ಲಖನೌ:ಪರಸ್ಪರ ಪ್ರೀತಿಸಿದ್ದ ಯುವ ಜೋಡಿಯೊಂದು ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಖಾನ್ಪುರದಲ್ಲಿ ನಡೆದಿದೆ. ಮೃತಳಾಗಿರುವ ಯುವತಿಗೆ ಈಗಾಗಲೇ ಮದುವೆಯಾಗಿದ್ದು, ಮದುವೆ ನಂತರ ಆಕೆ ಪ್ರಿಯತಮನೊಂದಿಗೆ ಅಕ್ರಮ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:3 ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದವ ರೈತ ಹೋರಾಟಕ್ಕೆ ಬಲಿಯಾದ!
ಯುವತಿಯ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾದ ನಂತರ ಪ್ರೀತಿಗೆ ಒಪ್ಪದೆ ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲಾಗಿತ್ತು. ಅದಾದರೂ ಆಕೆ ತನ್ನ ಪ್ರಿಯತಮನೊಂದಿಗೆ ಸಂಪರ್ಕ ಕಡಿದುಕೊಂಡಿರಲಿಲ್ಲ. ಈ ವಿಚಾರ ಆಕೆಯ ಗಂಡನಿಗೂ ತಿಳಿದಿತ್ತು. ಇತ್ತೀಚೆಗೆ ಆಕೆ ತನ್ನ ತವರು ಮನೆಗೆ ಬಂದಿದ್ದಾಳೆ. ಭಾನುವಾರದಂದು ಮನೆಯಲ್ಲಿ ಕುಳಿತು ಪ್ರಿಯತಮನೊಂದಿಗೆ ಫೋನ್​ನಲ್ಲಿ ಮಾತನಾಡುವಾಗ ಆಕೆಯ ತಾಯಿ ಅದನ್ನು ನೋಡಿದ್ದಾಳೆ. ಸಿಟ್ಟಿನಿಂದ ಮಗಳಿಗೆ ಹೊಡೆದಿದ್ದಾಳೆ ಕೂಡ. ಇದರಿಂದ ನೊಂದಿದ್ದ ಆಕೆ ಸೋಮವಾರದಂದು ಮನೆಯಿಂದ ಹೊರನಡೆದಿದ್ದಾಳೆ. ಅದಾದ ಮೇಲೆ ವಾಪಾಸಾಗಿಲ್ಲ.
ಇತ್ತ ಯುವತಿಯ ಪ್ರಿಯತಮ ಸಿಕಂದ್ರಕ್ಕೆ ಹೋಗುವುದಾಗಿ ತಿಳಿಸಿ ಸೋಮವಾರ ಸಂಜೆ ಮನೆಯಿಂದ ಹೊರ ನಡೆದಿದ್ದಾನೆ. ಅದಾದ ಮೇಲೆ ಆತನೂ ವಾಪಾಸಾಗಿಲ್ಲ. ಎಷ್ಟೊತ್ತಾದರೂ ಆತ ಮನೆಗೆ ಬರದಿದ್ದನ್ನು ಕಂಡು ಆತನಿಗೆ ಕರೆ ಮಾಡಲಾಗಿದೆ. ಆದರೆ ಆ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಗಾಬರಿಗೊಂಡ ಎರಡೂ ಕುಟುಂಬಗಳು ಹುಡುಕಾಟ ಆರಂಭಿಸಿದ್ದಾರೆ. ಆಗ ಊರ ಹತ್ತಿರವಿದ್ದ ಮಾವಿನ ತೋಟದಲ್ಲಿ ಇಬ್ಬರು ಪ್ರೇಮಿಗಳು ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಗಂಡನ ಫೋನಲ್ಲಿ ತನ್ನದೇ ಫೋಟೋ ಕಂಡು ಗಂಡನ ಕೊಲೆ ಮಾಡಲು ಹೊರಟ ಹೆಂಡತಿ!
ಮದುವೆಯಾದ ಮೇಲೂ ಯುವತಿ ಪ್ರಿಯತಮನೊಂದಿಗೆ ಸಂಬಂಧ ಹೊಂದಿದ್ದಾಗಿ ಕುಟುಂಬ ತಿಳಿಸಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಎರಡು ವೈನ್​ ಬಾಟೆಲ್​ಗಳೂ ಪತ್ತೆಯಾಗಿದೆ. ವೈನ್​ ಕುಡಿದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಇನ್ನಷ್ಟು ವಿಚಾರ ಹೊರಬೀಳಬೇಕಿದೆ. (ಏಜೆನ್ಸೀಸ್​)
ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
