ಚಂಡಿಗಢಪ್ರೀತಿಸಿ, ಮನೆಯವರ ಒಪ್ಪಿಗೆಯಿಲ್ಲ ಎಂದು ಓಡಿ ಹೋಗಿ ಮದುವೆಯಾದ ಎರಡು ಜೋಡಿಗಳಿಗಳು ರಕ್ಷಣೆ ಕೊಡಿ ಎಂದು ಹೈಕೋರ್ಟ್​ಗೆ ಹೋದರೆ, ಅವರಿಗೆ ಭರ್ಜರಿ ಶಾಕ್​ ಎದುರಾಗಿದೆ. ನಿರೀಕ್ಷೆಯನ್ನೇ ಮಾಡಿರದಂಥ ತೀರ್ಪನ್ನು ನ್ಯಾಯಾಧೀಶರು ನೀಡಿದ್ದಾರೆ.
ಇದು ಪ್ರತ್ಯೇಕ ಪ್ರಕರಣವಾದರೂ ಒಂದೇ ಸ್ವರೂಪದ್ದು. ಎರಡೂ ಜೋಡಿಗಳು ಪ್ರೀತಿಸಿ, ಓಡಿಹೋಗಿ ಮದುವೆಯಾದವರು. ಅವರ ಮದುವೆಗೆ ಪಾಲಕರು, ಸಂಬಂಧಿಕರ ವಿರೋಧವಿತ್ತು. ಏನೇನೆಲ್ಲ ಗಲಾಟೆಯಾಗಿದೆಯೋ ಏನೋ, ಕದ್ದು ಮದುವೆಯಾಗಿ ಸೀದಾ ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ಗೆ ಹೋದರು.ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ರಕ್ಷಣೆ ಕೊಡಿ ಎಂದು ಮನವಿ ಮಾಡಿದರು. ಮದುವೆಯಾದ ಫೋಟೋಗಳನ್ನು, ದಾಖಲೆಗಳನ್ನೆಲ್ಲ ಕೋರ್ಟ್​ಗೆ ಒಪ್ಪಿಸಿದರು. ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ್ದು ನ್ಯಾಯಾಧೀಶ ಹರಿ ಪಾಲ್​ ವರ್ಮಾ.
ಇದನ್ನೂ ಓದಿ:ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್​​ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ
ಮೊದಲ ಜೋಡಿಯ ವಿಚಾರಣೆ ಕೈಗೆತ್ತಿಕೊಂಡ ಅವರು, ಮದುವೆಯ ಫೋಟೋಗಳನ್ನು ನೋಡಿದರು. ದಾಖಲೆಗಳನ್ನೂ ಸೂಕ್ಷ್ಮವಾಗಿ ಗಮನಿಸಿದರು. ಹಾಗೇ, ಅವರಿಬ್ಬರಿಗೂ ರಕ್ಷಣೆಯ ಭರವಸೆ ನೀಡಿ ತೀರ್ಪು ನೀಡಿದರು.ಆದರೆ ಜತೆಗೆ ಮತ್ತೊಂದು ಟ್ವಿಸ್ಟ್ ನೀಡಿದರು. ಮದುವೆ ಫೋಟೋದಲ್ಲಿ ಈ ಜೋಡಿ ಮಾಸ್ಕ್​ ಧರಿಸಿರಲಿಲ್ಲ. ಇವರಿಬ್ಬರ ಮದುವೆಯಲ್ಲಿ ಪಾಲ್ಗೊಂಡವರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿರಲಿಲ್ಲ. ಸಮಾಂಭಗಳಲ್ಲಿ ಅನುಸರಿಸಬೇಕಾದ ನಿಯಮಗಳು ಉಲ್ಲಂಘನೆಯಾಗಿದ್ದು, ಫೋಟೋದಲ್ಲಿ ಕಾಣಿಸುತ್ತಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ನಿಮಗೆ ರಕ್ಷಣೆ ನೀಡುತ್ತೇವೆ. ಆದರೆ ನೀವು 10,000 ರೂಪಾಯಿ ದಂಡ ತುಂಬಬೇಕು. ಕೊವಿಡ್​-19 ನಿಯಮಗಳ ಉಲ್ಲಂಘನೆಗಾಗಿ ಈ ದಂಡ. ಇನ್ನು 15ದಿನಗಳಲ್ಲಿ ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಣ ಡಿಪೋಸಿಟ್ ಮಾಡಬೇಕು. ಹಾಗೇ, ಈ ದಂಪತಿ ನೀಡಿದ ಹಣವನ್ನು ಸಾರ್ವಜನಿಕರಿಗೆ ಮಾಸ್ಕ್​ ವಿತರಣೆ ಮಾಡಲು ಬಳಸಬೇಕು ಎಂದು ಜಡ್ಜ್​ ಆದೇಶ ನೀಡಿದರು.
ಅದೇ ರೀತಿ ಇನ್ನೊಂದು ಪ್ರಕರಣದಲ್ಲೂ ಅರ್ಜಿದಾರ ಜೋಡಿಗೆ ಹೀಗೇ ಸೂಚನೆ ನೀಡಿದರು. ನವಜೋಡಿಗೆ ರಕ್ಷಣೆಯನ್ನು ನೀಡಲು ಪೊಲೀಸ್​ ಇಲಾಖೆಗೆ ಸೂಚಿಸುವ ಜತೆ ಅವರಿಗೆ 5000 ರೂ.ದಂಡ ವಿಧಿಸಿದರು. ಈ ಮದುವೆಯಲ್ಲಿ ಅಷ್ಟೊಂದು ಜನ ಪಾಲ್ಗೊಂಡಿರಲಿಲ್ಲ. ಆದರೆ ಜೋಡಿ ಮಾಸ್ಕ್​ ಧರಿಸಿರಲಿಲ್ಲ. ಹೀಗಾಗಿ ಕಡಿಮೆ ಮೊತ್ತದ ದಂಡ ವಿಧಿಸಲಾಗಿದೆ ಎಂದು ಜಡ್ಜ್​ ಹೇಳಿದ್ದಾರೆ. ಇವರಿಗೂ ಅಷ್ಟೇ, ಅವರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಣ ಇಡಲು ತಿಳಿಸಿದ್ದು, ಅದನ್ನೂ ಮಾಸ್ಕ್​ ವಿತರಣೆಗೆ ಬಳಸಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಕರಾಚಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಯಾಗ್​ನಲ್ಲಿ ಸಿಕ್ಕ ವಸ್ತುವನ್ನು ನೋಡಿ ತಬ್ಬಿಬ್ಬಾದ ರಕ್ಷಣಾ ಸಿಬ್ಬಂದಿ
ಕೊವಿಡ್​-19 ಮುನ್ನೆಚ್ಚರಿಕಾ ಕ್ರಮವಾಗಿ ಏ.9ರಿಂದಲೇ ಪಂಜಾಬ್​ನಲ್ಲಿ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಜನರು ಯಾವುದೇ ಕಾರಣಕ್ಕೆ ಮನೆಯಿಂದ ಹೊರಗೆ ಬರಬೇಕು ಎಂದರೂ ಮಾಸ್ಕ್ ಧರಿಸಿಯೇ ಬರಬೇಕು ಎಂದು ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ. (ಏಜೆನ್ಸೀಸ್​)
‘ಇಂಡಿಯಾ’ನೋ, ‘ಭಾರತ’ನೋ? ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
