ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೊಲೀಸರು ತಮ್ಮ ಎಂಟು ತಿಂಗಳ ಶಿಶುವನ್ನು ಮಾರಾಟ ಮಾಡಿದ್ದಕ್ಕಾಗಿ ಪಾಪಿ ದಂಪತಿಯನ್ನು ಬಂಧಿಸಿದ್ದಾರೆ.
ಈ ದಂಪತಿಗಳು ಹೊಚ್ಚ ಹೊಸ ಫೋನ್ ಖರೀದಿಸಿರುವುದು ಕಂಡ ಸ್ಥಳೀಯರು, ಮಗು ಕಾಣೆ ಆಗಿದೆ ಎನ್ನುವುದನ್ನೂ ಗಮನಿಸಿದ್ದಾರೆ. ಹೀಗಾಗಿ ಅನುಮಾನದಿಂದ ಸ್ಥಳೀಯರು, ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರೂ ದಂಪತಿಗಳ ಕರ್ಮಕಾಂಡ ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:ಮಗು ಮಾರಾಟ ಮಾಡುವವರಿದ್ದಾರೆ ಹುಷಾರ್!; ಅನಾಥ ಮಕ್ಕಳ ರಕ್ಷಣೆ ಸೋಗಲ್ಲಿ ದಂಧೆ
ಸ್ಥಳೀಯರ ಪ್ರಕಾರ, ಮಗಳನ್ನು ಹೊಂದಿರುವ ಈ ದಂಪತಿ, ಹನಿಮೂನ್​ಗಾಗಿ ರಾಜ್ಯದಾದ್ಯಂತ ಪ್ರಯಾಣಿಸಿದ್ದು ಡಿಘಾ ಮತ್ತು ಮಂದರ್ಮಾನಿ ಬೀಚ್​ಗಳು ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದರು.
ಈ ಘಟನೆ ಭಾನುವಾರ (ಜುಲೈ 24) ನಲ್ಲಿ ಬೆಳಕಿಗೆ ಬಂದಿದ್ದರೂ, ಮಗುವಿನ ಮಾರಾಟ ಕನಿಷ್ಠ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಜಯದೇವ್ ಘೋಷ್ ಮತ್ತು ಸತಿ ಎಂದು ಗುರುತಿಸಲ್ಪಟ್ಟ ದಂಪತಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸದ್ಯ ಮಗುವನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ:ಮಗು ಮಾರಾಟ ಪ್ರಕರಣ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ
“ಜಾಯೆವ್ ಘೋಷ್ ಮತ್ತು ಸತಿ ತಮ್ಮ ಮಗುವನ್ನು ರೂ. 2 ಲಕ್ಷಕ್ಕೆ ಮಾರಿದ್ದಾರೆ. ನಂತರ, ಅವರು ಇದೇ ಹಣದಿಂದ ಹನಿಮೂನ್​ಗಾಗಿ ಡಿಘಾ ಸಮುದ್ರ ಬೀಚ್​ನಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಅವರು ಮೊಬೈಲ್ ಫೋನ್ ಸಹ ಖರೀದಿಸಿದರು, ಎಂದು “ಲಕ್ಷ್ಮೀ ಕುಂಡು, ನೆರೆಯವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ:ಹೆತ್ತ ಮಗುವನ್ನೇ 800 ರೂ.ಗೆ ಮಾರಾಟ ಮಾಡಿದ ತಾಯಿ…
ಅಷ್ಟಕ್ಕೇ ನಿಲ್ಲದ ಪಕ್ಕದ ಮನೆ ಲಕ್ಷ್ಮೀ ಕುಂಡು, ಸತಿ ಗಾಂಜಾ ಹಾಗೂ ಚರಸ್​ಗಾಗಿ ಮಗುವನ್ನು ಮಾರಾಟ ಮಾಡಿದ್ದು, ಅದರೊಂದಿಗೆ ಪರಪುರುಷರನ್ನೂ ಮನೆಗೆ ಕರೆದುಕೊಂಡು ಬರುತ್ತಿದ್ದಳು ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 4 =
Remember me
