ಭೋಪಾಲ್​:ಪ್ರೇಮಿಗಳಿಬ್ಬರನ್ನು ಗುಂಡಿಟ್ಟು ಕೊಂದು ಮೃತದೇಹಗಳಿಗೆ ಭಾರವಾದ ಕಲ್ಲುಗಳನ್ನು ಕಟ್ಟಿ ಮೊಸಳೆಗಳಿರುವ ನದಿಗೆ ಎಸೆದಿರುವ ಭಯಾನಕ ಘಟನೆ ಮಧ್ಯಪ್ರದೇಶದ ನಡೆದಿದ್ದು, ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.
ಮೃತರನ್ನು ಶಿವಾನಿ ತೋಮರ್ (18) ಮತ್ತು ರಾಧೆಶ್ಯಾಮ್​ ತೋಮರ್​ (21) ಎಂದು ಗುರುತಿಸಲಾಗಿದೆ. ಮೊರೆನಾ ಜಿಲ್ಲೆಯ ರತನ್​ಬಾಸಾಯ್​ ಗ್ರಾಮದ ಶಿವಾನಿ ಮತ್ತು ಪಕ್ಕದ ಬಲುಪುರ ಗ್ರಾಮದ ರಾಧೆಶ್ಯಾಮ್​ ಪ್ರೀತಿಸುತ್ತಿದ್ದರು. ಆದರೆ, ಶಿವಾನಿ ಕುಟುಂಬ ಇದನ್ನು ಬಲವಾಗಿ ವಿರೋಧಿಸಿದ್ದರು.
ಇದನ್ನೂ ಓದಿ:ಅಪಘಾತದಲ್ಲಿ ಮೃತನಾಗಿದ್ದ ಯುವಕನ ಅಂಗಾಂಗ ದಾನ: ಮಾನವೀಯತೆ ಮೆರೆದ ಚಿಕ್ಕಮಂಡ್ಯ ಗ್ರಾಮದ ಕುಟುಂಬ
ಇದರ ನಡುವೆ ಇಬ್ಬರು ಕಾಣಾಯಾಗಿದ್ದು, ಯುವಕನ ತಂದೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಮಗ ಮತ್ತು ಆತ ಪ್ರೀತಿಸುತ್ತಿದ್ದ ಯುವತಿ ಇಬ್ಬರು ಅನೇಕ ದಿನಗಳವರೆಗೆ ಕಾಣೆಯಾಗಿದ್ದು, ಇಬ್ಬರನ್ನು ಕೊಲೆ ಮಾಡಿರಬಹುದು ಎಂದು ದೂರಿನಲ್ಲಿ ಯುವಕ ತಂದೆ ಶಂಕೆ ವ್ಯಕ್ತಪಡಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಓಡಿ ಹೋಗಿ ಬೇರೆಡೆ ನೆಲೆಸಿರಬಹುದೆಂದು ಆರಂಭದಲ್ಲಿ ಭಾವಿಸಿದ್ದರು. ಆದರೆ, ಯಾರೊಬ್ಬರ ಕಣ್ಣಿಗೂ ಇಬ್ಬರು ಅನೇಕ ದಿನಗಳವರೆಗೆ ಕಾಣಿಸಿಕೊಳ್ಳದೇ ಇರುವುದು ಸಾವಿನ ಅನುಮಾನವನ್ನು ಮತ್ತಷ್ಟು ಹೆಚ್ಚು ಮಾಡಿತು. ಬಳಿಕ ಪೊಲೀಸರು ಯುವತಿಯ ತಂದೆ ಮತ್ತು ಸಂಬಂಧಿಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು. ಆರಂಭದಲ್ಲಿ ಯಾವುದೇ ಸುಳಿವನ್ನು ಬಿಟ್ಟುಕೊಡಲಿಲ್ಲ. ಯಾವಾಗ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದರೋ ಆಗ ತಪ್ಪೊಪ್ಪಿಕೊಂಡರು.
ಇದನ್ನೂ ಓದಿ:ದೇಶದಲ್ಲಿ ಬೇಡಿಕೆಯಷ್ಟು ರಕ್ತಸಂಗ್ರಹವಿಲ್ಲ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ
ಜೂನ್​ 3ರಂದು ಶಿವಾನಿ ಮತ್ತು ರಾಧೆಶ್ಯಾಮ್​ನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾಗ ಶಿವಾನಿ ಕುಟುಂಬ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರ ಮೃತದೇಹಗಳಿಗೆ ಭಾರವಾದ ಕಲ್ಲುಗಳನ್ನು ಕಟ್ಟಿ ಚಂಬಲ್​ ನದಿಗೆ ಎಸೆದಿರುವುದಾಗಿ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ರಕ್ಷಣಾ ತಂಡದ ನೆರವಿನಿಂದ ಸದ್ಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಹಾಗೆ ಚಂಬಲ್​ ಘರಿಯಾಲ್ ಅಭಯಾರಣ್ಯವು ಸುಮಾರು 2000 ಕ್ಕೂ ಅಧಿಕ ಮೊಸಳೆ ಮತ್ತು 500ಕ್ಕೂ ಹೆಚ್ಚು ಫ್ರೆಶ್​ವಾಟರ್​ ಮೊಸಳೆಗಳ ಆವಾಸಸ್ಥಾನವಾಗಿದೆ.(ಏಜೆನ್ಸೀಸ್​)
ಸಲುಗೆ ಬೆಳೆಸಿ ಕೋಟಿ ಲೂಟಿ! ಅರಕಲಗೂಡು SBI ಗುತ್ತಿಗೆ ನೌಕರನ ನಕಲಿ ಚಿನ್ನದ ಮುಖವಾಡ ಬಯಲು

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 1 ವಾರದಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು? ಖರ್ಚಾಗಿದ್ದೆಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 3 =
Remember me
