ಭುವನೇಶ್ವರ್​:ಮದುವೆಯಾದ ಮೂರೇ ದಿನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದ ಬೆರ್ಹಾಂಪುರ್​ನಲ್ಲಿ ನಡೆದಿದೆ.
ಮೃತರನ್ನು ಬೆರ್ಹಾಂಪುರ್​ ಮೂಲದ ಸಿ.ಎಚ್​. ಪ್ರನೇತಾ ಮತ್ತು ಆಂಧ್ರ ಪ್ರದೇಶದ ಇಚ್ಚಫುರ್​​ ಮೂಲದ ಜಿ ಬೆನು ಎಂದು ಗುರುತಿಸಲಾಗಿದೆ. ಅಪಘಾತದಿಂದ ಗಾಯಗೊಂಡಿದ್ದ ಇಬ್ಬರು ಬೆರ್ಹಾಂಪುರ್​ನಲ್ಲಿರುವ ಎಂಕೆಚಿಜಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಫೆ. 10ರಂದು ಪ್ರನೇತಾ ಮತ್ತು ಬೆನು ಮದುವೆಯಾಗಿದ್ದರು. ಇದಾದ ಮೂರು ದಿನಗಳ ಬಳಿಕ ಇಬ್ಬರು ಬೈಕ್​ನಲ್ಲಿ ಬೆರ್ಹಾಂಪುರ್​ಗೆ ಬೈಕ್​ನಲ್ಲಿ ಬರುತ್ತಿದ್ದರು. ಗೋಲಂತರ ಪೊಲೀಸ್ ಠಾಣೆ ಎದುರಿನ ತಿರುವಿನಲ್ಲಿ ಎದುರಿಗೆ ಬಂದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅವರು ಬದುಕುಳಿಯಲಿಲ್ಲ.
ಟ್ರ್ಯಾಕ್ಟರ್​ ಚಾಲಕ ಪರಾರಿಯಾಗಿದ್ದು, ಗೋಲಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನವದಂಪತಿಯನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
RCB ಸೇರಿದ ಸ್ಮೃತಿ ಎದುರು ಬಾಬರ್​​ಗೆ​ ಅವಮಾನ: ದೀಪ್ತಿ ಶರ್ಮಾ ಮುಂದೆಯೂ ಸೋತ ಪಾಕ್​ ನಾಯಕ

ಈ ಹುಡುಗಿಯ ಬ್ಯಾಟಿಂಗ್​ ಸ್ಕಿಲ್​ಗೆ ಸಚಿನ್ ಫಿದಾ! BCCI ಕಾರ್ಯದರ್ಶಿ ಜಯ್​ ಶಾ ಹೇಳಿದ್ದಿಷ್ಟು….

ಹಲೋ ಡಾಕ್ಟರ್; ಹೋಲಿಕೆ ಮಾಡುವುದು ಸಲ್ಲ, ವಾಸ್ತವ ಅರಿಯುವುದು ಸೂಕ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 1 =
Remember me
