ನವದೆಹಲಿ:ಪ್ರೀತಿ ಹುಟ್ಟಿದಾಗ ಗಾಳಿಯಲ್ಲಿ ತೇಲಾಡಿದಂತೆ ಆಗುತ್ತದೆ ಎಂಬ ವಾಕ್ಯವನ್ನು ನಾವು ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ಪ್ರೇಮಿಗಳು ಕೈ ಕೈ ಹಿಡಿದು ರಸ್ತೆಗಳಲ್ಲಿ ಸುತ್ತಾಡುತ್ತ ಉದ್ಯಾನವನಗಳಲ್ಲಿ ಕಾಲ ಕೆಳಯುವುದನ್ನು ನಾವು ನೋಡಿದ್ದೇವೆ. ಆದರೆ, ಉದ್ಯಾನವನಗಳು ಸಾರ್ವಜನಿಕ ಸ್ಥಳವಾಗಿದ್ದು, ಇಲ್ಲಿ ಪ್ರೇಮಿಗಳು ಕಾಣಿಸಿಕೊಂಡರೆ ಅದಕ್ಕೆ ಸಾರ್ವಜನಿಕರು ಆಕ್ಷೇಪಿಸುತ್ತಾರೆ. ಅದಕ್ಕೆ ಪೂರಕವೆಂಬಂತೆ ಘಟನೆಯೊಂದು ನಡೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಛತ್ತೀಸ್​ಗಢದ ದುರ್ಗ್​​​ ಜಿಲ್ಲೆಯ ವೈಶಾಲಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಿಕೇಶ್​​ ಸೇನ್​ ಬಳಿ ಪ್ರೇಮಿಗಳು ಈ ಬೇಡಿಕೆಯನ್ನು ಇರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಹಲವರು ಪ್ರೇಮಿಗಳ ನಡೆಗೆ ಕಿಡಿಕಾರಿದ್ದಾರೆ.
ವೈರಲ್​ ಆಗಿರುವ ವಿಡಿಯೋವನ್ನು ನೋಡುವುದಾದರೆ ಬಿಜೆಪಿ ಶಾಸಕ ರಿಕೇಶ್​​ ಸೇನ್​ ಉದ್ಯಾನವನ ಒಂದರ ಮೇಲೆ ಏಕಾಏಕಿ ದಾಳಿ ಮಾಡುತ್ತಾರೆ. ಈ ವೇಳೆ ಅಲ್ಲಿದ್ದ ಕೆಲ ಪ್ರೇಮಿಗಳು ದಿಕ್ಕಾಪಾಲಾಗಿ ಓಡಲು ಶುರು ಮಾಡುತ್ತಾರೆ. ಬಳಿಕ ಪ್ರೇಮಿಗಳ ಬಳಿ ಹೋದ ಶಾಸಕರು ಮೊದಲು ಪಾರ್ಕಿನಿಂದ ಹೊರಹೋಗುವಂತೆ ಹೇಳುತ್ತಾರೆ. ಈ ವೇಳೆ ಶಾಸಕರ ನಡೆಗೆ ಆಕ್ಷೇಪಿಸುವ ಯುವಕನೊಬ್ಬ ನಾವೇಕೆ ಹೊರಹೋಗಬೇಕು ನೀವೂ ಈಗಾಗಲೇ ಇಲ್ಲಿದ್ದ ಎರಡು OYO ರೂಮ್​ಗಳನ್ನು ಮುಚ್ಚಿಸಿದ್ದೀರಾ, ಇಲ್ಲಿಗೆ ಬಂದರೆ ಇಲ್ಲಿಂದಲ್ಲೂ ಓಡಿಸುತ್ತಿದ್ದೀರಾ ಎಂದು ಕೇಳಿದ್ದಾನೆ.
MLA रिकेश सेन@rikesh_senने गाॅर्डन में मारा छापा…उल्टा विधायक को गरियाने लड़कें-लड़कियां…रेड का LIVE VIDEOOYO खुलवाना चाहती है लड़कियां, MLA रिकेश से लगाई गुहार– विधायक रिकेश से लड़के ने कहा- आपकी प्रॉब्लम क्या है…?– नेहरू गाॅर्डन में रेड का LIVE VIDEO देखिए#bhilaipic.twitter.com/12D1C0e8w1
ಇದನ್ನೂ ಓದಿ:ಈತ ಯಾವುದಕ್ಕೂ ಪ್ರಯೋಜನವಿಲ್ಲದವ; ಸ್ಟಾರ್​ ಆಟಗಾರನ ಬಗ್ಗೆ ಸೆಹ್ವಾಗ್​ ಹೀಗಂದಿದ್ಯಾಕೆ?
ಇದಕ್ಕೆ ಉತ್ತರಿಸಿದ ಶಾಸಕ ಸೇನ್​ OYO ಇಲ್ಲದಿದ್ದರೆ ಏನಂತೆ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ ಟೈಮ್​ ಪಾಸ್​ ಮಾಡಿ ಅದು ಬಿಟ್ಟು ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಯಾಕೆ ಕಾಲಹರಣ ಮಾಡುತ್ತೀರಿ ಎಂದು ಬುದ್ದಿವಾದ ಹೇಳಿ ಪ್ರೇಮಿಗಳನ್ನು ಹೊರ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಭಿಲಾಯಿ ನಗರದಲ್ಲಿರುವ ಈ ಪಾರ್ಕ್​​ನ ಅಕ್ಕಪಕ್ಕದ ಜನರು ಲವರ್ಸ್​​​ಗಳು ಈ ಪಾರ್ಕ್​​ಗೆ ಭೇಟಿ ನೀಡುವ ಕಾರಣ ನಮಗೆ ತೊಂದರೆ ಆಗುತ್ತಿದೆ ಎಂದು ಶಾಸಕರಿಗೆ ದೂರು ನೀಡಿದ್ದಾರೆ. ಹಾಗಾಗಿ ಶಾಸಕರು ಈ ಪಾರ್ಕ್​​ಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಇದೆ ಶಾಸಕರು OYO ಹೋಟೆಲ್​​​ ಮೇಲೆ ದಾಳಿ ಮಾಡಿದ್ದರು. ನಂತರ ಎರಡು ಹೋಟೆಲ್​​ಗಳನ್ನು ಮುಚ್ಚಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + eleven =
Remember me
