ಕೂ ಮೊದಲು ತಮಿಳುನಾಡಿನ ತೆನಿ ಮೂಲದ ಜವಳಿ ವ್ಯಾಪಾರಿ ತಂಗಾ ದೋರೈ ಅವರು 2018ರಲ್ಲಿ 1.75 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕತ್ತಿಯನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದರು. (ಏಜೆನ್ಸೀಸ್)
ಎರಡನೇ ಮಗುವಿನ ನಿರೀಕ್ಷೆಯಲ್ಲಿ ರೋಡಿಸ್ ಖ್ಯಾತಿಯ ನೇಹಾ ಧೂಪಿಯಾ

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ಮಾಡಿದ ಚಕ್ರವರ್ತಿ! ಬಿಗ್​ಬಾಸ್​ನಿಂದ ಕಾದಿದೆಯಾ ದೊಡ್ಡ ಶಿಕ್ಷೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
