ಮುಂಬೈ:ಕಸ್ಟಮ್​ ಅಧಿಕಾರಿಗಳ ಸೋಗಿನಲ್ಲಿ ದಂಪತಿಗಳಿಬ್ಬರು ಪೊಲೀಸ್​ ಅಧಿಕಾರಿಗೆ ಟೋಪಿ ಹಾಕಿ ಎಸ್ಕೇಪ್​ ಆಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಮುಂಬೈ ರ್‍ಯಾಪಿಡ್​ ಆಕ್ಷನ್​ ಫೋರ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗೆ ಕಡಿಮೆ ಬೆಲೆಯಲ್ಲಿ ಕಾರು ಕೊಡಿಸುವುದಾಗಿ ನಂಬಿಸಿ 6.7 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ​ ಅಧಿಕಾರಿಯೂ ನಯನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.
ಮುಂಬೈನ ರ್‍ಯಾಪಿಡ್​ ಆಕ್ಷನ್​ ಫೋರ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹೊಸ ಕಾರನ್ನು ಖರೀದಿಸಲು ಯೋಚಿಸಿದ್ದರು. ಈ ಕುರಿತು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಪೊಲೀಸ್​ ಅಧಿಕಾರಿಯನ್ನು ಸಂಪರ್ಕಿಸಿ ತಾವು ಕಸ್ಟಮ್ಸ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ಧಾರೆ.
ಇದನ್ನೂ ಓದಿ:ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ; ಕೃತ್ಯ ಚಿತ್ರೀಕರಿಸಿದ ಮಗ
ದಿನ ಕಳೆದಂತೆ ಅವರ ನಂಬಿಕ ಗಳಿಸಿದ ವಂಚಕರು ಕಡಿಮೆ ಬೆಲೆಯಲ್ಲಿ ಕಾರನ್ನು ಕೊಡಿಸುವುದಾಗಿ ಹೇಳಿ ನಂಬಿಸಿ ಅಧಿಕಾರಿಯಿಂದ ಮುಂಗಡ 6.7 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾರೆ. ತಿಂಗಳುಗಳು ಕಳೆದರೂ ತನಗೆ ಕಾರು ಕೊಡಿಸದಿರುವ ಬಗ್ಗೆ ಅನುಮಾನಗೊಂಡ ಅಧಿಕಾರಿಯೂ ತಾನು ನೀಡಿದ್ದ ಹಣವನ್ನು ವಾಪಸ್​ ಕೊಡುವಂತೆ ಹೇಳಿದ್ದಾರೆ.
ಅದರಂತೆ ವಂಚಕರು ಅಧಿಕಾರಿಗೆ 6.9 ಲಕ್ಷ ರೂಪಾಯಿ ಮೌಲ್ಯ ಚೆಕ್​ ಒಂದನ್ನು ನೀಡಿದ್ದು, ಅಧಿಕಾರಿಯೂ ಅದನ್ನು ಬ್ಯಾಂಕಿನಲ್ಲಿ ಜಮೆ ಮಾಡಿದಾಗ ಅದು ಬೌನ್ಸ್​ ಆಗಿದೆ. ಈ ಸಂಬಂಧ ದಂಪತಿಗಳಿಬ್ಬರನ್ನು ವಿಚಾರಿಸಿದರೆ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದನ್ನು ಕಂಡು ಅಧಿಕಾರಿ ದೂರು ದಾಖಲಿಸಿದ್ಧಾರೆ. ವಮಚಕರ ವಿರುದ್ಧ ಐಪಿಸಿ ಸೆಕ್ಷನ್​ 170, 420, 34ರ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
