ರಾಜಸ್ಥಾನ:ಇದು ವಿರಳಾತಿವಿರಳ ಪ್ರಕರಣ ಎಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಇಲ್ಲೊಂದು ದಂಪತಿ ತಮ್ಮ 70ನೇ ವಯಸ್ಸಿನ ಬಳಿಕ ತಂದೆ-ತಾಯಿಯಾದ ಖುಷಿಯನ್ನು ಅನುಭವಿಸಿದ್ದಾರೆ. ಅರ್ಥಾತ್, ಮದುವೆಯಾದ 54 ವರ್ಷಗಳ ಬಳಿಕ ಈ ಜೋಡಿಗೆ ಮಗುವಾಗಿದೆ. ಇಂಥದ್ದೊಂದು ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ ಕಂಡುಬಂದಿದೆ.
ರಾಜಸ್ಥಾನದ ಝುಂಝುನು ಎಂಬಲ್ಲಿನ ನುಹಾನಿಯಾ ಗ್ರಾಮದ ಮಾಜಿ ಯೋಧ ಗೋಪಿಚಂದ್ ಮತ್ತು ಚಂದ್ರಾವತಿ ಎಂಬವರೇ ಈ ವಿಶೇಷ ಪ್ರಕರಣ ದಂಪತಿ. ಗೋಪಿಚಂದ್ ಕಾಲಿಗೆ ಬಾಂಗ್ಲಾ ಯುದ್ಧದಲ್ಲಿ ಗುಂಡೇಟು ಬಿದ್ದು, ಗಾಯಗೊಂಡಿದ್ದರು. ಇವರಿಗೆ ಮಕ್ಕಳು ಆಗಿರಲಿಲ್ಲ.
ಆದರೆ ಇದೀಗ ಮದುವೆಯಾಗಿ 70 ವರ್ಷಗಳ ಬಳಿಕ, ನಿನ್ನೆ ಈ ದಂಪತಿಗೆ ಮೊದಲ ಮಗುವಾಗಿದೆ. ದೇಶ ಹಾಗೂ ಪ್ರಪಂಚದಲ್ಲಿ ಐವಿಎಫ್​ ಮೂಲಕ ಬಹಳಷ್ಟು ಜೋಡಿ 70-80ನೇ ವಯಸ್ಸಿನಲ್ಲಿ ಮಗು ಪಡೆದಿದ್ದೆ. ರಾಜಸ್ಥಾನದಲ್ಲಿ 70ರ ವಯಸ್ಸಿನ ಪುರುಷ-ಮಹಿಳೆ ತಂದೆ-ತಾಯಿ ಆಗಿದ್ದು ಇದೇ ಮೊದಲು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಈ ಖುಷಿಯನ್ನು ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ ಎಂದು ಗೋಪಿಚಂದ್ ಮಗುವಾದ ಸಂತೋಷವನ್ನು ಹಂಚಿಕೊಂಡಿದ್ದಾರೆ. ತಾವು ತಂದೆಗೆ ಒಬ್ಬನೇ ಮಗನಾಗಿದ್ದು, ಈಗ ತಮಗೂ ಮಗುವಾಗಿದ್ದಕ್ಕೆ ಖುಷಿಯಾಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈಗ ನಾವೂ ಪ್ರಪಂಚದಲ್ಲಿ ಎಲ್ಲರಂತೆ ಇರುವಂತಾಗಿದೆ ಎಂದು ಹೇಳಿಕೊಂಡಿದ್ದಾರೆ.
ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
