ಸೂರತ್​:ಒಂದು ತಿಂಗಳು ಹಿಂದಷ್ಟೇ ತಮ್ಮ ಮಕ್ಕಳ ಮದವೆಗೂ ಮುನ್ನಾ ಓಡಿ ಹೋಗಿ, ಒಂದು ವಾರದ ಬಳಿಕ ಮತ್ತೆ ಕುಟುಂಬ ಸೇರಿದ್ದ ಬೀಗ-ಬೀಗತಿ ಇದೀಗ ಮತ್ತೊಮ್ಮೆ ನಾಪತ್ತೆಯಾಗಿದ್ದಾರೆ ಎಂದು ಭಾನುವಾರ ವರದಿಯಾಗಿದೆ.
ಸೂರತ್​ ಮೂಲದ ಹಿಮ್ಮತ್​ ಪಾಂಡವ್​(46) ಮಗನಿಗೂ ಹಾಗೂ ನವಸಾರಿ ಮೂಲದ ಶೋಭನಾ ರಾವಲ್​(43) ಮಗಳಿಗೂ ಜನವರಿಯಲ್ಲೇ ಮದುವೆ ನಿಶ್ಚಯವಾಗಿತ್ತು. ವಿವಾಹ ಸಮಾರಂಭದ ಸಿದ್ಧತೆಯಲ್ಲಿದ್ದ ಎರಡು ಕುಟುಂಬಗಳಿಗೂ ಅಕ್ಷರಶಃ ಶಾಕ್​ ಎದುರಾಗಿತ್ತು. ಹಿಮ್ಮತ್​ ಪಾಂಡವ್,​ ಬೀಗತಿ ಶೋಭನಾ ರಾವಲ್​ ಜತೆ ಮದುವೆಗೂ ಮುನ್ನ ಓಡಿ ಹೋಗಿದ್ದರು.
ಇದನ್ನೂ ಓದಿ:ವರನ ತಂದೆಯೊಂದಿಗೆ ವಧುವಿನ ತಾಯಿ ಪರಾರಿ: ಮದುವೆ ತಯಾರಿಯಲ್ಲಿದ್ದ ಎರಡು ಕುಟುಂಬಕ್ಕೂ ಶಾಕ್​​!
ಎರಡು ವಾರದ ಬಳಿಕ ಇಬ್ಬರು ತಮ್ಮ ಮನೆಗಳಿಗೆ ಹಿಂತಿರುಗಿದ್ದರು. ಇದೀಗ ಮತ್ತೊಮ್ಮೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಇಬ್ಬರು ಮನೆಯನ್ನು ಬಿಟ್ಟಿದ್ದಾರೆ. ಅವರಿಬ್ಬರು ಸೂರತ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕಳೆದ ಬಾರಿ ನಾಪತ್ತೆ ದೂರು ದಾಖಲಾಗಿತ್ತು. ಆದರೆ, ಈ ಬಾರಿ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ​
ಅಂದಹಾಗೆ ಹಿಮ್ಮತ್​ ಪಾಂಡವ್​ ಸೂರತ್​ನ ಕತರ್​ಗಾಮ್​ನಲ್ಲಿ ಜವಳಿ ಉದ್ಯಮಿಯಾಗಿದ್ದಾರೆ. ಶೋಭನಾ ಗೃಹಣಿಯಾಗಿದ್ದರು. ಇಬ್ಬರ ಮಕ್ಕಳ ಮದುವೆ ಫೆಬ್ರವರಿ ಎರಡನೇ ವಾರದಲ್ಲಿ ನಿಗದಿಯಾಗಿತ್ತು. ಈ ಮುಂಚೆ ಜನವರಿ 10ರಿಂದ ಅವರಿಬ್ಬರು ಕಾಣೆಯಾಗಿದ್ದರೆ ದೂರು ನೀಡಲಾಗಿತ್ತು. ಒಂದು ವಾರದ ಬಳಿಕ ಮರಳಿ ಬಂದಿದ್ದರು. ಇದೀಗ ಮತ್ತೆ ನಾಪತ್ತೆಯಾಗಿದ್ದು ಎರಡು ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ:ವರನ ತಂದೆಯಂದಿಗೆ ವಧುವಿನ ತಾಯಿ ನಾಪತ್ತೆ ಪ್ರಕರಣ: ಓಡಿಹೋಗಿದ್ದ ಜೋಡಿ ಏಕಾಏಕಿ ಪೊಲೀಸರಿಗೆ ಶರಾಣಾಗಿದ್ದೇಕೆ?
ಚಿಕ್ಕಂದಿನಿಂದಲೇ ಪರಿಚಯವಿತ್ತುಹಿಮ್ಮತ್​ ಪಾಂಡವ್​ ಹಾಗೂ ಶೋಭನಾ ರಾವಲ್​​ ಮೊದಲೇ ಪರಿಚಿತರಾಗಿದ್ದರು. ಅವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು ಎಂದು ಕಳೆದ ಬಾರಿಯೇ ಪೊಲೀಸ್​ ತನಿಖಾ ವೇಳೆ ವೇಳೆ ತಿಳಿದುಬಂದಿತ್ತು. ಬಹಳ ಹಿಂದೆ ಇಬ್ಬರು ಸೂರತ್​ ನಗರದ ಕತರಾಮ್​ ಏರಿಯಾದಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದರು. ಅನೇಕ ಬಾರಿ ಓಡಿಹೋಗಿ ಮದುವೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಆಕೆಯನ್ನು ಡೈಮಂಡ್​ ದಲ್ಲಾಳಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
