ನ್ಯೂಯಾರ್ಕ್​:ಲಾಕ್​ಡೌನ್​ ಅದೆಷ್ಟೋ ವಧು-ವರರ ಕನಸುಗಳನ್ನು ಕಸಿದುಕೊಂಡುಬಿಟ್ಟಿದೆ. ಏಕೆಂದರೆ ಈ ಅವಧಿಯಲ್ಲಿ ನಿಗದಿಯಾದ ಹಲವಾರು ಮದುವೆಗಳು ಪೋಸ್ಟ್​ಪೋನ್​ ಆಗಿವೆ. ಲಾಕ್​ಡೌನ್​ ಇದ್ದರೂ ಕೇರೇ ಮಾಡದೇ ಮದುವೆಯಾಗುವ ಧೈರ್ಯ ತೋರಿರುವ ಕೆಲವು ಮಂದಿ ಪೊಲೀಸರ ಅತಿಥಿಯಾಗಿದ್ದಾರೆ! ಇನ್ನು ಕೆಲವೆಡೆ ಲಾಕ್​ಡೌನ್​ ನಿಯಮ ಅನುಸರಿಸಿ, ಪೊಲೀಸರ ಒಪ್ಪಿಗೆ ಪಡೆದು ಸರಳ ವಿವಾಹವಾದವರೂ ಇದ್ದಾರೆ.ಇವೆಲ್ಲವುಗಳ ನಡುವೆ ಇನ್ನೊಂದು ರೀತಿಯ ವಿವಾಹ ಲಾಕ್​ಡೌನ್​ ಟ್ರೆಂಡ್​ ಆಗಿದೆ. ಅದೇ ಡಿಜಿಟಲ್​ ಯುಗದ ವೈಶಿಷ್ಟ್ಯ. ಇಂಟರ್​ನೆಟ್​ ವಿವಾಹ ಇದೀಗ ಹಲವು ಕಡೆಗಳಲ್ಲಿ ನಡೆದಿವೆ. ಇಟ್ಟ ಮುಹೂರ್ತದಲ್ಲಿಯೇ ಮದುವೆಯಾಗಲು ಇಂಟರ್​ನೆಟ್​ ಮೊರೆ ಹೋಗಿದ್ದಾರೆ ಹಲವರು. ವಧು ಒಂದೆಡೆ, ವರ ಇನ್ನೊಂದೆಡೆ ನಡುವೆ ಕಂಪ್ಯೂಟರ್​. ಇದಕ್ಕಾಗಿಯೇ ವಿವಾಹ ಆ್ಯಪ್​ಗಳೂ ಸಾಕಷ್ಟು ಲಗ್ಗೆ ಇಟ್ಟುಬಿಟ್ಟಿವೆ.ಅಂಥದ್ದೇ ಒಂದು ವಿವಾಹ ಆಗಿದ್ದಾರೆ ನ್ಯೂಯಾರ್ಕ್​ನ ಯುವಕ-ಯುವತಿ. ಇವರು ಆಯ್ದುಕೊಂಡದ್ದು ಝೂಮ್​ ಆ್ಯಪ್. ಈ ಆ್ಯಪ್​ ಬಗ್ಗೆ ಈಗಾಗಲೇ ಸಾಕಷ್ಟು ವಿವಾದ ಎದ್ದಿದ್ದು, ಇದನ್ನು ಬಳಕೆ ಮಾಡದಂತೆ ಭಾರತ ಸೇರಿದಂತೆ ಹಲವಾರು ಕಡೆಗಳಲ್ಲಿ ಸುದ್ದಿಗಳು ಬರುತ್ತಲೇ ಇವೆ. ಆದರೆ ಬಳಸಲು ತುಂಬಾ ಸಲೀಸಾಗಿರುವ ಕಾರಣದಿಂದ ಇದರ ಮೊರೆ ಹೋಗುತ್ತಿರುವವರು ಹಲವಾರು ಮಂದಿ. ಅದೇ ರೀತಿ ನ್ಯೂಯಾರ್ಕ್​ನ ಈ ಜೋಡಿ ಕೂಡ ಝೂಮ್​ ಆ್ಯಪ್​ ಮೂಲಕ ಮದುವೆಯಾಗಿದ್ದಾರೆ.