ಬಿಹಾರ್ ಶರೀಫ್ (ಬಿಹಾರ): ಕರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದ ಬಡವರಿಗಾಗುತ್ತಿರುವ ತೊಂದರೆಗಳೇನು ಎಂಬುದು ಇಲ್ಲಿನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಿಂದ ಬಹಿರಂಗಗೊಂಡು ಎಲ್ಲರ ಕಣ್ಣುಗಳನ್ನು ತೇವಗೊಳಿಸಿದೆ.
ಬಿಹಾರದ ನಳಂದಾ ಜಿಲ್ಲೆಯ ಬಿಹಾರ್ ಶರೀಫ್‌ನಲ್ಲಿ ನಡೆದ ಘಟನೆ ಇದು. ಇಸ್ಲಾಂಪುರದ ಅಪ್ರಾಪ್ತ ವಯಸ್ಕ ಹುಡುಗನೊಬ್ಬನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿ ಬಾಲಾಪರಾಧಿ ನ್ಯಾಯಾಲಯದ ನ್ಯಾಯಾಧೀಶ ಮಾನವೇಂದ್ರ ಮಿಶ್ರಾ ಅವರ ಎದುರು ಹಾಜರು ಪಡಿಸಿದ್ದರು.
ನ್ಯಾಯಾಧೀಶರು ವಿಚಾರಣೆ ವೇಳೆ ಆತನನ್ನು ತರಾಟೆಗೆ ತೆಗೆದುಕೊಂಡಾಗ ಆತ, ‘‘ಹಲವಾರು ದಿನಗಳಿಂದ ಕೆಲಸವೂ ಇಲ್ಲ, ಊಟವೂ ಇಲ್ಲ. ನಾನು ಹೇಗೋ ಹಸಿವು ತಡೆದುಕೊಳ್ಳಬಲ್ಲೆ. ಮಾನಸಿಕ ಅಸ್ವಸ್ಥಳಾದ ನನ್ನ ತಾಯಿ ಹೇಗೆ ತಡೆದುಕೊಂಡಾಳು. ಆಕೆಗಾಗಿ ನಾನು ಕಳವು ಮಾಡಬೇಕಾಯಿತು…’’ ಎಂದು ವಿವರಿಸಿದ.
ಈ ಹುಡುಗನ ಹೆಸರು ಕಿಶೋರ್. ಆತನ ತಂದೆ ಕೆಲ ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ಆ ಆಘಾತ ತಾಳದೆ ತಾಯಿ ಮಾನಸಿಕ ಅಸ್ವಸ್ಥಳಾಗಿದ್ದಾಳೆ. ಕಿಶೋರ್‌ಗೆ ಒಬ್ಬ ತಮ್ಮನೂ ಇದ್ದಾನೆ. ಅವರನ್ನು ಸಾಕುವ ಜವಾಬ್ದಾರಿ ಕಿಶೋರ್ ಮೇಲೆ ಬಿದ್ದಿದೆ. ಕೊಳೆಗೇರಿಯೊಂದರಲ್ಲಿ ಇವರ ಮನೆ ಇದೆ.
ಆತನ ಕುಟುಂಬದ ಕಷ್ಟವನ್ನು ಕೇಳಿ ಸ್ವತಃ ನ್ಯಾಯಾಧೀಶರಿಗೂ ಮರುಕ ಉಂಟಾಯಿತು. ಅವರು ಆತನಿಗೆ ಶಿಕ್ಷೆ ನೀಡುವ ಬದಲು ದವಸ ಧಾನ್ಯಗಳನ್ನು ತರಿಸಿಕೊಟ್ಟರು. ಆತನ ತಾಯಿಗೆ ಬಟ್ಟೆಯನ್ನೂ ಕೊಡಿಸಿ ಮಾನವೀಯತೆ ಮೆರೆದರು.
ಮುಂದಿನ ದಿನಗಳಲ್ಲಿಯೂ ಆ ಕುಟುಂಬಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯ ಮತ್ತು ಸರ್ಕಾರಿ ಯೋಜನೆಗಳ ಸಂಪೂರ್ಣ ಲಾಭವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಅಷ್ಟೇ ಅಲ್ಲ, ಆತನ ವರ್ತನೆ ಮುಂದೆ ಹೇಗಿರುತ್ತದೆ ಎಂಬುದರ ಕುರಿತು ತಮಗೆ ಪ್ರತಿ 4 ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕೆಂದೂ ಆದೇಶಿಸಿದರು. ಆ ಕುಟುಂಬಕ್ಕೆ ಪಡಿತರ ಚೀಟಿ, ಆಧಾರ್ ಕಾರ್ಡ್, ಬಾಲಕನ ತಾಯಿಗೆ ವಿಧವಾ ವೇತನ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಜೆ ಮಂಜೂರಾಗಬೇಕು ಎಂದರೆ ಈ ಅಧಿಕಾರಿಗೆ ಏನು ಕೊಡಬೇಕು? ವೈರಲ್ ಆಯ್ತು ಸಂಭಾಷಣೆಯ ಆಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 8 =
Remember me
