ಕೊಚ್ಚಿ:ಹಿಂದುಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಭಾವನೆಗಳನ್ನು, ನಡವಳಿಕೆಗಳನ್ನು ಪ್ರದರ್ಶಿಸುತ್ತಿದ್ದ ರೆಹಾನಾ ಫಾತಿಮಾಗೆ ದೃಶ್ಯ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸದಂತೆ ಕೇರಳ ಹೈಕೋರ್ಟ್ ತಾತ್ಕಾಲಿಕ ನಿಷೇಧ ಹೇರಿದೆ.
ಸೋಮವಾರ, ಶನಿವಾರ ಹಾಜರಾಗಬೇಕು..
ರೆಹಾನಾ ಪ್ರತಿ ಸೋಮವಾರ ಮತ್ತು ಶನಿವಾರ ಬೆಳಗ್ಗೆ 9 ರಿಂದ 10ರೊಳಗೆ ಪತ್ತನಂತಿಟ್ಟದಲ್ಲಿರುವ ವಿಚಾರಣಾಧಿಕಾರಿ ಎದುರು ಹಾಜರಾಗಿ ಸಹಿ ಹಾಕಬೇಕು. ಆಕೆ ಎರ್ನಾಕುಲಂನಲ್ಲಿ ಇದ್ದರೆ ಅಲ್ಲಿ ಕೂಡ ಹೋಗಿ ಸಹಿ ಹಾಕಬೇಕು. ಈ ರೀತಿ ಮೂರು ತಿಂಗಳು ಮಾಡಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಎಂದು ಕೋರ್ಟ್ ರೆಹಾನಾಗೆ ನಿರ್ದೇಶಿಸಿದೆ.
ಅಯ್ಯಪ್ಪ ಭಕ್ತರ ಭಾವನೆಗಳನ್ನು ಘಾಸಿಗೊಳಿಸುವಂತೆ ಫೇಸ್​ಬುಕ್ ಪೋಸ್ಟ್ ಮಾಡಿದ 2018ರ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ತನಕ ರೆಹಾನಾ ಫಾತಿಮಾ ಯಾವುದೇ ಭಾವನೆಗಳನ್ನು, ಅಭಿಪ್ರಾಯಗಳನ್ನು ದೃಶ್ಯ ಹಾಗೂ ಇಲೆಕ್ಟ್ರೋನಿಕ್ ಮೀಡಿಯಾ ಮೂಲಕ ವ್ಯಕ್ತಪಡಿಸುವಂತಿಲ್ಲ ಎಂದು ನ್ಯಾಯಮೂರ್ತಿ ಸುನಿಲ್ ಥಾಮಸ್ ಆದೇಶ ನೀಡಿದ್ದಾರೆ.
ಇದನ್ನೂ ಓದಿ:ನಾಲ್ಕು ಗೋಡೆಗಳ ನಡುವೆ ಇರಲಿ: ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಹೈಕೋರ್ಟ್​ ಶಾಕ್! ​
2018ರ ಕೇಸ್​ನಲ್ಲಿ ರೆಹಾನಾಗೆ ಜಾಮೀನು ಲಭಿಸಿದೆ. ಆದರೆ, ಆಕೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದು, ಅಡುಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಆಕೆಯ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ದೂರು ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ಥಾಮಸ್ ನಿಷೇಧದ ಈ ತೀರ್ಪು ನೀಡಿದರು.
https://www.vijayavani.net/sabarimala-rehana-fathima-suspend-arrest-highcourt/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 6 =
Remember me