ವಧುವಿನ ಹೆಸರು ಸಯಕಾ ಫುಕುಡಾ ಮತ್ತು ವರ ಜೇಮ್ಸ್​ ಸ್ಟೋರ್​ ಬ್ರೌನ್​. ಇವರು ಝೂಮ್​ ಆ್ಯಪ್​ನಲ್ಲಿ ಮದುವೆಯಾಗಿದ್ದರೆ ಅದೇನು ಅಷ್ಟು ದೊಡ್ಡ ವಿಶೇಷ ಸುದ್ದಿಯಾಗುತ್ತಿರಲಿಲ್ಲ. ಇದು ಬಹಳ ಸುದ್ದಿಯಾಗಲು ಕಾರಣ ಎಂದರೆ ಈ ಜೋಡಿ ಮೂರೂವರೆ ವರ್ಷ ಒಂದೇ ಮನೆಯಲ್ಲಿ, ಒಟ್ಟಿಗೇ ವಾಸವಾಗಿದ್ದರು. ಅವರಿಗೆ ಅಧಿಕೃತವಾಗಿ ಮದುವೆ ಆಗಬೇಕು ಎಂದು ಎನ್ನಿಸಿತ್ತಂತೆ. ಅದಕ್ಕಾಗಿ ಅವರು ಏಪ್ರಿಲ್​ ತಿಂಗಳ ದಿನವನ್ನು ಆಯ್ದುಕೊಂಡಿದ್ದರು. ಈ ಸಮಯದಲ್ಲಿ ಫುಕುಡಾ ತನ್ನ ತವರಿಗೆ ವಾಪಸ್​ ಆಗಿದ್ದಳು.ಮದುವೆ, ಹನಿಮೂನ್​ ಎಲ್ಲದರ ಮುಹೂರ್ತ ಫಿಕ್ಸ್​ ಆಗಿತ್ತು. ಆದರೆ ಏಪ್ರಿಲ್​ನಲ್ಲಿ ಅಧಿಕೃತ ಮದುವೆಯ ಕನಸು ಕಾಣುತ್ತಿದ್ದ ಈ ಜೋಡಿಗೆ ಲಾಕ್​ಡೌನ್​ ನಿರಾಸೆ ಮೂಡಿಸಿಬಿಟ್ಟಿತು. ಆದರೆ ಅಂದೇ ಮದುವೆಯಾಗುವ ಆಸೆ ಮೂಡಿತು. ಅದಕ್ಕಾಗಿ ಇಬ್ಬರೂ ಝೂಮ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡರು. ಅವಳು ಅಲ್ಲಿ, ಇವನು ಇಲ್ಲಿ ನಡುವೆ ಝೂಮ್​ ಆ್ಯಪ್​. ನಂತರ ಇಬ್ಬರೂ ಶಾಸ್ತ್ರೋಕ್ತವಾಗಿ ಮದುವೆಯಾದರು. ಸ್ನೇಹಿತರು, ಬಂಧು-ಬಳಗದವರು ನಿಂತಲ್ಲಿಯೇ ಆ್ಯಪ್​ನಲ್ಲಿ ಶುಭ ಹಾರೈಸಿದರು. ಅಂತೂ ಇವರ ಮದುವೆಗೆ ಅಧಿಕೃತ ಮುದ್ರ ಬಿತ್ತು!ಅದು ಹೇಗೆಂದರೆ ಅಮೆರಿಕದಲ್ಲಿ ಇಂಟರ್​ನೆಟ್​ ವಿವಾಹಕ್ಕೆ ಮಾನ್ಯತೆ ನೀಡಲಾಗಿದೆ. ಆದ್ದರಿಂದ ಮೂರೂವರೆ ವರ್ಷ ಒಟ್ಟಿಗೆ ಇದ್ದ ಈ ಜೋಡಿ ಈಗ ದೂರ ದೂರವಾಗಿ ಅಧಿಕೃತ ವಿವಾಹವಾಗಿದೆ. ಲಾಕ್​ಡೌನ್​ ಮುಗಿದ ಮೇಲೆ ಹನಿಮೂನ್​ಗೆ ಹೋಗುವುದಾಗಿ ದಂಪತಿ ಹೇಳಿದ್ದಾರೆ!(ಏಜೆನ್ಸಿಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:8 + 12 =
Remember me
