ಮೀರತ್ :ಮಕ್ಕಳ ಹುಟ್ಟು ಹೊಸ ಸಂಭ್ರಮಗಳನ್ನು ತರುತ್ತದೆ. ಹಾಗಂತಲೇ ಅವನ್ನು ಚೆನ್ನಾಗಿ ಸಾಕಿ ಸಲುಹುವ ಬಗ್ಗೆ ತಂದೆತಾಯಿ ಹಲವು ಕನಸುಗಳನ್ನು ಕಾಣುತ್ತಾರೆ. ಆದರೆ, ಹುಟ್ಟಿದ ಮಕ್ಕಳನ್ನು ಹೆರಿಗೆಯಾದ ಸರ್ಕಾರಿ ಆಸ್ಪತ್ರೆಯಲ್ಲೇ ತೊರೆದು ತಂದೆ-ತಾಯಿ ಇಬ್ಬರೂ ಓಡಿ ಹೋಗಿರುವ ಅಮಾನವೀಯ ಪ್ರಸಂಗ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಮೀರತ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನಕಲಿ ಮೊಬೈಲ್ ನಂಬರ್​ಗಳನ್ನು ಕೊಟ್ಟು ಹೆರಿಗೆಗೆ ದಾಖಲಾಗಿದ್ದ ಇಮ್ರಾನಾ ಮತ್ತು ಆಕೆಯ ಗಂಡ ಶಮೀಮ್, ಈ ರೀತಿ ಓಡಿ ಹೋಗಿರುವ ತಾಯಿ-ತಂದೆ. ರಾಜ್ಯದ ಶಾಮ್ಲಿ ಜಿಲ್ಲೆಯ ಕೈರಾಣ ಎಂಬ ಸ್ಥಳದ ನಿವಾಸಿಗಳೆನ್ನಲಾದ ಈ ದಂಪತಿ ತ್ಯಜಿಸಿಹೋದ ಎರಡು ಹೆಣ್ಣುಮಕ್ಕಳಲ್ಲಿ ಒಂದು ಮಗು ಸಾವಪ್ಪಿದೆ.
ಇದನ್ನೂ ಓದಿ:5 ರೂಪಾಯಿ ತಿಂಡಿ ಕೇಳಿದ ಮಗುವನ್ನು ಕೊಂದೇ ಬಿಟ್ಟ ಈ ಕ್ರೂರಿ ತಂದೆ !
ಮಾರ್ಚ್ 22 ರಂದು ಇಮ್ರಾನಾ ಎಂಬುವರಿಗೆ ಹೆರಿಗೆಯಾಗಿದ್ದು, ಎರಡು ಅವಳಿ ಹೆಣ್ಣು ಮಕ್ಕಳು ಹುಟ್ಟಿದವು. ನಂತರ ತಾಯಿ ಮಕ್ಕಳನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಯಿತು. ಸ್ವಲ್ಪ ಸಮಯದಲ್ಲೇ ವಾರ್ಡ್​ನಲ್ಲಿ ಎಳೆಯ ಮಕ್ಕಳು ವಿಪರೀತ ಅಳುವುದು ಕೇಳಿದಾಗ, ಆಸ್ಪತ್ರೆ ಸಿಬ್ಬಂದಿ ತಾಯಿ ತಂದೆಯನ್ನು ಹುಡುಕಲಾಗಿ ಇಬ್ಬರೂ ನಾಪತ್ತೆಯಾಗಿದ್ದರು ಎನ್ನಲಾಗಿದೆ. ತಾಯಿಯ ಆರೈಕೆಯಿಲ್ಲದೆ ಮಕ್ಕಳ ಪರಿಸ್ಥಿತಿ ಬಿಗಡಾಯಿಸಲು ಆರಂಭವಾದಾಗ ಅವನ್ನು ಮಕ್ಕಳ ವಾರ್ಡ್​ಗೆ ಶಿಫ್ಟ್ ಮಾಡಿ ಶುಶ್ರೂಷೆ ಮಾಡಲಾಯಿತು. ಆದರೆ ಒಂದು ಮಗು ಈ ಸಮಯದಲ್ಲಿ ಸಾವಪ್ಪಿತು ಎನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಮತ್ತು ಜಿಲ್ಲಾ ಬಾಲ ಕಲ್ಯಾಣ ಸಮಿತಿಗೆ ಆಸ್ಪತ್ರೆ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಬದುಕುಳಿದ ಮಗುವಿನ ಜವಾಬ್ದಾರಿಯನ್ನು ಹೊತ್ತಿರುವ ಬಾಲ ಕಲ್ಯಾಣ ಸಮಿತಿ, ಅದನ್ನು ಬಡೌನ್ ಅನಾಥಾಶ್ರಮಕ್ಕೆ ದಾಖಲಿಸುವ ನಿರ್ಧಾರ ತೆಗೆದುಕೊಂಡಿದೆ. ಅತ್ತ ಪೊಲೀಸರು ಕಾಣೆಯಾದ ದಂಪತಿಯ ಹುಡುಕಾಟದಲ್ಲಿ ತೊಡಗಿದ್ದಾರೆ.(ಏಜೆನ್ಸೀಸ್)
ಮಲಗಿದ್ದ ಹೆಂಡತಿಯ ಬೆರಳು ಕತ್ತರಿಸಿದ ಪತಿರಾಯ ! ಈ ಬಗ್ಗೆ ಸಿಎಂ ಹೇಳಿದ್ದೇನು ?
ಅಂತರರಾಜ್ಯ ಡ್ರಗ್ ಪೆಡ್ಲರ್ಸ್ : 1.5 ಕೋಟಿ ರೂ. ಮೌಲ್ಯದ ಗಾಂಜಾ ವಶ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fifteen =
Remember me
