ಲಂಡನ್​:ದತ್ತು ಪಡೆಯುವಾಗ ಒಳ್ಳೆಯ ಉದ್ದೇಶ ಇರಬೇಕು. ದತ್ತು ಪಡೆದ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಇಲ್ಲೊಬ್ಬ ಭಾರತೀಯ ಮೂಲ ಬ್ರಿಟನ್​ ದಂಪತಿ ಮಾಡಿದ್ದು ಮಾತ ಅಕ್ಷರಶಃ ತಪ್ಪಿನ ಕೆಲಸ. ಭಾರತದ ಮಗುವನ್ನು ದತ್ತು ಪಡೆದ ಇವರ ಉದ್ದೇಶ ಕೇಳಿದರೆ ನೀವು ಭಯ ಬೀಳುತ್ತೀರಿ.
ಇದನ್ನೂ ಓದಿ:ವದಂತಿಗಳಿಗೆ ಕಿವಿಗೊಡಬೇಡಿ, ಕರೊನಾ ಲಸಿಕೆ ಉಚಿತವಾಗಿ ದೊರೆಯಲಿದೆ: ಆರೋಗ್ಯ ಸಚಿವ ಹರ್ಷವರ್ಧನ್​
ಭಾರತೀಯ ಮೂಲದವರಾಗಿದ್ದು ಬ್ರಿಟನ್​ನಲ್ಲಿ ವಾಸವಿದ್ದ ಆರತಿ ಧೀರ್​ (55) ಮತ್ತು ಕವಲ್ ರೈಜಾಡ್​ (31) ಬ್ರಿಟನ್​ನ ಹೀಥ್ರೂ ವಿಮಾನ ನಿಲ್ದಾಣದ ಮೊದಲು ಕೆಲಸ ಮಾಡುತ್ತಿದ್ದರು. ಅವರು 2015 ರಲ್ಲಿ ಗುಜರಾತ್‌ನ ಮಾಲಿಯಾ ಹಟಿನಾ ಗ್ರಾಮದ ಅನಾಥ ಮಗು ಗೋಪಾಲ್ ಸೆಜಾನಿಯನ್ನು ದತ್ತು ಪಡೆದಿದ್ದರು. ಅದಾದ ನಂತರ ಮಗುವಿಗೆ ‘ವೆಲ್ತ್ ಬಿಲ್ಡರ್’ ವಿಮಾ ಪಾಲಿಸಿಯನ್ನು ಮಾಡಿಸಿದರು.
ಸ್ವಂತ ಮಗುವಷ್ಟೇ ಚೆನ್ನಾಗಿ ಗೋಪಾಲ್​ನನ್ನು ನೋಡಿಕೊಳ್ಳುತ್ತಿದ್ದ ದಂಪತಿ 2017 ರಲ್ಲಿ ಬಾಲಕ 11 ವರ್ಷದವನಾಗಿದ್ದಾಗ ಆತನ ಸ್ವಂತ ಊರಿಗೆ ಕುಟುಂಬಸ್ಥರನ್ನು ಭೇಟಿ ಮಾಡಲು ರಾಜ್​ಕೋಟ್​ಗೆ ಕಳುಹಿಸಿಕೊಟ್ಟಿದ್ದರು. ಆತ ಅಲ್ಲಿಂದ ಬ್ರಿಟನ್​ಗೆ ವಾಪಾಸಾಗಲು ವಿಮಾನನಿಲ್ದಾಣಕ್ಕೆ ಬರುತ್ತಿರುವಾಗ ಅವರಿದ್ದ ವಾಹನದ ಮೇಲೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಕೃತ್ಯದಿಂದಾಗಿ ಗೋಪಾಲ್​ ಮತ್ತು ಆತನ ಸಂಬಂಧಿ ಹರ್ಸುಖ್ಭಾಯ್ ಕರ್ದಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ:ನಿಮ್ಮ ಬಳಿ 1 ರೂಪಾಯಿ ನೋಟಿದೆಯಾ? ಹಾಗಿದ್ರೆ ಲಕ್ಷ ಲಕ್ಷ ಸಿಗಬಹುದು ಇಲ್ನೋಡಿ..!
ಇದಾದ ನಂತರ ಗೋಪಾಲ್​ ಹೆಸರಿಗೆ ಮಾಡಿಸಿದ್ದ 1.5 ಕೋಟಿ ರೂಪಾಯಿಯ ಜೀವವಿಮೆ ಮೊತ್ತ ಆರತಿ ದಂಪತಿಗೆ ಬಂದಿದೆ. ಆ ಹಣವನ್ನು ತಮ್ಮದಾಗಿಸಿಕೊಂಡ ದಂಪತಿ ಬ್ರಿಟನ್​ನ ಸುತ್ತಾಟದಲ್ಲಿ ಬಿಜಿ ಆಗಿದ್ದಾರೆ.
ಗೋಪಾಲ್​ ಕೊಲೆ ಪ್ರಕರಣವನ್ನು ವಿಚಾರಣೆ ನಡೆಸಿದ ಭಾರತೀಯ ಪೊಲೀಸರಿಗೆ ಇದರ ಹಿಂದೆ ಕಮಲ್​ ದಂಪತಿ ಕೈವಾಡವಿರುವುದು ತಿಳಿದುಬಂದಿದೆ. ಕಮಲ್​ ಅವರ ನೆರೆ ಮನೆಯವರಿಗೆ ಹಣ ಕೊಟ್ಟು ಕೊಲೆ ಮಾಡಲು ಹೇಳಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಬ್ರಿಟನ್​ ಸರ್ಕಾರವೂ ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳು ಇರುವುದಾಗಿ ಒಪ್ಪಿಕೊಂಡಿದೆ. ಆದರೆ ಅಲ್ಲಿನ ಮಾನವ ಹಕ್ಕುಗಳಿಂದಾಗಿ ಆರೋಪಿಗಳ ಬಂಧನಕ್ಕೆ ತಡೆಯಾಗುತ್ತಿದೆ ಎನ್ನಲಾಗಿದೆ. ಸದ್ಯ ಹೆತ್ತ ಮಗನನ್ನು ಕಳೆದುಕೊಂಡ ನೋವಿನಲ್ಲಿ ರಾಜಕೋಟ್​ನ ಕುಟುಂಬವಿದ್ದರೆ, ಆತನ ಹೆಸರಿನಲ್ಲಿ ಬಂದ ವಿಮೆ ಹಣದಲ್ಲಿ ಬ್ರಿಟನ್​ನಲ್ಲಿರುವ ದಂಪತಿ ಮಜಾ ಮಾಡುತ್ತಿದ್ದಾರೆ. (ಏಜೆನ್ಸೀಸ್​)
ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
