ನವದೆಹಲಿ:ತಮ್ಮ ರೋಗಿಗಳಿಗೆ ಟಿಲಿಕನ್ಸಲ್ಟೇಷನ್​ ಮೂಲಕ ವೈದ್ಯಕೀಯ ಸಲಹೆಗಳನ್ನು ಕೊಡುತ್ತಿರುವ ವೈದ್ಯರೆಲ್ಲರೂ ಕಡ್ಡಾಯವಾಗಿ ಟೆಲಿಮೆಡಿಸಿನ್​ ತರಬೇತಿಗೆ ಒಳಪಡಬೇಕಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಇದಕ್ಕಾಗಿ ಕೋರ್ಸ್​ ಅನ್ನು ವಿನ್ಯಾಸಗೊಳಿಸಿದೆ. ಇಂಥ ಕೋರ್ಸ್​ ಆರಂಭಿಸುವ ಕುರಿತು ಅದರ ರೂಪುರೇಷೆಯನ್ನು ನಿರ್ಧರಿಸಲು ಭಾರತೀಯ ವೈದ್ಯಕೀಯ ಮಂಡಳಿ ಕಳೆದ ಮೇನಲ್ಲಿ ಗರ್ವನರ್​ಗಳ ಮಂಡಳಿಯ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗುತ್ತಿದೆ.
ನಮಗೆ ಟೆಲಿಮೆಡಿಸಿನ್​ ಸರ್ಟಿಫಿಕೇಷನ್​ ಕೋರ್ಸ್​ನ ರೂಪುರೇಷೆ ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು. aದು ಸಿದ್ಧವಾಗಿದ್ದು, ಶೀಘ್ರದಲ್ಲೇ aದನ್ನು ಎಂಸಿಐ-ಬಿಒಜಿಗೆ ಸಲ್ಲಿಸಲಾಗುವುದು ಎಂದು ಬೆಂಗಳೂರು ನಿಮ್ಹಾನ್ಸ್​ನ ನಿರ್ದೇಶಕ ಹಾಗೂ ಗರ್ವನರ್​ಗಳ ಮಂಡಳಿಯ ಮುಖ್ಯಸ್ಥ ಡಾ. ಬಿ.ಎನ್​. ಗಂಗಾಧರ್​ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಅತ್ಯಂತ ಐಷಾರಾಮಿ ತಾಣ ಗೋವಾ ಇಂದಿನಿಂದ ದೇಸೀ ಪ್ರವಾಸಿಗರಿಗೆ ಮುಕ್ತ
ಈ ಕೋರ್ಸ್​ ಅನ್ನು ಆನ್​ಲೈನ್​ ಶಿಕ್ಷಣದ ಮೂಲಕ ಒದಗಿಸಲಾಗುತ್ತದೆ. ಬಹುತೇಕ ಅದು ಅಲ್ಪಾವಧಿಯದ್ದಾಗಿರುತ್ತದೆ. ವೈದ್ಯಕೀಯ ಸಲಹೆ ನೀಡುವಾಗ ರೋಗಿಗಳೊಂದಿಗೆ ಹೇಗೆಲ್ಲ ನಡೆದುಕೊಳ್ಳಬೇಕು ಎಂಬ ಬಗ್ಗೆ ಈ ಕೋರ್ಸ್​ನಲ್ಲಿ ತಿಳಿಸಿಕೊಡಲಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ವಿಶೇಷವಾದ ಪದವಿಯನ್ನು ಹೊಂದಿಲ್ಲದ ವೈದ್ಯರು ಕೂಡ ಇಮೇಲ್​, ಫೋನ್​, ಆ್ಯಪ್​, ಚಾಟ್​ ಅಥವಾ ವಿಡಿಯೋ ಮೂಲಕ ತಮ್ಮ ರೋಗಿಗಳಿಗೆ ವೈದ್ಯಕೀಯ ಸಲಹೆ ನೀಡಬಹುದಾಗಿದೆ.
ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ, 28 ಜನರ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eleven =
Remember me
